ಶುಕ್ರವಾರ, ಜುಲೈ 30, 2021
28 °C

‘ಯಲಹಂಕ ಕ್ಷೇತ್ರದರ್ಶನ’ ಸಂಪುಟ ರಚನೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ಕ್ಷೇತ್ರದ ಸಮಗ್ರ ಇತಿಹಾಸವನ್ನು ಪರಿಚಯಿಸುವ ‘ಯಲಹಂಕ ಕ್ಷೇತ್ರದರ್ಶನ’ ಮಹಾಸಂಪುಟವನ್ನು ಹೊರತರುವ ಯೋಜನೆಗೆ ಶಾಸಕ ಎಸ್.ಆರ್.ವಿಶ್ವನಾಥ್ ಮಿನಿವಿಧಾನಸೌಧದಲ್ಲಿ ಚಾಲನೆ ನೀಡಿದರು.

‘ಯಲಹಂಕ ವಿಧಾನಸಭಾ ಕ್ಷೇತ್ರವು ಹೆಸರಘಟ್ಟ, ದಾಸನಪುರ ಹಾಗೂ ಯಲಹಂಕ ಹೋಬಳಿಗಳನ್ನು ಹೊಂದಿದ್ದು, 202 ಗ್ರಾಮಗಳನ್ನು ಒಳಗೊಂಡಿದೆ. ಈ ಎಲ್ಲ ಹಳ್ಳಿಗಳ ಇತಿಹಾಸ, ಪರಂಪರೆ, ಸಾಧನೆ, ಕೊಡುಗೆ, ಜನಸಂಖ್ಯೆ ಮತ್ತಿತರ ವಿಷಯಗಳನ್ನು ಈ ಸಂಪುಟದಲ್ಲಿ ದಾಖಲಿಸಲಾಗುತ್ತದೆ. ಕ್ಷೇತ್ರದ ಸಂಪೂರ್ಣ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಸಂಪುಟವನ್ನು ಹೊರತರಲಾಗುವುದು’ ಎಂದು ತಿಳಿಸಿದರು.

ತಹಶೀಲ್ದಾರ್ ರಘುಮೂರ್ತಿ, ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತ ಡಾ.ಅಶೋಕ್, ಬಿಬಿಎಂಪಿ ಸದಸ್ಯೆ ಚಂದ್ರಮ್ಮ ಕೆಂಪೇಗೌಡ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿಬ್ಬೂರು ಜಯಣ್ಣ, ಎಸಿಪಿ ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.

ಜಾಗೃತಿ ಜಾಥಾ: ಮಾಸ್ಕ್ ದಿನದ ಅಂಗವಾಗಿ ಮಿನಿವಿಧಾನಸೌಧದಿಂದ ಆರಂಭವಾದ ಜಾಗೃತಿ ಜಾಥಾಗೆ ಶಾಸಕ ಎಸ್.ಆರ್.ವಿಶ್ವನಾಥ್ ಚಾಲನೆ ನೀಡಿದರು.

ಶೇಷಾದ್ರಿಪುರ ಕಾಲೇಜಿನವರೆಗೆ ಸಾಗಿದ ಜಾಥಾದಲ್ಲಿ ಜನಪ್ರತಿನಿಧಿಗಳು, ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಬಿಬಿಎಂಪಿಯ ಪೌರಕಾರ್ಮಿಕರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.