ಬೆಂಗಳೂರು: ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಸೇಂಟ್ ಥೆರೆಸಾ ತಥಾಗತ್ ಹಾರ್ಟ್ ಕೇರ್ ಸೆಂಟರ್ ಸೆ.29ರಂದು ನಗರದಲ್ಲಿ ‘ಹೃದಯದ ಆರೋಗ್ಯಕ್ಕಾಗಿ ನಾಲ್ಕು ಹೆಜ್ಜೆ’ ಎಂಬ ಧ್ಯೇಯದೊಂದಿಗೆ ವಾಕಥಾನ್ ಹಮ್ಮಿಕೊಂಡಿದೆ.

ರಾಜಾಜಿನಗರದ ಸೇಂಟ್ ಥೆರೆಸಾ ತಥಾಗತ್ ಹಾರ್ಟ್ ಕೇರ್ ಸೆಂಟರ್ ಆವರಣದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೋಮವಾರ ಬೆಳಗ್ಗೆ 8ಕ್ಕೆ ವಾಕಥಾನ್ಗೆ ಚಾಲನೆ ನೀಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಉದ್ಘಾಟಿಸಲಿದ್ದಾರೆ.

ಸಚಿವರೊಂದಿಗೆ ಶಾಸಕ ಗೋಪಾಲಯ್ಯ,ಜೆಸ್ಸಿ ಮರ್ಲಿನ್, ಡಾ.ಶ್ರೀಧರ್,ಯೋಗೇಶ್ ಪಚಿಶಿಯಾ,ಬಿ.ಜಿ. ಆವಟಿ, ಸವಿತಾಲಕ್ಷ್ಮಿ ಬೆಳಗಲಿ, ಎಂ.ಪಿ. ವೀಣಾ ಮಹಾಂತೇಶ್ ಅವರೂ ಹೆಜ್ಜೆ ಹಾಕಲಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ನಂತರ ಮರಳಿ ಸೇಂಟ್ ಥೆರೆಸಾ ಆಸ್ಪತ್ರೆಗೆ ತೆರಳಲಿದೆ.

ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಸಂಘ, ಸಂಸ್ಥೆಯ ಪ್ರತಿನಿಧಿಗಳು, ತಥಾಗತ್ ಆಸ್ಪತ್ರೆಯ ಸಿಬ್ಬಂದಿ ವಾಕಥಾನ್ನಲ್ಲಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಭಾಗವಹಿಸಬಹುದಾಗಿದೆ ಎಂದು ತಥಾಗತ್ ಹಾರ್ಟ್ ಕೇರ್ ಸೆಂಟರ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಮಹಾಂತೇಶ್ ಚರಂತಿಮಠ ಹಾಗೂ ನಿರ್ದೇಶಕ ಡಾ.ಶ್ರೀನಿವಾಸ್ ವೇಲು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.