* ವಾಟರ್‌ಟ್ಯಾಂಕ್ ಜಂಕ್ಷನ್, ರಾಧಾಕೃಷ್ಣ ಚಿತ್ರಮಂದಿರ ಹಾಗೂ ಮಠದಹಳ್ಳಿ ಕಡೆಯಿಂದ ಆರ್.ಟಿ. ನಗರ ಮುಖ್ಯರಸ್ತೆ ಹಾಗೂ ಸಿಬಿಐ ಮುಖ್ಯರಸ್ತೆಗೆ ಚಲಿಸುವ ಇತರೆ ವಾಹನಗಳು ರವೀಂದ್ರನಾಥ್ ಟ್ಯಾಗೋರ್ ವೃತ್ತದಿಂದ (ಗುಂಡೂರಾವ್ ಜಂಕ್ಷನ್) ಬಳಿ ಎಡ ತಿರುವು ಪಡೆದು ತರಳಬಾಳು ರಸ್ತೆ ಮೂಲಕ ಬಳ್ಳಾರಿ ಮುಖ್ಯರಸ್ತೆಗೆ ಬಂದು ಎಡ ತಿರುವು ಪಡೆದುಕೊಳ್ಳಬೇಕು. ನಂತರ, ಮೇಕ್ರಿ ವೃತ್ತದ ಬಳಿ ಯು–ಟರ್ನ್ ಪಡೆದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಿಂದ ಸಿಬಿಐ ಕೆಳಸೇತುವೆ ಬಳಿ ಬಲಕ್ಕೆ ತಿರುವು ಪಡೆದುಕೊಂಡು ಆರ್‌ಟಿ ನಗರ ಮುಖ್ಯರಸ್ತೆ ಹಾಗೂ ಸಿಬಿಐ ಮುಖ್ಯರಸ್ತೆಗೆ ಸಂಚರಿಸಬಹುದು ಎಂದು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.