ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶವ್ಯಾಪಿ ಪ್ರಭಾವ ಬೀರಿದ ಹಿರೇಮಠ ಹೋರಾಟ: ಚಿರಂಜೀವಿ ಸಿಂಘ್‌

‘ಮಹಾಸಂಗ್ರಾಮಿ’ ಕೃತಿ ಲೋಕಾರ್ಪಣೆ ಕಾರ್ಯಕ್ರಮ
Published 10 ಸೆಪ್ಟೆಂಬರ್ 2023, 20:12 IST
Last Updated 10 ಸೆಪ್ಟೆಂಬರ್ 2023, 20:12 IST
ಅಕ್ಷರ ಗಾತ್ರ

ಬೆಂಗಳೂರು: ’ಎಸ್‌.ಆರ್‌. ಹಿರೇಮಠ ಅವರ ಹೋರಾಟದ ಪ್ರಭಾವ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ದೇಶವ್ಯಾಪಿ ವಿಸ್ತರಿಸಿದೆ’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಘ್‌ ಅಭಿಪ್ರಾಯಪಟ್ಟರು.

ರೂಪ ಹಾಸನ ರಚಿಸಿರುವ ಎಸ್.ಆರ್‌. ಹಿರೇಮಠ ಅವರ ರಚನಾತ್ಮಕ ಪ್ರಯೋಗಗಳ ಬಾಳ್ಕಥನ ‘ಮಹಾಸಂಗ್ರಾಮಿ’ ಕೃತಿಯನ್ನು ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ನಿರಂತರ ಹೋರಾಟ ಮಾಡಿಕೊಂಡು ಬಂದಿರುವ ಹಿರೇಮಠ ಅವರ ಜೀವನ ಚರಿತ್ರೆ ಈ ಮೊದಲೇ ಬರಬೇಕಿತ್ತು. ಈ ಬಾಳ್ಕಥನ ರಚಿಸಲು ಅವರ ಮಾತುಗಳನ್ನು 120 ತಾಸು ರೆಕಾರ್ಡ್ ಮಾಡಿಕೊಂಡಿರುವುದು ಉತ್ತಮ ಸಂಗ್ರಹವಾಗಲಿದೆ’ ಎಂದು ತಿಳಿಸಿದರು.

ರಾಜಕೀಯ ವಿಶ್ಲೇಷಕ ಸುಗತ ಶ್ರೀನಿವಾಸ್‌ರಾಜು ಮಾತನಾಡಿ, ‘ಒಳಿತಿಗಿಂತ ಕೆಡುಕಿನ ಬಗ್ಗೆ ಮಾತನಾಡುವುದೇ ಹೆಚ್ಚು. ಹಿರೇಮಠ ಅವರು ಒಳಿತಿನ ಹರಿವನ್ನು ಹಿಗ್ಗಿಸಲು ಪ್ರಯತ್ನಿಸಿದವರು. ಅವರ ಹೋರಾಟದ ಭಾಷೆಯು ಕಾವ್ಯಾತ್ಮಕವಾದುದು ಅಲ್ಲ. ಸಂವಿಧಾನಾತ್ಮಕವಾದುದು, ರಾಜಕೀಯವಾದುದು’ ಎಂದು ವಿಶ್ಲೇಷಿಸಿದರು.

‘ಕಡಿಮೆ ಸ್ವಾರ್ಥ ಇರುವವರಷ್ಟೇ ಹೋರಾಟ ನಡೆಸಲು ಸಾಧ್ಯ. ಸಂಗ್ರಾಮ ಮತ್ತು ನಿರ್ಮಾಣ ಎರಡನ್ನು ಒಟ್ಟೊಟ್ಟಿಗೆ ಮಾಡಿದ ಹಿರೇಮಠ ಅವರಿಗೆ ಕೇಡು ಯಾವುದು ಎಂಬ ಸ್ಪಷ್ಟ ಅರಿವಿದೆ’ ಎಂದು ಸಾಹಿತಿ ನಟರಾಜ್‌ ಹುಳಿಯಾರ್‌ ಹೇಳಿದರು.

ಲೇಖಕಿ ಪಿ. ಭಾರತೀದೇವಿ ಮಾತನಾಡಿ, ‘ತುರ್ತು ಪರಿಸ್ಥಿತಿ, ಐಡಿಯಾಸ್ ಸಂಸ್ಥೆ ಬಗ್ಗೆ ಈ ಕೃತಿಯಲ್ಲಿ ಬಹಳ ವಿವರಗಳಿವೆ. ಆದರೆ, ಗಣಿದೊರೆಗಳನ್ನೇ ಎದುರು ಹಾಕಿಕೊಂಡು ಅವರು ನಡೆಸಿದ ಹೋರಾಟದ ಬಗ್ಗೆ ಅಷ್ಟು ವಿವರಗಳು ಇಲ್ಲ. ಒಬ್ಬ ವ್ಯಕ್ತಿಗೆ ಇಂಥ ಶಕ್ತಿ ಎಲ್ಲಿಂದ ಬಂತು ಎಂಬ ಅಚ್ಚರಿ ನಮ್ಮದು’ ಎಂದರು.

ಸಮಾಜ ಪರಿವರ್ತನಾ ಸಮುದಾಯ, ಜನಾಂದೋಲನ ಮಹಾಮೈತ್ರಿ, ಜನಸಂಗ್ರಾಮ ಪರಿಷತ್, ಅಭಿರುಚಿ ಪ್ರಕಾಶನ ವತಿಯಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಹೋರಾಟಗಾರ ಎಸ್‌.ಆರ್‌. ಹಿರೇಮಠ, ಕೃತಿಕಾರರಾದ ರೂಪ ಹಾಸನ, ಪ್ರಕಾಶಕ ಅಭಿರುಚಿ ಗಣೇಶ್‌, ಜನಸಂಗ್ರಾಮ ಪರಿಷತ್ತಿನ ರಾಘವೇಂದ್ರ ಕುಷ್ಟಗಿ ಇದ್ದರು.

ಪುಸ್ತಕ ಪರಿಚಯ ಕೃತಿ

ಹೆಸರು: ಮಹಾಸಂಗ್ರಾಮಿ

ಲೇಖಕಿ: ರೂಪ ಹಾಸನ

ಪುಟಗಳು: 464 ದರ: ₹ 600

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT