ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಲ್ಲದ ಖಾತೆಗೆ ₹ 2.12 ಕೋಟಿ ಪಾವತಿಸಲು ನೋಟಿಸ್’

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌
Last Updated 24 ಸೆಪ್ಟೆಂಬರ್ 2021, 6:00 IST
ಅಕ್ಷರ ಗಾತ್ರ

ಬೆಂಗಳೂರು: ‘ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಯಾವುದೇ ವ್ಯವಹಾರ ನಡೆಸದಿದ್ದರೂ ₹ 35 ಲಕ್ಷ ಸಾಲಕ್ಕೆ ಬಡ್ಡಿ ಸಹಿತ ₹ 2.12 ಕೋಟಿ ಕಟ್ಟಬೇಕೆಂದು ಬ್ಯಾಂಕ್ ನೋಟಿಸ್ ನೀಡಿದೆ’ ಎಂದು ಹೊಸಕೆರೆಹಳ್ಳಿ ನಿವಾಸಿಚಂಪಕವತಿ ಎಂಬುವವರು ದೂರಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೋಟಿಸ್ ನೀಡಿದಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿಲ್ಲ. ಆದರೆ, ಕಳೆದ ಸೆ.3ರಂದು ಬ್ಯಾಂಕ್ ನೋಟಿಸ್ ನೀಡಿದ್ದು, ಬಡ್ಡಿ ಸಹಿತ ಸಾಲವನ್ನು ಮರುಪಾವತಿಸುವಂತೆ ಸೂಚಿಸಿದೆ. ಇದು ಆಘಾತವನ್ನುಂಟು ಮಾಡಿದ್ದು, ಈ ಬಗ್ಗೆ ಪೊಲೀಸ್ ಕಮಿಷನರ್‌ಗೆ ದೂರು ನೀಡಲಾಗಿದೆ. ಬ್ಯಾಂಕ್‌ಗೆ ಕೂಡ ಈ ಬಗ್ಗೆ ಸ್ಪಷ್ಟನೆ ಕೇಳಲಾಗಿದೆ. ಆದರೆ, ಉತ್ತರ ಬಂದಿಲ್ಲ’ ಎಂದು ತಿಳಿಸಿದರು.

‘ನೋಟಿಸ್ ಪ್ರತಿಯಲ್ಲಿ 2011ರ ಮಾರ್ಚ್‌ನಲ್ಲಿ ಸಾಲ ಪಡೆದಿರುವುದಾಗಿ ನಮೂದಿಸಲಾಗಿದೆ. ಖಾತೆ ಹೊಂದಿರದಿದ್ದರೂ ನನ್ನ ಎಲ್ಲ ದಾಖಲೆಗಳು ಬ್ಯಾಂಕ್ ಆಡಳಿತ ಮಂಡಳಿಗೆ ಹೇಗೆ ತಲುಪಿತು ಎನ್ನುವುದು ತಿಳಿಯದಾಗಿದೆ. ಈ ಸಂಬಂಧ ಬ್ಯಾಂಕ್ ಆಡಳಿತ ಮಂಡಳಿಗೆ ವಕೀಲರ ಮೂಲಕ ನೋಟಿಸ್ ನೀಡಿದ್ದೇನೆ. ಇದೇ ರೀತಿ ಹಲವರಿಗೆ ಬ್ಯಾಂಕ್‌ನಿಂದ ನೋಟಿಸ್ ಹೋಗಿರುವ ಸಾಧ್ಯತೆಯಿದೆ. ಈ ಪ್ರಕರಣ ಸಂಪೂರ್ಣ ತನಿಖೆಯಾದಲ್ಲಿ ಸತ್ಯಾಂಶ ತಿಳಿಯಲಿದೆ.’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT