ಈ ವೇಳೆ ಮಾತನಾಡಿದ ಅವರು, ‘ಇಲ್ಲಿನ ಬಡವರು ವಿದೇಶದ ಅತಿಥಿಗೆ ಕಾಣಿಸಬಾರದು ಎಂಬ ಕಾರಣಕ್ಕೆ ದೇಶದ ಪ್ರಹಾಪ್ರಭು ರಸ್ತೆಯ ಇಕ್ಕೆಲಗಳಲ್ಲಿ ಗೋಡೆ ನಿರ್ಮಿಸಿದ್ದ ಘಟನೆ ನಮ್ಮ ಕಣ್ಣಮುಂದೆಯೇ ಇದೆ. ಇನ್ನೊಂದೆಡೆ, ಕಣ್ಣಿಗೆ ಕಾಣದ ಅದೆಷ್ಟೋ ಗೋಡೆಗಳು ಇಲ್ಲಿವೆ. ಯುದ್ಧ, ಅಸಮಾನತೆಯಂತಹ ಗೋಡೆಗಳ ನಿರ್ಮಾಣವು ನಮಗೆ ನಾವೇ ಮಾಡಿಕೊಂಡ ಗಾಯಗಳಾಗಿವೆ. ಗೋಡೆ ಪ್ರತ್ಯೇಕಿಸುವ ಪ್ರತೀಕವಾದರೆ, ಸೇತುವೆ ಸಂಬಂಧ ಬೆಸೆಯುವ ಪ್ರತೀಕ. ಹಾಗಾಗಿ, ಕಟ್ಟುವುದಾದರೆ ಸೇತುವೆಯನ್ನೇ ಕಟ್ಟೋಣ’ ಎಂದು ಹೇಳಿದರು.