ಬೆಂಗಳೂರು: ಆತ್ಮೀಯ ಸ್ನೇಹಿತೆಯ ಸಾವಿನಿಂದ ನೊಂದು ಬಾಲಕಿಯೊಬ್ಬರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಲಾಸಿಪಾಳ್ಯದ ಕೋಟೆ ‘ಡಿ’ ರಸ್ತೆಯ ನಿವಾಸಿ ಸಂತೋಷ್ ಮತ್ತು ಸೆಲ್ವಿ ದಂಪತಿಯ ಪುತ್ರಿ ಶರ್ಮಿಳಾ(14) ಆತ್ಮಹತ್ಯೆ ಮಾಡಿಕೊಂಡವರು. ಚಾಮರಾಜಪೇಟೆಯ ಶಾಲೆಯೊಂದರಲ್ಲಿ ಶರ್ಮಿಳಾ 9ನೇ ತರಗತಿ ಓದುತ್ತಿದ್ದರು.

ತಮಿಳುನಾಡಿನ ಸಂತೋಷ್ ಅವರು ನಗರದಲ್ಲಿ ತರಕಾರಿ ವ್ಯಾಪಾರ ಮಾಡುತ್ತಾರೆ. ದಂಪತಿಗೆ ಮೂವರು ಮಕ್ಕಳು.

‘ಶರ್ಮಿಳಾ ಹಾಗೂ ವೈಶಾಲಿ ಒಂದೇ ಶಾಲೆಯಲ್ಲಿ ಓದುತ್ತಿದ್ದರು. ವೈಶಾಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಸ್ನೇಹಿತೆಯ ಸಾವಿನಿಂದ ಮಾನಸಿಕವಾಗಿ ನೊಂದಿದ್ದರು’ ಎಂದು ಮೂಲಗಳು ಹೇಳಿವೆ.

‘ನೀನು ಜತೆಗೆ ಬಾ’ ಎಂದು ಸ್ನೇಹಿತೆ ಕರೆಯುತ್ತಿದ್ದಾಳೆ. ಆಕೆಯನ್ನು ಬಿಟ್ಟಿರಲು ಆಗುತ್ತಿಲ್ಲ ಎಂದು ಶರ್ಮಿಳಾ ತಾಯಿಯ ಬಳಿ ಹೇಳಿಕೊಂಡಿದ್ದರು. ಮಗಳನ್ನು ತಾಯಿ ಸಮಾಧಾನಪಡಿಸಿದ್ದರು’ ಎಂದು ಮೂಲಗಳು ಹೇಳಿವೆ.

‘ಮನೆಯಲ್ಲಿ ಶರ್ಮಿಳಾ ಹಾಗೂ ಅಜ್ಜಿಯನ್ನು ಬಿಟ್ಟು ಉಳಿದ ಇಬ್ಬರು ಮಕ್ಕಳೊಂದಿಗೆ ದಂಪತಿ ಶನಿವಾರ ರಾತ್ರಿ ತಮಿಳುನಾಡಿನ ದೇವಸ್ಥಾನಕ್ಕೆ ಹೋಗಿದ್ದರು. ಭಾನುವಾರ ಸಂಜೆ ಅಜ್ಜಿ ಮನೆಯಿಂದ ಹೊರ ಹೋಗಿದ್ದ ವೇಳೆ, ಶರ್ಮಿಳಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು. ಕಲಾಸಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.