ಸೋಮವಾರ, ಮಾರ್ಚ್ 30, 2020
19 °C

ಮಹಿಳಾ ಪೊಲೀಸ್ ಗಸ್ತು ಪಡೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಮೊದಲ ಮಹಿಳಾ ಪೊಲೀಸ್ ಗಸ್ತು ಪಡೆಗೆ ಬುಧವಾರ ಚಾಲನೆ ನೀಡಲಾಯಿತು. ಆಗ್ನೇಯ ವಿಭಾಗದಲ್ಲಿ ಈ ಗಸ್ತು ಪಡೆಯನ್ನು ರಚಿಸಲಾಗಿದ್ದು, ಪ್ರತಿಯೊಂದು ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಡೆಯಲ್ಲಿದ್ದಾರೆ. ಹೊಯ್ಸಳ ವಾಹನ ಹಾಗೂ ಬೈಕ್‌ನಲ್ಲಿ ಗಸ್ತು ತಿರುಗಲಿದ್ದಾರೆ.

ಕೋರಮಂಗಲದ ಬಿಬಿಎಂಪಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ಪ್ರೇಮಾ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿದ್ದ ನಟಿ ರಾಗಿಣಿ, ‘ಪೊಲೀಸ್ ಇಲಾಖೆಯಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದೀಗ ಇವರೆಲ್ಲ ಗಸ್ತು ತಿರುಗಲಿದ್ದಾರೆ. ಇದರಿಂದ ಮಹಿಳೆಯರು ಧೈರ್ಯವಾಗಿ ಓಡಾಡಬಹುದು’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು