ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತ್ರ ರಕ್ಷಣೆ: ಮುನ್ನೆಚ್ಚರಿಕೆಯೇ ಮದ್ದು

Last Updated 21 ಅಕ್ಟೋಬರ್ 2022, 21:10 IST
ಅಕ್ಷರ ಗಾತ್ರ

ಬೆಂಗಳೂರು: ದೀಪಾವಳಿ ಸಂದರ್ಭದಲ್ಲಿ ಸಿಡಿಸುವ ಪಟಾಕಿಯಿಂದಾಗಿ ಕಣ್ಣುಗಳಿಗೆ ಹಾನಿಯಾಗುತ್ತಿರುವ ಘಟನೆಗಳು ಪ್ರತಿ ವರ್ಷ ನಡೆಯುತ್ತಿದೆ. ಹೀಗಾಗಿ,ಪಟಾಕಿ ಸಿಡಿಸುವಾಗ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಲಯನ್ಸ್‌ ಇಂಟರ್‌ನ್ಯಾಷನಲ್‌ ಐ ಬ್ಯಾಂಕ್‌ ಸಲಹೆ ನೀಡಿದೆ.

ಪಟಾಕಿ ಸಿಡಿಸುವಾಗ ಮಕ್ಕಳೇ ಹೆಚ್ಚು ಅನಾಹುತಕ್ಕೆ ಸಿಲುಕುತ್ತಿದ್ದಾರೆ. ಕೈ ಮತ್ತು ಕಣ್ಣುಗಳಿಗೆ ಗಾಯವಾಗುವುದು ಸಾಮಾನ್ಯವಾಗಿದೆ. ಆದ್ದರಿಂದ, ಪಟಾಕಿ ಸಿಡಿಸಲು ಮಕ್ಕಳಿಗೆ ಅವಕಾಶ ನೀಡಬೇಡಿ ಎಂದು ತಿಳಿಸಿದೆ.

ಪಟಾಕಿಗಳನ್ನು ಸಾಧ್ಯವಾದಷ್ಟು ಸಿಡಿಸದೆ ಇರುವುದು ಅತ್ಯುತ್ತಮ. ಸುರಕ್ಷಿತವಾದ ಮತ್ತು ಸಂಭ್ರಮದ ದೀಪಾವಳಿ ಆಚರಿಸಿ. ಈ ಮೂಲಕ ಆರೋಗ್ಯ ಮತ್ತು ಪರಿಸರ ಕಾಪಾಡಲು ಆದ್ಯತೆ ನೀಡಿ. ಪಟಾಕಿ ಸಿಡಿಸಿಕಣ್ಣಿಗೆ ಗಾಯಗಳಾದ ಕೆಲವು ಸಂದರ್ಭಗಳಲ್ಲಿ ದೃಷ್ಟಿಯನ್ನು ಸಹ ಕಳೆದುಕೊಂಡ ಉದಾಹರಣೆಗಳಿವೆ. ಪಟಾಕಿ ಸಿಡಿಸುವುದರಿಂದ ಉಂಟಾಗುವ ಹೊಗೆಯಿಂದಲೂ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಚಿಕಿತ್ಸೆಗಿಂತಲೂ ಮುಂಜಾಗ್ರತೆಯೇ ಮದ್ದು ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಲಯನ್ಸ್‌ ಇಂಟರ್‌ನ್ಯಾಷನಲ್‌ ಐ ಬ್ಯಾಂಕ್‌ನ ವೈದ್ಯಕೀಯ ನಿರ್ದೇಶಕ ಡಾ. ರೇಖಾ ಗ್ಯಾನ್‌ಚಂದ್‌ ಅವರು ತಿಳಿಸಿದ್ದಾರೆ.

ನೇತ್ರದಾನ ಮಾಡುವವರು ಮೊಬೈಲ್‌ ಸಂಖ್ಯೆ: 9740556666. ವೆಬ್‌ಸೈಟ್‌: bwlionseyehospital.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT