ಔರಾದ್: ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ ಇಲ್ಲಿಯ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಜಿ ಹುಸೇನಸಾಬ್ ಯಾದವಾಡ ಅವರ ಮಧ್ಯಸ್ಥಿಕೆಯಲ್ಲಿ ಮತ್ತೆ ಒಂದಾದರು.
ಇಬ್ಬರ ನಡುವಿನ ಪರಸ್ಪರ ಮನಸ್ತಾಪದಿಂದ ಕಳೆದ ಐದು ವರ್ಷಗಳಿಂದ ಪ್ರತ್ಯೇಕವಾಗಿ ಉಳಿದ ಹೆಡಗಾಪುರ ಗ್ರಾಮದ ರಾಜಕುಮಾರ ಹಾಗೂ ಪ್ರಿಯಾಂಕಾ ದಂಪತಿ ನ್ಯಾಯಾಧೀಶರ ಸಮ್ಮುಖದಲ್ಲಿ ಪರಸ್ಪರ ಹಾರ ಹಾಕಿಕೊಳ್ಳುವ ಮೂಲಕ ಮತ್ತೆ ಸಹ ಜೀವನಕ್ಕೆ ಪದಾರ್ಪಣೆ ಮಾಡಿದರು.
2009ರ ಮೇ ತಿಂಗಳಲ್ಲಿ ರಾಜಕುಮಾರ ಹಾಗೂ ಪ್ರಿಯಾಂಕಾ ಮದುವೆಯಾಗಿತ್ತು. 10 ವರ್ಷಗಳ ಕಾಲ ಒಂದಾಗಿ ಜೀವನ ಸಾಗಿಸಿದ ಇವರಿಗೆ ಏಳು ವರ್ಷದ ಪ್ರಶಾಂತ ಎಂಬ ಮಗ ಇದ್ದಾನೆ. ಸಂಸಾರದಲ್ಲಿ ಪರಸ್ಪರ ಮನಸ್ತಾಪದಿಂದ ಗಂಡ ರಾಜಕುಮಾರ ಇಲ್ಲಿಯ ಸಿವಿಲ್ ನ್ಯಾಯಾಲಯದಲ್ಲಿ 2020ರ ಮಾರ್ಚ್‌ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.