ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದ ‘ರಾಜ್ಯ ವಿವಾದ ಪರಿಹಾರ ನೀತಿ’ ಪ್ರಸ್ತಾವ

Last Updated 20 ಫೆಬ್ರುವರಿ 2021, 21:26 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ‘ಕರ್ನಾಟಕ ರಾಜ್ಯ ವಿವಾದ ಪರಿಹಾರ ನೀತಿ–2021’ ಅನ್ನು ಪ್ರಸ್ತಾಪಿಸಿ ಶನಿವಾರ ಅಧಿಸೂಚನೆ ಹೊರಡಿಸಿದೆ.

ರಾಜ್ಯ ಸರ್ಕಾರ ಭಾಗಿಯಾಗಿರುವ ವ್ಯಾಜ್ಯಗಳನ್ನು ಪರಿಹರಿಸುವ ಸಂದರ್ಭದಲ್ಲಿ ಹೊಣೆಗಾರಿಕೆ, ಉತ್ತರದಾಯಿತ್ವ ಮತ್ತು ದಕ್ಷತೆಯಿಂದ ಕಾರ್ಯಪ್ರವೃತ್ತರಾಗುವುದು ಈ ನೀತಿಯ ಉದ್ದೇಶವಾಗಿದೆ.

ವಿವಾದಗಳನ್ನು ಪರಸ್ಪರ ಸಹಮತ, ಸೌಹಾರ್ದಯುತವಾಗಿ ಪರಿಹರಿಸಲು ಆದ್ಯತೆ ನೀಡಬೇಕು. ಆ ಮೂಲಕ, ಸಮಯ ಮತ್ತು ಅನಾಶ್ಯಕ ವೆಚ್ಚಕ್ಕೆ ನಿಯಂತ್ರಿಸಬಹುದು. ಆ ಹೊಣೆಗಾರಿಕೆಯಲ್ಲಿ ವಿವಾದಗಳಿಗೆ ಅಂತ್ಯ ಹಾಡಲು ನೀತಿ ನೆರವಾಗಲಿದೆ.

‘ಕರ್ನಾಟಕ ರಾಜ್ಯ ದಾವೆ ನೀತಿ 2011ರಲ್ಲಿ ರಚನೆಯಾಗಿದ್ದು, ಅದು ಈಗಲೂ ಜಾರಿಯಲ್ಲಿದೆ. ವಿವಾದಗಳನ್ನು ಪರಿಣಾಮಕಾರಿಯಾಗಿ ಮತ್ತು ಹೊಣೆಗಾರಿಕೆಯಿಂದ ಪರಿಹರಿಸುವ ಉದ್ದೇಶದಿಂದ ಈ ನೀತಿ ಜಾರಿಗೆ ತರಲಾಗಿತ್ತು. ಈ ಬಗ್ಗೆ 2018ರಲ್ಲಿ ನಡೆದ ಅಧ್ಯಯನ ಪ್ರಕಾರ ಈ ನೀತಿ ಸಮರ್ಪಕವಾಗಿ ಜಾರಿಯಾಗಿಲ್ಲ. ಸರ್ಕಾರದ ದಾವೆಗಳನ್ನು ನಿಭಾಯಿಸುವ ಪ್ರಕ್ರಿಯೆಯ ವೇಳೆ ದಕ್ಷತೆ ಮತ್ತು ಹೊಣೆಗಾರಿಕೆ ಇಲ್ಲದಿರುವುದು ಗೊತ್ತಾಗಿತ್ತು. ಹೀಗಾಗಿ, ಅದನ್ನು ಪರಿಷ್ಕರಿಸಿ ಹೊಸ ನೀತಿಯನ್ನು ಜಾರಿಗೆ ತರಲು ಇದೀಗ ಅಧಿಸೂಚನೆ ಹೊರಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT