ಬೆಂಗಳೂರು: ‘ಸಮಗ್ರ ಕೌಶಲ ಅಭಿವೃದ್ಧಿ ತರಬೇತಿ ನೀಡುತ್ತಿರುವ ‘ವಿದ್ಯಾ’ ದಕ್ಷಿಣ ವಲಯದ 15ನೇ ವಾರ್ಷಿಕೋತ್ಸವ ಸಮಾರಂಭವು ಜೆ.ಸಿ. ರಸ್ತೆಯಲ್ಲಿರುವ ಟೌನ್ಹಾಲ್ನಲ್ಲಿ ನ.23ರ ಸಂಜೆ 4.30ಕ್ಕೆ ನಡೆಯಲಿದೆ’ ಎಂದು ವಿದ್ಯಾ ಎನ್ಜಿಒನ ಸಂಸ್ಥಾಪಕಿ ರಶ್ಮಿ ಮಿಶ್ರಾ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ವಿದ್ಯಾ ದಕ್ಷಿಣ ವಲಯವು ಬೆಂಗಳೂರಿನಲ್ಲಿ ಎರಡು ಹಾಗೂ ಚೆನ್ನೈನಲ್ಲಿ ಒಂದು ಕೇಂದ್ರ ಹೊಂದಿದೆ. ಇದುವರೆಗೆ 146 ಯೋಜನೆಗಳನ್ನು ಜಾರಿಗೊಳಿಸಿದೆ’ ಎಂದು ಹೇಳಿದರು.

‘ವಿದ್ಯಾ ಒಂದು ಸರ್ಕಾರೇತರ ಸಂಸ್ಥೆಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಯುವಜನರು ಹಾಗೂ ಮಹಿಳೆಯರ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಕೌಶಲ ಅಭಿವೃದ್ಧಿ ತರಬೇತಿಗಳನ್ನು ನೀಡುತ್ತದೆ. ಶಿಕ್ಷಣ, ಕೌಶಲ ಅಭಿವೃದ್ಧಿ ತರಬೇತಿಗೆ ಸಂಬಂಧಿಸಿದ 300ಕ್ಕೂ ಹೆಚ್ಚು ಯೋಜನೆಗಳು 8 ಲಕ್ಷಕ್ಕೂ ಹೆಚ್ಚು ಜನರನ್ನು ನೇರವಾಗಿ ತಲುಪಿದೆ. ಪರೋಕ್ಷವಾಗಿ 24 ಲಕ್ಷ ಮಕ್ಕಳು, ಯುವಕರು, ಮಹಿಳೆಯರ ಮೇಲೆ ಪರಿಣಾಮ ಬೀರಿದೆ’ ಎಂದು ಮಾಹಿತಿ ನೀಡಿದರು.

‘ವಿದ್ಯಾ ಸಂಸ್ಥೆಯ ದೆಹಲಿಯ ಗುರುಗ್ರಾಮ, ಹಿಮಾಚಲ ಪ್ರದೇಶದ ದಾದ್, ಲಖನೌ, ವಾರಾಣಸಿ, ಮುಂಬೈ, ಪುಣೆ, ಗೋವಾ, ಬೆಂಗಳೂರು, ಶಿವಮೊಗ್ಗ, ಮಡಿಕೇರಿ, ಭಟ್ಕಳ, ಮುರ್ಡೇಶ್ವರ ಮತ್ತು ಚೆನ್ನೈನಲ್ಲಿನ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಡಿಜಿಟಲ್ ಸಾಕ್ಷರತೆ, ವೃತ್ತಿಪರ ತರಬೇತಿ ಮತ್ತು ಸಮುದಾಯ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ’ ಎಂದು ತಿಳಿಸಿದರು.

‘ವಿದ್ಯಾ ದಕ್ಷಿಣ ವಲಯದ ವಾರ್ಷಿಕೋತ್ಸದಲ್ಲಿ ಕರ್ನಾಟಕ ಡಿಜಿಟಲ್ ಆರ್ಥಿಕ ಮಿಷನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ್ ಕುಮಾರ್ ಗುಪ್ತಾ ಅವರು ಸಮಾರಂಭದ ಅತಿಥಿಯಾಗಿ ಭಾಗವಹಿಸಲಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.