ಬೆಂಗಳೂರು: ‘ದೇಶವು 21 ಶತಮಾನದಲ್ಲಿ ದಾಪುಗಾಲಿಟ್ಟಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ನುರಿತ ವೈದ್ಯರ ಸೇವೆ ಇಂದಿಗೂ ಸಮರ್ಪಕವಾಗಿಲ್ಲ. ಇದರಿಂದ ಬಡವರು, ವಂಚಿತರು ಮತ್ತು ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸೇವೆಯಲ್ಲಿ ನಾವು ತುಂಬಾ ಹಿಂದುಳಿದಿದ್ದೇವೆ’ ಎಂದು ಸಂಸದ ಶಶಿ ತರೂರ್ ಕಳವಳ ವ್ಯಕ್ತಪಡಿಸಿದರು.

ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಪದವಿ ವಿದ್ಯಾರ್ಥಿಗಳ ಘಟಿಕೋತ್ಸವದಲ್ಲಿ ಶನಿವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಇಂದಿನ ವೈದ್ಯರು ತಮ್ಮ ಮುಂದಿರುವ ತಾಂತ್ರಿಕ ನೈಪುಣ್ಯತೆ, ಕೃತಕ ಬುದ್ಧಿಮತ್ತೆ, ರೊಬೋಟ್ಗಳ ಬಳಕೆಯಂತಹ ಹತ್ತು ಹಲವು ಸವಾಲು ಗಳಿಗೆ ಎದೆಯೊಡ್ಡಬೇಕಿದೆ’ ಎಂದರು.

‘ಸಾಮಾಜಿಕ ತಲ್ಲಣಗಳು ವ್ಯಾಪಕವಾಗಿ ಹರಡುತ್ತಿರುವ ಇಂದಿನ ಸಂದರ್ಭದಲ್ಲಿ ವೈದ್ಯ ಎಂಬ ಪದವಿ ನಿಮ್ಮನ್ನು ಸಮಸ್ತ ಮಾನವೀಯತೆ ಕಡೆಗೆ ಕರೆದುಕೊಂಡು ಹೋಗಲಿ. ಬಹುತ್ವದ ತಳಹದಿ ಹೊಂದಿದ ನಮ್ಮ ಪ್ರಜಾಪ್ರಭುತ್ವದ ಪ್ರಗತಿ ಮತ್ತು ಸಂಪತ್ತು ವೃದ್ಧಿಗಾಗಿ ನಿಮ್ಮ ಸೇವೆ ಮುಡಿಪಾಗಿರಲಿ. ವೃತ್ತಿ ಮೌಲ್ಯಗಳು ಮತ್ತು ನೈತಿಕ ನಿಯಮಗಳನ್ನು ಎತ್ತಿಹಿಡಿಯಿರಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.