ಬೆಂಗಳೂರು: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವ ಕನಿಷ್ಠ ಅಂಕಗಳನ್ನು 33ಕ್ಕೆ ಇಳಿಸಿರುವುದು ಅವೈಜ್ಞಾನಿಕವಾಗಿದೆ. ಕನ್ನಡ ಭಾಷಾ ಕಲಿಕೆಗೆ ಮಾರಕವಾಗಿರುವ ಈ ತೀರ್ಮಾನವನ್ನು ಕೂಡಲೇ ಮರುಪರಿಶೀಲಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಸರ್ಕಾರವನ್ನು ಆಗ್ರಹಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶುಕ್ರವಾರ ಆಯೋಜಿಸಿದ್ದ ಕನ್ನಡ ಜಾಗೃತಿ ಸಮಿತಿ ಸದಸ್ಯರ ರಾಜ್ಯ ಮಟ್ಟದ ಕಮ್ಮಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕೇಂದ್ರ ಪಠ್ಯಕ್ರಮದ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಸಮಾನ ಭೂಮಿಕೆಯನ್ನು ಹೊಂದಬೇಕೆನ್ನುವ ಕಾರಣಕ್ಕೆ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಮಾರಕವಾಗಿದೆ. ವಿದ್ಯಾರ್ಥಿಗಳ ಭಾಷಾ ಕಲಿಕೆಗೆ ಅವಶ್ಯಕವಿರುವ ಗಂಭೀರತೆಯನ್ನು ಈ ತೀರ್ಮಾನವು ಕಸಿದುಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಇದು ಶಿಕ್ಷಣದಲ್ಲಿ ಕನ್ನಡ ಕಲಿಕೆಗೆ ಪ್ರತಿಕೂಲವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಸಲಹೆಯಂತೆ ಕನ್ನಡ ಉಳಿಸಲು ಸಾಮಾನ್ಯ ಕನಿಷ್ಠ ಕಾರ್ಯಸೂಚಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಶಿಕ್ಷಣ ತಜ್ಞರನ್ನು ಒಳಗೊಂಡ ಸಮಿತಿಯು ರಾಜ್ಯ ಶಿಕ್ಷಣ ನೀತಿಯನ್ನು ಸರ್ಕಾರಕ್ಕೆ ಸಲ್ಲಿಸಿ 6 ತಿಂಗಳು ಕಳೆದರೂ ಸರ್ಕಾರ ಸಾರ್ವಜನಿಕ ಚರ್ಚೆಗೆ ಒಳಪಡಿಸಿಲ್ಲ. ಅತ್ಯಾಧುನಿಕ ಬೋಧನಾ ಕ್ರಮಗಳನ್ನು ವಿಷದಪಡಿಸಿರುವ ಶಿಕ್ಷಣ ನೀತಿಯನ್ನು ಕೂಡಲೇ ಅಳವಡಿಸಿಕೊಳ್ಳುವ ಕ್ರಮಕ್ಕೆ ಮುಂದಾಗಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ಸವಾಲಿನ ಸಂದರ್ಭದಲ್ಲಿ ಕನ್ನಡವನ್ನು ಹೇಗೆ ಉಳಿಸಬೇಕೆನ್ನುವ ಕುರಿತು ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಾಮಾನ್ಯ ಕನ್ನಡ ಮಾರ್ಗಸೂಚಿಯನ್ನೇ ಹೊರತರಬೇಕಿದೆ’ ಎಂದರು.

‘ಭಾಷಾ ನೆಲೆಯಲ್ಲಿ ಜನರನ್ನು ನೋಡುವ ಕ್ರಮ ನಿಲ್ಲಬೇಕಿದ್ದು, ಜನರ ಮುಖಾಂತರ ಭಾಷೆಯನ್ನು ನೋಡುವ ಕ್ರಮವನ್ನು ಅನುಸರಿಸಿದಲ್ಲಿ ನೀತಿ ನಿಲುವುಗಳಿಗೆ ಬೇರೆಯೇ ಆಯಾಮ ದೊರಕುತ್ತದೆ. ಕನ್ನಡಿಗರನ್ನು ಉಳಿಸಿದರೆ ಅವರೇ ಕನ್ನಡವನ್ನು ಉಳಿಸಿಕೊಳ್ಳುತ್ತಾರೆ’ ಎಂದರು.

‘ಕನ್ನಡವನ್ನು ಉಳಿಸಿರುವುದು ಸಾಹಿತಿಗಳು, ಚಿಂತಕರು ಮಾತ್ರ ಎನ್ನುವ ಮನೋಭಾವ ಕೂಡಲೇ ಬದಲಾಗಬೇಕು. ಕನ್ನಡಕ್ಕೆ ಸವಾಲುಗಳಿವೆಯೇ ಹೊರತು, ಅದಕ್ಕೆ ಸಾವಿಲ್ಲ ಎನ್ನುವುದನ್ನು ಅರ್ಥೈಸಿಕೊಳ್ಳಬೇಕಿದೆ. ಬಹಳ ಮುಖ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡವು ಉಳಿಯಬೇಕು. ಕನ್ನಡವನ್ನು ಕಲಿಯದಿದ್ದರೆ ಕರ್ನಾಟಕದಲ್ಲಿ ಉದ್ಯೋಗ ಸಿಗಬಾರದೆನ್ನುವ ವ್ಯವಸ್ಥೆ ನಿರ್ಮಾಣವಾದಾಗ ಮಾತ್ರ ಕನ್ನಡಪರ ವಾತಾವರಣವು ಸೃಷ್ಠಿಯಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಶಾಲೆ ಆರಂಭಿಸಲು ಮುಂದೆ ಬರುವವರಿಗೆ ಸರ್ಕಾರ ವಿಶೇಷ ಅನುದಾನ ನೀಡಬೇಕು’ ಎಂದರು.

ಸದಸ್ಯರ ಜತೆ ಸಂವಾದ

ಕಮ್ಮಟದಲ್ಲಿ ಕನ್ನಡದ ಸಬಲೀಕರಣ ಜಾಗೃತಿ ಸಮಿತಿ ಸದಸ್ಯರ ಪಾತ್ರ ಔದ್ಯೋಗಿಕ ಸಂಸ್ಥೆಗಳಲ್ಲಿ ಕನ್ನಡದ ಅನುಷ್ಠಾನದ ಕುರಿತ ವಿಚಾರಗೋಷ್ಠಿಗಳು ನಡೆದವು. ಸಮಿತಿ ಸದಸ್ಯರೊಂದಿಗೆ ಸಂವಾದ ಏರ್ಪಡಿಸಲಾಗಿತ್ತು. ಸಾಹಿತಿ ಎಲ್.ಹನುಮಂತಯ್ಯ ಸಮಾರೋಪ ಭಾಷಣ ಮಾಡಿ ಕನ್ನಡದ ಸವಾಲುಗಳನ್ನು ಎದುರಿಸಲು ಕನ್ನಡದ ಕಟ್ಟಾಳುಗಳಾದ ಭಾಷಾ ಸೈನಿಕರಾದ ಜಾಗೃತಿ ಸಮಿತಿ ಸದಸ್ಯರು ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕೆಂದರು. ಲೇಖಕಿ ಡಾ.ಸಂಧ್ಯಾರೆಡ್ಡಿ ಕನ್ನಡ ಜಾಗೃತಿ ಸಮಿತಿಯ 249 ಸದಸ್ಯರು ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರಾದ ಎ.ಬಿ.ರಾಮಚಂದ್ರಪ್ಪ ನಿರಂಜನಾರಾಧ್ಯ ರವಿಕುಮಾರ್ ನೀಹ ಟಿ.ಗುರುರಾಜ್ ಟಿ.ತಿಮ್ಮೇಶ್ ವಿರೂಪಣ್ಣ ಕಲ್ಲೂರ ಯಾಕೂಬ್ ಖಾದರ್ ಗುಲ್ವಾಡಿ ಹಾಗೂ ದಾಕ್ಷಾಯಿಣಿ ಹುಡೇದ ಮತ್ತು ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.