ಶುಕ್ರವಾರ, ಜುಲೈ 30, 2021
20 °C
ಬಸವಕಲ್ಯಾಣ, ಮೆಹಕರ್‌ದಲ್ಲಿ ಎಸಿಬಿ ಅಧಿಕಾರಿಗಳಿಂದ ದಾಳಿ

ಎಸಿಬಿ ದಾಳಿ: ಜೆಇ ಬಳಿ ದೊರೆತ ₹1.65 ಕೋಟಿ ಆಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ಇಲ್ಲಿನ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಜೆಇ ಸುರೇಶ ಮೋರೆ ಅವರ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ಗುರುವಾರ ದಿಢೀರ್‌ ದಾಳಿ ನಡೆಸಿದ್ದು, ಅವರ ಬಳಿ ₹1.65 ಕೋಟಿಗೂ ಹೆಚ್ಚಿನ ಆಸ್ತಿ ಪತ್ತೆಯಾಗಿದೆ. ನ್ಯಾಯಯುತವಾಗಿ ಅವರ ಬಳಿ ₹45 ಲಕ್ಷ ಬೆಲೆ ಬಾಳುವಷ್ಟು ಮಾತ್ರ ಆಸ್ತಿ ಇರಬೇಕಾಗಿತ್ತು.

ಎಸಿಬಿ ಕಲಬುರ್ಗಿ ಎಸ್ಪಿ ಮಹೇಶ ಮೇಘಣ್ಣನವರ್ ನೇತೃತ್ವದಲ್ಲಿ ದಾಳಿ ನಡೆದಿದೆ.

ಬಸವಕಲ್ಯಾಣ ನಗರದ ಶಿವಾಜಿ ನಗರದಲ್ಲಿನ ಮನೆ, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕಚೇರಿ, ಅವರ ಸ್ವಂತ ಊರು ಮೆಹಕರ್‌ದಲ್ಲಿನ ಮನೆ, ಅಲ್ಲಿನ ಪೆಟ್ರೋಲ್ ಪಂಪ್ ಈ ನಾಲ್ಕು ಸ್ಥಳಗಳಲ್ಲಿ ಪ್ರತ್ಯೇಕ ತಂಡಗಳಿಂದ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನದವರೆಗೆ ಮನೆಯಲ್ಲಿನ ದಾಖಲೆಗಳನ್ನು ಪರಿಶೀಲಿಸಲಾಯಿತು.

ಎಸಿಬಿ ಡಿವೈಎಸ್ಪಿ ಹಣಮಂತರಾಯ, ಸಬ್ ಇನ್‌ಸ್ಪೆಕ್ಟರ್‌ಗಳಾದ ವೆಂಕಟೇಶ, ಶರಣಬಸಪ್ಪ ಕೊಡ್ಲಾ, ಸಿಬ್ಬಂದಿ ನಿರಂಜನ ಪಾಟೀಲ, ಶ್ರೀಕಾಂತ, ಮರೆಪ್ಪ, ಕಿಶೋರ, ಅನಿಲ, ಸರಸ್ವತಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು