ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಮಾಣಿಕೇಶ್ವರಿ ಕಾಲೇಜಿಗೆ ಶೇ 95 ಫಲಿತಾಂಶ

Last Updated 16 ಜುಲೈ 2020, 15:50 IST
ಅಕ್ಷರ ಗಾತ್ರ

ಬೀದರ್: ಅಟೊಮಿಕ್ ಅಕಾಡೆಮಿ ಸಹಭಾಗಿತ್ವದ ನಗರದ ಮಾಣಿಕೇಶ್ವರಿ ಪದವಿಪೂರ್ವ ವಿಜ್ಞಾನ ಕಾಲೇಜು ಈ ಬಾರಿಯ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 95 ರಷ್ಟು ಫಲಿತಾಂಶ ಗಳಿಸಿ ಉತ್ತಮ ಸಾಧನೆ ಮಾಡಿದೆ.

40 ಅಗ್ರಶ್ರೇಣಿ ಹಾಗೂ 125 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಗಣಿತದಲ್ಲಿ 10 ಹಾಗೂ ಭೌತವಿಜ್ಞಾನದಲ್ಲಿ ಒಬ್ಬ ವಿದ್ಯಾರ್ಥಿ 100ಕ್ಕೆ 100 ಅಂಕ ಗಳಿಸಿದ್ದಾರೆ.

ಹರ್ಷಿಣಿ ಎಂ., ಶೇ 96, ಗೀತಾಂಜಲಿ ಶೇ 94.33, ಗೀತಾ ಎಂ., ಶೇ 93.83, ಸಂಜನಾ ಕುಲಕರ್ಣಿ ಶೇ 93.33, ಅಭಿಷೇಕ ಶೇ 93.17, ಲೋಕೇಶ ಡಿ., ಶೇ 93, ಆದಿತ್ಯ ಶೇ 93, ವರ್ಷಿತಾ ಸಿ., ಶೇ 93, ಸಂಕೇತ ಅತ್ರೆ ಶೇ 92.83, ಲಿಖಿತ್ ಎಂ.ಎಲ್., ಶೇ 92.50, ಅಮೃತ ಕೆ., ಶೇ 92.50, ಮೇತ್ರೆ ಹರೀಶ ಶೇ 92.17, ವಿಕಾಸ ಎಸ್., ಶೇ 91.16, ವೈಷ್ಣವಿ ಎಂ., ಶೇ 91, ಶ್ರುತಿ ಎಸ್., ಶೇ 90.50, ಭರತ ಗೌಡ ಶೇ 90.33, ಇಂದು ಪಿ., ಶೇ 90.16, ಸಿದ್ದಲಿಂಗ ಶೇ 89, ಯೋಗಿತಾ ಶೇ 88.66, ಹರ್ಷಿತಾ ಶೇ 88.16, ಮೋನಿಕಾ ಶೇ 88, ಸಿಂಧುಶ್ರೀ ಶೇ 87.66, ಸಾಯಿಕಿರಣ ಶೇ 87.33, ಸಂತೋಷ ಶೇ 87.33, ಐಶ್ವರ್ಯ ಶೇ 87.17, ಕಾವ್ಯ ಆರ್., 87.16, ನಿಶಾ ಶೇ 87, ಅಭಿಷೇಕ ಶೇ 86.67, ರಾಹುಲ್ ಶೇ 86.66, ದೀಪ್ತಿ ಶೇ 86.33, ಸನ್ಮಥಿ ಶೇ 86, ಮಹಾದೇವಿ 85.67, ಲಿಖಿತ 85.66, ಐಶ್ವರ್ಯ ಶೇ 85.17, ಅಭಯ ಶೇ 85 ರಷ್ಟು ಫಲಿತಾಂಶ ಪಡೆದಿದ್ದಾರೆ.

ಅಟೊಮಿಕ್ ಅಕಾಡೆಮಿಯು ಬೀದರ್ ಜಿಲ್ಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಸ್ಪರ್ಧಾತ್ಮಕ ಶಿಕ್ಷಣ ಒದಗಿಸಲು ಮಾಣಿಕೇಶ್ವರಿ ಪದವಿಪೂರ್ವ ವಿಜ್ಞಾನ ಕಾಲೇಜಿನೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಮೊಲದ ವರ್ಷದಲ್ಲೇ ಉತ್ತಮ ಫಲಿತಾಂಶ ಗಳಿಸಿದೆ.

ವಿದ್ಯಾರ್ಥಿಗಳ ಸಾಧನೆಗೆ ಮಾಣಿಕೇಶ್ವರಿ ಕಾಲೇಜು ಅಧ್ಯಕ್ಷ ರಮೇಶ ಕುಲಕರ್ಣಿ, ಅಟೊಮಿಕ್ ಅಕಾಡೆಮಿ ನಿರ್ದೇಶಕರಾದ ಪ್ರೊ. ಶ್ರೀಧರ ಎಸ್., ಪ್ರೊ. ರಾಜೇಂದ್ರ ಬಾಬು, ಕೋಶಾಧ್ಯಕ್ಷ ವಿಜಯ ಮಾನೆ, ಸದಸ್ಯ ರಘುನಂದನ, ಸುರೇಶ ಕುಲಕರ್ಣಿ, ಪ್ರಾಚಾರ್ಯ ಪ್ರೊ. ಗೋಪಿನಾಥ ನಾಯ್ಡು, ಆಡಳಿತಾಧಿಕಾರಿ ಲೋಕೇಶ ಉಡಬಾಳೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT