ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಕಳವು: 426 ಬೈಕ್‌ ಜಪ್ತಿ, 118 ಆರೋಪಿಗಳ ಸೆರೆ

Published 1 ಡಿಸೆಂಬರ್ 2023, 15:56 IST
Last Updated 1 ಡಿಸೆಂಬರ್ 2023, 15:56 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ವರ್ಷದ ಅವಧಿಯಲ್ಲಿ ಕಳವು ಮಾಡಲಾಗಿದ್ದ 426 ಬೈಕ್‌ಗಳನ್ನು ಪಶ್ಚಿಮ ವಿಭಾಗದ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ಬೈಕ್‌ ಕಳವು ಪ್ರಕರಣಗಳಲ್ಲಿ 118 ಮಂದಿಯನ್ನು ಬಂಧಿಸಿದ್ದಾರೆ. ಜಪ್ತಿ ಮಾಡಿಕೊಂಡ ಬೈಕ್‌ಗಳ ಮೌಲ್ಯ ₹2.75 ಕೋಟಿಯಾಗಿದೆ ಎಂದು ಪೊಲೀಸರು ಹೇಳಿದರು.

‘ಜಪ್ತಿ ಮಾಡಿಕೊಂಡ ಬೈಕ್‌ಗಳಲ್ಲಿ 291 ಬೈಕ್‌ಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. 135 ಬೈಕ್‌ಗಳು ವಿವಿಧ ಪೊಲೀಸ್ ಠಾಣೆಗಳಲ್ಲಿದ್ದು, ಅವುಗಳನ್ನು ವಾರಸುದಾರರಿಗೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು.

ಉಪ್ಪಾರಪೇಟೆ ಪೊಲೀಸರು 5, ಸಿಟಿ ಮಾರುಕಟ್ಟೆ 13, ಕಲಾಸಿಪಾಳ್ಯ 18, ಕಾಟನ್‌ಪೇಟೆ 55, ಚಾಮರಾಜಪೇಟೆ 6, ಜೆಜೆ ನಗರ 37, ಬ್ಯಾಟರಾಯನಪುರ 47, ಚಂದ್ರಾಲೇಔಟ್‌ 14, ಆರ್‌.ಆರ್.ನಗರ 16, ಕೆಂಗೇರಿ 22, ಬ್ಯಾಡರಹಳ್ಳಿ 27, ಅಂಜನಾಪುರ 30, ಜ್ಞಾನಭಾರತಿ 25, ವಿಜಯನಗರ 29, ಮಾಗಡಿ ರಸ್ತೆ 7, ಕೆ.ಪಿ.ಅಗ್ರಹಾರ 13, ಬಸವೇಶ್ವರ ನಗರ 11, ಕಾಮಾಕ್ಷಿಪಾಳ್ಯ 36, ಗೋವಿಂದರಾನಗರ ಪೊಲೀಸರು 15 ಬೈಕ್‌ಗಳನ್ನು ಇದುವರೆಗೆ ಜಪ್ತಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT