ಬೆಂಗಳೂರು: ‘ಹಣ ಹೂಡಿಕೆ ಮೇಲೆ ಶೇ 50ರಷ್ಟು ಲಾಭ’ ಎಂಬುದಾಗಿ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಬಂದ ಜಾಹೀರಾತು ನಂಬಿ ನಗರದ ನಿವಾಸಿಯೊಬ್ಬರು ₹ 20.99 ಲಕ್ಷ ಕಳೆದುಕೊಂಡಿದ್ದು, ಈ ಸಂಬಂಧ ದಕ್ಷಿಣ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಬನಶಂಕರಿ 5ನೇ ಹಂತದ 55 ವರ್ಷದ ನಿವಾಸಿಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ದೂರುದಾರರು ಖಾತೆ ಹೊಂದಿದ್ದಾರೆ. ಹೂಡಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಅವರು, ಕೆಲ ಜಾಲತಾಣಗಳ ಸದಸ್ಯರಾಗಿದ್ದರು. ಅಲ್ಲಿಯೇ ಹಣ ಹೂಡಿಕೆ ಮಾಡಿದ್ದರು. 2022ರಲ್ಲಿ ವಾಟ್ಸ್‌ಆ್ಯಪ್ ಗ್ರೂಪ್‌ವೊಂದರಲ್ಲಿ ದೂರುದಾರರ ಮೊಬೈಲ್ ನಂಬರ್ ಸೇರಿಸಿದ್ದ ಆರೋಪಿಗಳು, ಹೂಡಿಕೆ ಮೇಲೆ ಶೇ 50ರಷ್ಟು ಲಾಭ ನೀಡುವುದಾಗಿ ಜಾಹೀರಾತು ನೀಡಿದ್ದರು.’
‘ಆರೋಪಿಗಳ ಜಾಹೀರಾತು ನಂಬಿದ್ದ ದೂರುದಾರ, ಹಂತ ಹಂತವಾಗಿ ₹ 20.99 ಲಕ್ಷ ಹೂಡಿಕೆ ಮಾಡಿದ್ದರು. ಹಣ ಪಡೆದಿದ್ದ ಆರೋಪಿಗಳು, ಯಾವುದೇ ಲಾಭ ನೀಡದೇ ವಂಚಿಸಿದ್ದಾರೆ. ಅಸಲು ಹಣವನ್ನೂ ವಾಪಸು ನೀಡಿಲ್ಲವೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.