ಕೆ.ನಾರಾಯಣಪುರ ವಿಲ್ಲಾ ನಿವಾಸಿಯೊಬ್ಬರು ಮನೆಯ ಮಹಡಿ ಬಾಗಿಲು ಹಾಕಲು ಮರೆತು, ನಿದ್ರೆಗೆ ಜಾರಿದ್ದರು. ವಾಚ್, ಮೊಬೈಲ್, ಪರ್ಸ್ ಊಟದ ಟೇಬಲ್ ಮೇಲೆ ಇರಿಸಿದ್ದರು. ಮಾರನೇ ದಿನ ಬೆಳಿಗ್ಗೆ ನೋಡಿದಾಗ ವಸ್ತುಗಳು ಕಳವಾಗಿದ್ದವು. ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ವೇಳೆ ದೊರೆತ ಸುಳಿವು ಆಧರಿಸಿ ಆರೋಪಿಯನ್ನು ಬಂಧಿಸಿ, ಕಳವು ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸರು ಹೇಳಿದ್ದಾರೆ.