ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಮಾಜಿಕ ಕ್ರಾಂತಿ ಜನಸಾಮಾನ್ಯರ ಬದುಕಿಗೆ ಬೆಳಕು’

Last Updated 2 ಡಿಸೆಂಬರ್ 2022, 21:03 IST
ಅಕ್ಷರ ಗಾತ್ರ

ಬೆಂಗಳೂರು: ‘ಕಲ್ಯಾಣ ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ನಡೆದ ಶರಣರ ಸಾಮಾಜಿಕ ಕ್ರಾಂತಿ ಜನಸಾಮಾನ್ಯರ ಬದುಕಿಗೆ ಬೆಳಕಾಯಿತು’ ಎಂದು ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ ಹೇಳಿದರು.

ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಲಿಂಗಾಯತ ಬಳಗದ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ‘ವಚನಗಳು ಹಾಗೂ ಸಾಮಾಜಿಕ ಬದಲಾವಣೆ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

‘ಬಹುಮುಖ ಪ್ರತಿಭೆಯ ಶರಣ–ಶರಣೆಯರು ತಮ್ಮ ಕಾಯಕ, ದಾಸೋಹಕ್ಕೆ ಮಹತ್ವ ಕೊಟ್ಟಿದ್ದರು. ನುಡಿದಂತೆ ನಡೆದು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಒತ್ತು ನೀಡಿದ್ದರು’ ಎಂದರು.

‘ಎಲ್ಲರನ್ನೂ ತಮ್ಮ ಜತೆಗೆ ಕರೆದೊಯ್ದು ಇವ ನಮ್ಮವ, ಇವ ನಮ್ಮವ ಎನ್ನುತ್ತ ಸಹ ಜೀವನ, ಸಹಪಂಕ್ತಿ ಭೋಜನ ನಡೆಸಿ ಮಹಾಮನೆಯ ಕಲ್ಪನೆಗೆ ಅರ್ಥ ನೀಡುವುದರ ಜೊತೆಗೆ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದರು. ವಚನಕಾರರು ಪ್ರಜಾಪ್ರಭುತ್ವ ವಾದಿಗಳಾಗಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚು ಒತ್ತು ನೀಡಿದ್ದರು’ ಎಂದು ತಿಳಿಸಿದರು.

ಎಂ.ಕ್ಯೂ.ಐ. ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ನಿರ್ದೇಶಕ ವಿ. ಪ್ರಭುದೇವ, ಜಾನಪದ ಅಕಾಡೆಮಿ ಮಾಜಿ ರಿಜಿಸ್ಟ್ರಾರ್ ಬಿ.ಎನ್. ಪರಡ್ಡಿ, ಗಣಕತಜ್ಞರಾದ ಸದಾನಂದಮೂರ್ತಿ, ಅರವಿಂದ್, ವಚನಜ್ಯೋತಿ ಬಳಗದ ಪಿನಾಕಪಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT