ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ಕೃ. ಗೋಕಾಕರ ಕೃತಿಗಳಲ್ಲಿ ನವ್ಯಕಾವ್ಯದ ಸೂಕ್ಷ್ಮತೆ: ಕಂಬಾರ

Last Updated 9 ಜುಲೈ 2019, 19:22 IST
ಅಕ್ಷರ ಗಾತ್ರ

ಬೆಂಗಳೂರು:‘ನವ್ಯಕಾವ್ಯದ ಸೂಕ್ಷ್ಮತೆ ಅರಿಯಬೇಕಾದರೆ ವಿ.ಕೃ.ಗೋಕಾಕರ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಹೇಳಿದರು.

‘ವಿ.ಕೃ. ಗೋಕಾಕ ಅವರ ಜೀವನ ಮತ್ತು ಸಾಹಿತ್ಯ–ಸಮಕಾಲೀನ ಸ್ಪಂದನೆ’ ಕುರಿತು ನಗರದಲ್ಲಿ ಮಂಗಳವಾರ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು,‘ಗೋಕಾಕರ ಸಾಹಿತ್ಯ ಕುರಿತಾದ ವಿಚಾರ ಸಂಕಿರಣಗಳು ರಾಷ್ಟ್ರಮಟ್ಟದಲ್ಲಿ ನಡೆಯಬೇಕು. ಇದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಎಲ್ಲ ನೆರವು ನೀಡಲಿದೆ’ ಎಂದರು.

‘ಕನ್ನಡ ಸಾಹಿತ್ಯವನ್ನು ಹಲವರು ಶ್ರೀಮಂತಗೊಳಿಸಿದ್ದಾರೆ. ಆದರೆ, ಕನ್ನಡದ ಸಾಹಿತಿಗಳಿಗೆ ಪಾಶ್ಚಿಮಾತ್ಯರ ಇಂಗ್ಲಿಷ್‌ ಸಾಹಿತ್ಯವನ್ನು ವಿಮರ್ಶಿಸುವ ಶಕ್ತಿ ಇದೆ ಎಂದು ತೋರಿಸಿಕೊಟ್ಟವರು ಗೋಕಾಕರು’ ಎಂದು ಅವರು ಹೇಳಿದರು.

ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ‘ಯುವ ಸಾಹಿತಿಗಳು ಹಳೆಯ ತಲೆಮಾರಿನ ಸಾಹಿತ್ಯ ಓದಿಕೊಂಡು ಹೊಸತನವನ್ನು ಕಟ್ಟಬೇಕು. ಎರಡೂ ಪ್ರಕಾರಗಳನ್ನು ಗಮನಿಸಿ, ಹೊಸ ಪರಂಪರೆಯ ಕೃತಿಗಳನ್ನು ರಚಿಸಬೇಕು’ ಎಂದು ಅವರು ಸಲಹೆ ನೀಡಿದರು.

‘ಗೋಕಾಕರ ಸಾಹಿತ್ಯದಲ್ಲಿ ಪಾಶ್ಚಿಮಾತ್ಯ ಮತ್ತು ಭಾರತೀಯತೆಯಂತಹ ಎರಡೂ ಲಕ್ಷಣಗಳನ್ನು ಕಾಣಬಹುದು’ ಎಂದರು.

‘ಗೋಕಾಕರ ವಿಮರ್ಶಾ ಪರಿಕಲ್ಪನೆಗಳು’ ಕುರಿತು ಮಾತನಾಡಿದ ವಿಮರ್ಶಕ ವಿಕ್ರಮ ವಿಸಾಜಿ, ‘ತಮ್ಮ 18ನೇ ವಯಸ್ಸಿನಿಂದಲೇ ಗೋಕಾಕ ಅವರು ಕೃತಿಗಳ ವಿಮರ್ಶೆ ಮಾಡಲು ಆರಂಭಿಸಿದರು. ಸುಮಾರು ಆರು ದಶಕಗಳವರೆಗೆ ಅವರು ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು’ ಎಂದರು.

‘ವಿಮರ್ಶೆಯಲ್ಲಿ, ಸಾಹಿತ್ಯದಲ್ಲಿ ಸಮನ್ವಯ ದೃಷ್ಟಿಕೋನ ಇರಬೇಕು ಎಂದು ಅವರು ಹೇಳುತ್ತಿದ್ದರು. ಮುಗ್ಧತೆ ಮತ್ತು ಮರುಪರಿಶೀಲನೆಯ ಗುಣ ಅವರಲ್ಲಿತ್ತು. ಕೃತಿಗಳಲ್ಲಿ ಕಲಾಪ್ರಜ್ಞೆ, ಅಧ್ಯಾತ್ಮ ಪ್ರಜ್ಞೆ ಹಾಗೂ ಸಾಮಾಜಿಕ ಪ್ರಜ್ಞೆಯನ್ನು ಅವರು ಹುಡುಕುತ್ತಿದ್ದರು’ ಎಂದರು.

**

ಕೃತಿ: ನವ್ಯತೆ
ಲೇಖಕರು: ವಿ.ಕೃ. ಗೋಕಾಕ್
ಪ್ರಕಾಶನ: ಅಭಿನವ
ಬೆಲೆ: ₹175
ಪುಟಗಳು: 160

**
ಕೃತಿ: ಸಮುದ್ರದಾಚೆಯಿಂದ
ಲೇಖಕರು: ವಿ.ಕೃ. ಗೋಕಾಕ್
ಪ್ರಕಾಶನ: ಅಭಿನವ
ಬೆಲೆ: ₹200
ಪುಟಗಳು: 228

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT