ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ನಡುವೆ ಮಾರಾಮಾರಿ: ಇಬ್ಬರು ಅಸ್ವಸ್ಥ

ನಿಯಮ ಮೀರಿ ಮದ್ಯ ಮಾರಾಟ I ಅಮಲಿನಲ್ಲಿ ಹೊಡೆದಾಟ
Last Updated 25 ಜುಲೈ 2022, 2:32 IST
ಅಕ್ಷರ ಗಾತ್ರ

ದೇವನಹಳ್ಳಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಚಿಕ್ಕಸಣ್ಣೆ ಗೇಟ್‌ ಬಳಿ ಉತ್ತರ ಭಾರತ ಮೂಲದ ಕಾರ್ಮಿಕರು ದೊಣ್ಣೆಗಳನ್ನು ಹಿಡಿದು, ಮೆರವಣಿಗೆ ಮಾಡಿ ರೌಡಿ ಪ್ರವೃತಿ ತೊರುವುದರೊಂದಿಗೆ ಸೂಪರ್‌ವೈಸರ್‌ಗಳಿಗೆ ಹೊಡೆದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಸುಮಾರು 30 ಕ್ಕೂ ಅಧಿಕ ಕಾರ್ಮಿಕರು ದೊಣ್ಣೆಗಳನ್ನು ಹಿಡಿದು ಸರ್ವಿಸ್‌ ರಸ್ತೆಯಲ್ಲಿದ್ದ ಎಲ್ಲರನ್ನು ಬೆದರಿಕೆ ಹಾಕಿದ್ದಾರೆ. ಸಿಕ್ಕ ಸಿಕ್ಕ ಸ್ಥಳೀಯರನ್ನು ಸೇರಿದಂತೆ ಅವರ ಸಹೋದ್ಯೋಗಿಗಳನ್ನು ಹೊಡೆದು ದೈಹಿಕವಾಗಿ ಹಲ್ಲೆ ಮಾಡಿದ್ದಾರೆ.

ಘಟನೆ ಸಂಬಂಧ ತುರ್ತು ಸೇವೆಗಳಿಗೆ ಕರೆ ಮಾಡಿದ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಯಾವುದೇ ಆಂಬುಲೆನ್ಸ್‌ ಹಾಗೂ ಪೊಲೀಸ್‌ ಸಹಾಯ ಬರಲು ತಡವಾಗಿದ್ದು, ಇಬ್ಬರು ಗಾಯಾಳುಗಳನ್ನು ರಕ್ಷಿಸಲಾಗಿದೆ.

ಆಂತರಿಕ ಗಲಾಟೆಯಿಂದ ಸರ್ವಿಸ್‌ ರಸ್ತೆಯಲ್ಲಿದ್ದ ಮದ್ಯದಂಗಡಿಯಲ್ಲಿ ಮದ್ಯ ಕುಡಿದ ಕಿಡಿಗೇಡಿಗಳು, ದೊಣ್ಣೆಗಳನ್ನು ಹಿಡಿದು, ಹೊಟೇಲ್‌ ಹಾಗೂ ಚಿಕ್ಕನ್‌ ಅಂಗಡಿಗಳಿಗೆ ನುಗ್ಗಿ ದಾಂಧಲೆ ಮಾಡಿದ್ದಾರೆ.

ಸ್ಥಳೀಯವಾಗಿ ಕೇವಲ ಮದ್ಯ ಮಾರಾಟ ಸನ್ನದ್ದನ್ನು ಹೊಂದಿರುವ ಅಂಗಡಿಯವರು ಅಲ್ಲಿಯೇ ಅದನ್ನು ಸೇವಿಸಲು ಅವಕಾಶ ನೀಡಿದಾರ ಪರಿಣಾಮ, ಗಲಾಟೆ ಸಂಭವಿಸಿದೆ. ಪ್ರಜ್ಞೆಯಿಲ್ಲದೇ ಸಿಕ್ಕ ಸಿಕ್ಕವರನ್ನೆಲ್ಲಾ ಹೊಡೆದಾಟ ಮಾಡಿ ಪ್ರಾಣಕ್ಕೆ ಹಾನಿ ಮಾಡುವ ರೀತಿಯಲ್ಲಿ ಪ್ರತಿ ವಾರ್ಯಾಂತ್ಯದಲ್ಲಿ ವರ್ತಿಸಲಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಶಾಂತಿಯಿಂದ ಜೀವನ ನಡೆಸುತ್ತಿರುವ ಪಟ್ಟಣದಲ್ಲಿ ಕಟ್ಟಡ ಕಾರ್ಮಿಕರನ್ನಾಗಿ ಉತ್ತರ ಭಾರತದವನ್ನು ಕರೆತಂದು, ಸ್ಥಳೀಯರ ಮೇಲೆ ಹಲ್ಲೆ ನಡೆಸಲು ಕುಮ್ಮಕ್ಕು ನೀಡುತ್ತಿರುವ ಖಾಸಗಿ ಕಂಪನಿಗಳು ಇದರ ಜವಾಬ್ದಾರಿ ಹೊರಬೇಕೆಂದು ಸ್ಥಳೀಯ ನಿವಾಸಿ ಗೋಪಿ ಎಂಬುವವರು ಒತ್ತಾಯಿಸದ್ಧಾರೆ.

ಅಟ್ಟಾಡಿಸಿಕೊಂಡು ಯಾರ ಭಯವೂ ಇಲ್ಲದೇ ದೊಣ್ಣೆಗಳಿಂದ ಹಲ್ಲೆ ಮಾಡುವ ಸಾಕಷ್ಟು ಕಾರ್ಮಿಕರು ಬಾಂಗ್ಲಾ ನಿವಾಸಿಗಳಾಗಿದ್ದು,ಅವನರನ್ನು ಇಲ್ಲಿಗೆ ತಂದು ಅನಧಿಕೃತವಾಗಿ ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ಮಂಜುನಾಥ್‌ ಆರೋಪಿಸಿದರು.

ದೇವನಹಳ್ಳಿಯಲ್ಲಿ ಮದ್ಯ ಮಾರಾಟವೂ ನಿಯಮಗಳನ್ನು ಮೀರಿ ಆಗುತ್ತಿದ್ದು, ಸಿಕ್ಕ ಸಿಕ್ಕಲೆಲ್ಲಾ ಬಾಟಲಿಗಳ ಮಾರಾಟ ಮಾಡಲಾಗುತ್ತಿರುವ ಪರಿಣಾಮ ಸಂಸಾರಸ್ಥರು, ಮಹಿಳೆಯರು ರಸ್ತೆಯಲ್ಲಿ ಹೋಗಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಕನ್ನಮಂಗಲ ಪಾಳ್ಯದ ನಿವಾಸಿ ಶೇಖರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT