ಶುಕ್ರವಾರ, ನವೆಂಬರ್ 27, 2020
17 °C

ಬಿಬಿಎಂಪಿ ವಲಯ ಉಸ್ತುವಾರಿ ಹೊಣೆ ಮರು ಹಂಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ಎಂಟು ವಲಯಗಳ ವಿಶೇಷ ಆಯುಕ್ತರ ಉಸ್ತುವಾರಿಯನ್ನು ಮರುಹಂಚಿಕೆ ಮಾಡಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಆದೇಶ ಮಾಡಿದ್ದಾರೆ.

ಪಾಲಿಕೆಗೆ ನಿಯೋಜನೆಗೊಂಡಿರುವ ವಿಶೇಷ ಆಯುಕ್ತರು ಹಾಗೂ ಹೆಚ್ಚುವರಿ ಆಯುಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಒಟ್ಟು ಆರು ಮಂದಿ ಐಎಎಸ್‌ ಅಧಿಕಾರಿಗಳು ವಿಶೇಷ/ ಹೆಚ್ಚುವರಿ ಆಯುಕ್ತರರಾಗಿ ಬಿಬಿಎಂಪಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವರೆಲ್ಲರಿಗೂ ವಲಯಗಳ ಉಸ್ತುವಾರಿ ವಹಿಸಲಾಗಿದೆ. 

ಈ ಹಿಂದೆ ಆರ್‌.ಆರ್‌.ನಗರ ಹಾಗೂ ಬೊಮ್ಮನಹಳ್ಳಿ ವಲಯಗಳ ಉಸ್ತುವಾರಿಯನ್ನು ಒಬ್ಬರಿಗೇ ವಹಿಸಲಾಗಿತ್ತು. ಈಗ ಈ ಎರಡು ವಲಯಗಳಿಗೆ ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಲಾಗಿದೆ. ಹೆಚ್ಚುವರಿ ಆಯುಕ್ತ ಜೆ.ಮಂಜುನಾಥ್‌ ಅವರಿಗೆ ಒಟ್ಟು ಮೂರು ವಲಯಗಳ ಹೊಣೆ ವಹಿಸಲಾಗಿದೆ.

ವಲಯಗಳ ವಿಶೇಷ ಆಯುಕ್ತರು

ಪೂರ್ವ; ಮನೋಜ್‌ ಜೈನ್‌, ವಿಶೇಷ ಆಯುಕ್ತರು, ಯೋಜನೆ

ದಕ್ಷಿಣ; ತುಳಸಿ ಮದ್ದಿನೇನಿ, ವಿಶೇಷ ಆಯುಕ್ತರು, ಹಣಕಾಸು

ಆರ್‌.ಆರ್‌.ನಗರ; ಜೆ.ಮಂಜುನಾಥ್‌, ವಿಶೇಷ ಆಯುಕ್ತರು, ಆಸ್ತಿ

ಬೊಮ್ಮನಹಳ್ಳಿ; ರಾಜೇಂದ್ರ ಚೋಳನ್‌, ವಿಶೇಷ ಆಯುಕ್ತರು ಆರೋಗ್ಯ

ಮಹದೇವಪುರ; ಡಿ.ರಂದೀಪ್‌, ವಿಶೇಷ ಆಯುಕ್ತರು, ಕಸ ನಿರ್ವಹಣೆ

ಪಶ್ಚಿಮ; ಎಸ್‌.ಬಸವರಾಜು, ವಿಶೇಷ ಆಯುಕ್ತರು, ಕಂದಾಯ

ಯಲಹಂಕ ಮತ್ತು ದಾಸರಹಳ್ಳಿ; ಜೆ.ಮಂಜುನಾಥ್, ಹೆಚ್ಚುವರಿ ಆಯುಕ್ತರು ಆಡಳಿತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು