ಶನಿವಾರ, ಜೂನ್ 19, 2021
22 °C

ಕಾಸರಗೋಡು ಯವತಿ ಮೇಲೆ ಲೈಂಗಿಕ ದೌರ್ಜನ್ಯ: ಸಿಐಡಿ ತನಿಖೆಗೆ ಸಂಸದೆ ಶೋಭಾ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಕಾಸರಗೋಡಿನ ಯುವತಿ ಮೇಲೆ ನಡೆದ ದೌರ್ಜನ್ಯ ಪ್ರಕರಣವನ್ನು ಸಿಐಡಿಗೆ ವಹಿಸಬೇಕು ಎಂದು ಆಗ್ರಹಿಸಿ ಸಂಸದೆ ಶೋಭ ಕರಂದ್ಲಾಜೆ ಡಿಜಿಪಿ ನೀಲಮಣಿರಾಜು ಅವರಿಗೆ ಸೋಮವಾರ ದೂರು ನೀಡಿದರು.

ಬಳಿಕ ಮಾತನಾಡಿದ ಅವರು, ಆರೋಪಿಗಳು ಯುವತಿ ಮೇಲೆ ಬೆಂಗಳೂರು, ಮಂಗಳೂರು, ಕಾಸರಗೋಡಿನಲ್ಲಿ ದೌರ್ಜನ್ಯ ಎಸಗಿದ್ದಾರೆ. ಬೆಂಗಳೂರು ಮೀರಿ ಹೊರ ವ್ಯಾಪ್ತಿಯಲ್ಲಿ ಕೃತ್ಯ ನಡೆದಿರುವುದರಿಂದ ಪ್ರಕರಣವನ್ನು ಬೆಂಗಳೂರು ಪೊಲೀಸರಿಂದ ತನಿಖೆ ನಡೆಸಲು ಸಾಧ್ಯವಿಲ್ಲ ಎಂದರು.

ಆರೋಪಿಗಳು ಯುವತಿ ಕುಟುಂಬವನ್ನು ಮತಾಂತರಕ್ಕೆ ಒತ್ತಾಯಿಸಿದ್ದಾರೆ.  ರಾಜ್ಯದಲ್ಲಿ ಶಂಕಿತ ಉಗ್ರರ ಬಂಧನವಾಗಿದೆ. ಆದ್ದರಿಂದ ಈ ಕೃತ್ಯ ಹಾಗೂ ಮತಾಂತರದ ಹಿಂದೆ ದೊಡ್ಡ ಸಂಚಿರುವ ಅನುಮಾನವಿದೆ ಎಂದರು

ಮತಾಂತರ ಯತ್ನ ಮತ್ತು ದೌರ್ಜನ್ಯ ಬಗ್ಗೆ ವಿಸೃತ ತನಿಖೆ ಆಗಬೇಕು. ಈ ಕಾರಣಕ್ಕೆ ಸಿಐಡಿ ಡಿಜಿ ಪ್ರವೀಣ್ ಸೂದ್ ಮತ್ತು ಡಿಜಿಪಿ ನೀಲಮಣಿ ರಾಜು ಅವರಿಗೆ ದೂರು ನೀಡಲಾಗಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು