ಬೆಂಗಳೂರು: ಪ್ರೀತಿ ನಿರಾಕರಿಸಿದ ಬಿ-ಫಾರ್ಮ ವಿದ್ಯಾರ್ಥಿನಿ ಯಾಮಿನಿ ಪ್ರಿಯಾಳನ್ನು ಚಾಕುವಿನಿಂದ ಕತ್ತು ಕೊಯ್ದ ಹತ್ಯೆಗೈದ ಆರೋಪಿ ವಿಘ್ನೇಶ್ ಮತ್ತು ಆತನಿಗೆ ಸಹಕಾರ ನೀಡಿದ ಹರೀಶ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರಿಯಾ ಸಂಬಂಧಿಕರು, ಕುಟುಂಬಸ್ಥರು ಹಾಗೂ ಸ್ಥಳೀಯರು ಶ್ರೀರಾಂಪುರ ಪೊಲೀಸ್ ಠಾಣೆ ಮತ್ತು ವಿಘ್ನೇಶ್ ಮನೆ ಎದುರು ಭಾನುವಾರ ಪ್ರತಿಭಟನೆ ನಡೆಸಿದರು.

‘ಕಾನೂನು ಪ್ರಕಾರ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಎನ್ಕೌಂಟರ್ ಮಾಡಬೇಕು. ಇಲ್ಲವೇ ನಮಗೆ ಒಪ್ಪಿಸಿ. ಆರೋಪಿಗಳಿಗೆ ಶಿಕ್ಷೆ ನೀಡುತ್ತೇವೆ’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಬಳಿಕ ಪೊಲೀಸರು, ಮನವೊಲಿಸಿ ಪ್ರತಿಭಟನನಿರತರನ್ನು ಕಳುಹಿಸಿದರು. ವಿಘ್ನೇಶ್ ಮನೆ ಬಳಿಯಿದ್ದ ಜನರಿಗೂ ಮನವಿ ಮಾಡಿ ಕಳುಹಿಸಿದರು. ಆರೋಪಿ ಮನೆ ಬಳಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಸ್ವತಂತ್ರಪಾಳ್ಯ ನಿವಾಸಿ ಯಾಮಿನಿ ಪ್ರಿಯಾ (20) ಅವರನ್ನು ವಿಘ್ನೇಶ್ ಅಕ್ಟೋಬರ್ 16ರಂದು ಮಂತ್ರಿಮಾಲ್ ಹಿಂಭಾಗದ ರಸ್ತೆಯ ರೈಲ್ವೆ ಹಳಿ ಬಳಿ ಕತ್ತು ಕೊಯ್ದು ಹತ್ಯೆಗೈದಿದ್ದ.
.ಶ್ರೀರಾಂಪುರದ ವಿದ್ಯಾರ್ಥಿನಿ ಯಾಮಿನಿ ಪ್ರಿಯಾ ಕೊಲೆಗೈದಿದ್ದ ವಿಘ್ನೇಶ್ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.