ಬೀದರ್: ನಗರದಲ್ಲಿ ಸೆ. 7ರಂದು ನಡೆಯಲಿರುವ ಅಖಿಲ ಕರ್ನಾಟಕ ಗಜಲ್ ದ್ವಿತೀಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಕಾಶಿನಾಥ ಅಂಬಲಗೆ ಅವರನ್ನು ಭಾನುವಾರ ಸತ್ಕರಿಸಿ ಅಧಿಕೃತವಾಗಿ ಆಹ್ವಾನಿಸಲಾಯಿತು.

ಕರ್ನಾಟಕ ಗಜಲ್ ಅಕಾಡೆಮಿ ರಾಜ್ಯ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ್ ನೇತೃತ್ವದಲ್ಲಿ ಕಲಬುರಗಿಯ ಜಯನಗರದಲ್ಲಿರುವ ಅಂಬಲಗೆ ಅವರ ಸ್ವಗೃಹಕ್ಕೆ ತೆರಳಿ ಆಹ್ವಾನ ನೀಡಲಾಯಿತು.

ಕರ್ನಾಟಕ ಗಜಲ್ ಅಕಾಡೆಮಿ ಬೆಂಗಳೂರು ಹಾಗೂ ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ಬೀದರ್ ಸಹಯೋಗದಲ್ಲಿ ಸೆ.7ರಂದು ಬೀದರ್ನ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಗಜಲ್ ಸಮ್ಮೇಳನ ನಡೆಯಲಿದೆ.

ಆಹ್ವಾನ ಸ್ವೀಕರಿಸಿದ ಕಾಶಿನಾಥ ಅಂಬಲಗೆ, ಕಾವ್ಯ ನನ್ನ ಜೀವನದ ಉಸಿರು. ಶರಣರ ನೆಲದಲ್ಲಿ ಆಯೋಜಿಸುತ್ತಿರುವ ಗಜಲ್ ಕಾವ್ಯದ ಸಂಭ್ರಮದಲ್ಲಿ ಭಾಗಿಯಾಗಲು ಖುಷಿಯಾಗುತ್ತಿದೆ. ಕನ್ನಡ, ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ತಮ್ಮ ಕೃತಿಗಳಿದ್ದು, ಗಜಲ್ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಗುರುತಿಸಿ, ಸಮ್ಮೇಳನಾಧ್ಯಕ್ಷತೆಯ ಗೌರವ ನೀಡಿದ್ದಕ್ಕಾಗಿ ಕೃತಜ್ಞನಾಗಿದ್ದೇನೆ ಎಂದು ಭಾವುಕರಾಗಿ ಹೇಳಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಸಾಹಿತಿ ಪ್ರಭು ಖಾನಾಪೂರೆ, ಗುಲ್ಬರ್ಗ ವಿಶ್ವವಿದ್ಯಾಲಯದ ಉರ್ದು ವಿಭಾಗದ ಮುಖ್ಯಸ್ಥ ಪ್ರೊ. ಅಬ್ದುಲ್ ರಬ್, ಗಜಲ್ ಕವಿಗಳಾದ ವಿಜಯಕುಮಾರ ಗೌರೆ, ಕಪಿಲ್ ಚಕ್ರವರ್ತಿ, ಗಿರಿಜಾ ಇಟಗಿ, ಸಿದ್ದರಾಮ ಸರಸಂಬಿ, ಸುವರ್ಣಾ ಕುಂಬಾರ, ಲಕ್ಷ್ಮಣ ಮೇತ್ರೆ, ರತ್ನಕಲಾ ಮಹಿಪಾಲರೆಡ್ಡಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.