ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್ಆ್ಯಪ್ ಮೂಲಕ ಮಾಹಿತಿ, ದೂರು ನೀಡಿ: ಬೆಂಗಳೂರು ಪೊಲೀಸರ ಹೊಸ ಕ್ರಮ

Published 15 ಜೂನ್ 2023, 5:25 IST
Last Updated 15 ಜೂನ್ 2023, 5:25 IST
ಅಕ್ಷರ ಗಾತ್ರ

ಬೆಂಗಳೂರು: 'ನಮ್ಮ 112' ನಿಯಂತ್ರಣ ಕೊಠಡಿ‌ ಮೂಲಕ ಜನರ ದೂರು ಸ್ವೀಕರಿಸುತ್ತಿದ್ದ ಬೆಂಗಳೂರು ಪೊಲೀಸರು, ಇದೀಗ ವಾಟ್ಸ್‌ಆ್ಯಪ್‌ ಮೂಲಕವೂ ದೂರು ಪಡೆಯಲು ಮುಂದಾಗಿದ್ದಾರೆ.

ಈ‌ ಬಗ್ಗೆ ಟ್ವೀಟ್ ಮಾಡಿರುವ ಪೊಲೀಸ್ ಕಮಿಷನರ್ ಬಿ. ದಯಾನಂದ್, 'ನಮ್ಮ 112 ಉನ್ನತೀಕರಿಸಲು ಮೊದಲ ಹೆಜ್ಜೆ ಇರಿಸಲಾಗಿದೆ. ನಾಗರಿಕರು ತುರ್ತು ಸಂದರ್ಭದಲ್ಲಿ ಸಹಾಯಕ್ಕೆ ಹಾಗೂ ಇತರೆ ಯಾವುದೇ ರೀತಿಯ ದೂರುಗಳು ಇದ್ದರೆ ಇನ್ನು ಮುಂದೆ 9480801000 ವಾಟ್ಸ್‌ಆ್ಯಪ್ ನಂಬರ್‌ಗೆ ಕಳುಹಿಸಬಹುದು' ಎಂದಿದ್ದಾರೆ.

ಇತ್ತೀಷೆಗಷ್ಟೇ ಹೊಯ್ಸಳ ವಾಹನದಲ್ಲಿ ಕಮಿಷನರ್ ಗಸ್ತು ತಿರುಗಿದ್ದರು. ಕೆಲ ಸಾರ್ವಜನಿಕರು,‌ ನಿಯಂತ್ರಣ ಕೊಠಡಿ ಹಾಗೂ ಹೊಯ್ಸಳ ಸಿಬ್ಬಂದಿ ಮತ್ತಷ್ಟು ಚುರುಕಿನಿಂದ ಕೆಲಸ‌ ಮಾಡಬೇಕು ಎಂದು ಕೋರಿದ್ದರು. ಅದಕ್ಕೆ ಕ್ರಮ ಕೈಗೊಂಡಿರುವ‌ ಕಮಿಷನರ್ ವಾಟ್ಸ್‌ಆ್ಯಪ್‌ ನಂಬರ್ ಪರಿಚಯಿಸಿದ್ದಾರೆ. ಮುಂದಿನ ದಿನಗಳಲ್ಲಿ ನಿಯಂತ್ರಣ ‌ಕೊಠಡಿ ವ್ಯವಸ್ಥೆಯಲ್ಲಿ‌ ಮತ್ತಷ್ಟು ಬದಲಾವಣೆ ಆಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT