ಎಸ್.ಜಿ.ಎಸ್ ವಾಗ್ದೇವಿ: ವಿಚಾರ ಸಂಕಿರಣ ಜ.1ಕ್ಕೆ
ಬೆಂಗಳೂರು: ಎಸ್.ಜಿ.ಎಸ್ ವಾಗ್ದೇವಿಯು ಬೆಳ್ಳಿಹಬ್ಬದ ಪ್ರಯುಕ್ತ ಜ.1ರಂದು ಆನ್ಲೈನ್ ಮೂಲಕ ವಿಚಾರಸಂಕಿರಣ ಹಮ್ಮಿಕೊಂಡಿದೆ.
‘ಕೋವಿಡ್ ಬಳಿಕ ಹೇರಲಾದ ಲಾಕ್ಡೌನ್ ಮತ್ತು ಶಾಲಾ ರಜೆಯ ಕಾರಣ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಣದ ಮೇಲೆ ಆಗಿರುವ ಪರಿಣಾಮಗಳು’ ಎಂಬ ವಿಷಯದ ಮೇಲೆ ವಿಚಾರ ಸಂಕಿರಣ ನಡೆಯಲಿದೆ. ಶ್ರವಣ ದೋಷವುಳ್ಳ ಮಕ್ಕಳ ನಡವಳಿಕೆಯಲ್ಲಾದ ಬದಲಾವಣೆಗಳು, ಅವರ ಮಾತು, ಭಾಷೆ, ಓದು ಹಾಗೂ ಬರಹದ ಮೇಲಾದ ಪರಿಣಾಮಗಳ ಬಗ್ಗೆಯೂ ಚರ್ಚಿಸಲಾಗುತ್ತದೆ. ಆಸಕ್ತರು ಇ ಮೇಲ್ ವಿಳಾಸ vagdevitrust@gmail.com ಮೂಲಕ ಹೆಸರು ನೋಂದಾಯಿಸಿ
ಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.
ಸಂಪರ್ಕಕ್ಕೆ ದೂರವಾಣಿ: 080 26727141
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.