ಶನಿವಾರ, ಫೆಬ್ರವರಿ 27, 2021
23 °C

ರೌಡಿ ಕೊಂದಿದ್ದ ಆರೋಪಿ ಕಾಲಿಗೆ ಗುಂಡೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ರೌಡಿ ಬಿಜ್ಜು ಎಂಬಾತನನ್ನು ಕೊಂದಿದ್ದ ಆರೋಪಿ ಸಂಜಯ್ ಅಲಿಯಾಸ್ ಆ್ಯಂಡ್ರೂಸ್‌ನನ್ನು ಕಾಲಿಗೆ ಗುಂಡು ಹಾರಿಸಿ ಸೋಮವಾರ ಸೆರೆಹಿಡಿಯಲಾಗಿದೆ.

ಬೆಳಿಗ್ಗೆ ತನ್ನನ್ನು ಬಂಧಿಸಲು ಮುಂದಾಗಿದ್ದ ಪೊಲೀಸರ ಮೇಲೆಯೇ ಆರೋಪಿ ಹಲ್ಲೆ ಮಾಡಲು ಮುಂದಾಗಿದ್ದ. 

ಬೆಳಗ್ಗೆ 6 ಗಂಟೆ ಸುಮಾರಿಗೆ ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯ ಲಿಟ್ಕರ್ ಕಾಲೋನಿಯಲ್ಲಿ ಆರೋಪಿ ಇದ್ದ. ಬಂಧಿಸಲು ತೆರಳಿದ್ದ ವೇಳೆ‌ ಪೊಲೀಸರ ಮೇಲೆ ಖಾರದ ಪುಡಿ ಎರಚಿ ಹಲ್ಲೆಗೆ ಯತ್ನಿಸಿದ್ದ. ಗಾಳಿಯಲ್ಲಿ‌ ಗುಂಡು ಹಾರಿಸಿ ಶರಣಾಗಲು ಸೂಚಿಸಿದ್ದ ಇನ್‌ಸ್ಪೆಕ್ಟರ್  ಅಜಯ್ ಸಾರಥಿ. ಶರಣಾಗದೇ ಹಲ್ಲೆಗೆ ಮುಂದಾದಾಗ ಆರೋಪಿಯ ಎಡಗಾಲಿಗೆ ಗುಂಡು ಹೊಡೆದರು.

ರೌಡಿ ಶೀಟರ್ ಬಿಜ್ಜು ಕೊಲೆ ಪ್ರಕರಣ‌ದ ಆರೋಪಿಯಾಗಿದ್ದ ಸಂಜಯ್. ಮೇ 2ರಂದು ಮಾರಕಾಸ್ತ್ರದಿಂದ ರೌಡಿಶೀಟರ್ ಬಿಜ್ಜುನನ್ನು (30) ಕೊಲೆ ಮಾಡಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು