ಬೆಂಗಳೂರು: ಮನೆ ಮಾಲೀಕರೊಬ್ಬರು ಶೂ ರ್ಯಾಕ್ ಕೆಳಗೆ ಕೀ ಇರಿಸಿ ಹೋಗಿದ್ದನ್ನು ಗಮನಿಸಿ, ಅದರಿಂದ ಬೀಗ ತೆಗೆದು ಚಿನ್ನಾಭರಣ ಕಳವು ಮಾಡಿದ್ದ ಸರಕು ಸಾಗಣೆ ವಾಹನದ ಚಾಲಕನನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹದೇವಪುರದ ಪ್ರದೀಪ್ (35) ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ ₹ 6 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

‘ಕಳವು ಪ್ರಕರಣಗಳಲ್ಲಿ ಈ ಹಿಂದೆ ಈತನನ್ನು ಹಲವು ಬಾರಿ ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ನಂತರ, ಸರಕು ಸಾಗಣೆ ವಾಹನದ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಮಾರ್ಚ್ 19ರಂದು ಮಹದೇವಪುರದ ಮನೆಯೊಂದಕ್ಕೆ ಸರಕು ಸಾಗಣೆ ಮಾಡುತ್ತಿದ್ದ ವೇಳೆ ಮನೆ ಮಾಲೀಕರೊಬ್ಬರು, ಶೂ ರ್ಯಾಕ್ ಕೆಳಗೆ ಕೀ ಇಟ್ಟು ಹೋಗಿರುವುದನ್ನು ಗಮನಿಸಿದ್ದ. ಅವರು ಹೋದ ಬಳಿಕ ಕೀತೆಗೆದುಕೊಂಡು ಮನೆಯ ಬೀಗ ತೆಗೆದು ಮನೆಯೊಳಗೆ ನುಗ್ಗಿ ಬೀರು ಒಡೆದು ₹6 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ. ಇತ್ತ ಕೆಲಸ ಮುಗಿಸಿಕೊಂಡು ಮನೆ ಮಾಲೀಕರು ಹಿಂತಿರುಗಿದಾಗ ಕಳವು ನಡೆದಿರುವುದು ಗೊತ್ತಾಗಿತ್ತು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.