ಭಾಲ್ಕಿ: ‘ಡಾ.ಅಂಬೇಡ್ಕರ್ ಅವರು ದೀನ, ದಲಿತೋದ್ಧಾರ ಕಾರ್ಯಗಳ ಮೂಲಕ ನೊಂದವರ ಬಾಳಿನ ಬೆಳಕಾಗಿದ್ದರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟ ಹಾಗೂ ಡಾ.ಅಂಬೇಡ್ಕರ್ ಭಜನ ಮಂಡಳಿ ಸಹಯೋಗದಲ್ಲಿ ಅಂಬೇಡ್ಕರರ ಮಹಾಪರಿನಿರ್ವಾಣ ದಿನದ ಅಂಗವಾಗಿ ಆಯೋಜಿಸಿದ್ದ ಶ್ರದ್ಧಾ ಸುಮನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಡಾ.ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ನಾನು ಶಾಸಕನಾಗಿ, ಜಿಲ್ಲಾ ಉಸ್ತುವಾರಿ ಸಚಿವನಾಗಿ ಭಾಲ್ಕಿ ಸೇರಿದಂತೆ ಬೀದರ್ ಜಿಲ್ಲೆಯ ಸಮಗ್ರ ವಿಕಾಸಕ್ಕಾಗಿ ಶ್ರಮಿಸುತ್ತಿದ್ದೇನೆ. ಕೊಟ್ಟ ಮಾತಿನಂತೆ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ. ಕೆಕೆಆರ್ಡಿಬಿಯಿಂದ ಬೃಹತ ಅನುದಾನ ಮಂಜೂರು ಮಾಡಿಸಿ, ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಯುವಜನರಿಗಾಗಿ ಪಟ್ಟಣದ ಹೊರವಲಯದಲ್ಲಿ ₹ 16 ಕೋಟಿ ವೆಚ್ಚದಲ್ಲಿ ರಾಜ್ಯಮಟ್ಟದ ಕ್ರೀಡಾಂಗಣ, ₹ 5 ಕೋಟಿ ವೆಚ್ಚದಲ್ಲಿ ಉದ್ಯಾನವನ, ಸಾರ್ವಜನಿಕ ಆಸ್ಪತ್ರೆ, ಕೋರ್ಟ್, ವಸತಿ ನಿಲಯಗಳನ್ನು ನಿರ್ಮಿಸಿ, ಸುಂದರ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ್ದೇನೆ’ ಎಂದು ಹೇಳಿದರು.

ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಆಶೀರ್ವಚನ ನೀಡಿ, ‘ಅಂಬೇಡ್ಕರ್ ಅವರು ವಿಶ್ವಗುರು ಬಸವಣ್ಣನವರ ವಚನ ಸಾಹಿತ್ಯದ ಪ್ರಭಾವಕ್ಕೊಳಗಾಗಿ ಸಂವಿಧಾನ ರಚಿಸಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಭಾಗ್ಯ ಕಲ್ಪಿಸಿದ್ದರು’ ಎಂದು ತಿಳಿಸಿದರು. ಆಣದೂರಿನ ಭಂತೆ ಜ್ಞಾನ ಸಾಗರ ಥೆರೋ ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ದಲಿತಪರ ಒಕ್ಕೂಟ ಅಧ್ಯಕ್ಷ ವಿಲಾಸ ಮೋರೆ ಮಾತನಾಡಿ, ‘ಅಂಬೇಡ್ಕರ್ ಚಿಂತನೆಗಳು ವಿಶ್ವವ್ಯಾಪಿಯಾಗಿವೆ’ ಎಂದು ಹೇಳಿದರು. ಮಹಿಳಾ ಜನಜಾಗೃತಿ ರಾಜೇಶ್ವರಿ ಮೋರೆ ಮಾತನಾಡಿದರು.

ನಾಗಪುರದ ಧಮ್ಮದೀಕ್ಷಾ ಗಾಯಕಿ, ವಿಕಾಸರಾಜ ಗೋಸಾಯಿ ತಂಡದವರು ಸಂಗೀತ ಕಾರ್ಯಕ್ರಮ ನೀಡಿದರು. ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಹಣಮಂತರಾವ ಚವಾಣ್, ಪ್ರಥಮ ದರ್ಜೆ ಗುತ್ತಿಗೆದಾರ ಶಿವು ಬಂಗಾರೆ, ಪ್ರಮುಖರಾದ ಬಸವರಾಜ ವಂಕೆ, ವಿಜಯಕುಮಾರ ರಾಜಭವನ, ಓಂಕಾರ ವಿ. ಮೋರೆ, ಅಶೋಕ ರಾಜೋಳೆ, ವಿಜಯಕುಮಾರ ಗಾಯಕವಾಡ, ಮಹೇಂದ್ರ ಮೋರೆ, ಸಂತೋಷ ಬೀರಿಕರ, ಶಶಿಕಲಾ ಅಶೋಕ, ಪ್ರಕಾಶ ಭಾವಿಕಟ್ಟೆ, ಓಂಕಾರ ಮೋರೆ, ಸಂಜುಕುಮಾರ ಭಾವಿಕಟ್ಟೆ, ಮಾರುತಿ ಭಂಗಾರೆ, ಕೀರ್ತಿರತನ ಸೋನಾಳೆ, ಜೈಪಾಲ್ ಭೋರಾಳೆ, ಶಿವಕುಮಾರ ಮೇತ್ರೆ, ಧನರಾಜ ಕುಂದೆ ಹಾಜರಿದ್ದರು.

ದಲಿತ ಪ್ಯಾಂಥರ್ ಅಧ್ಯಕ್ಷ ಕೈಲಾಸ ಭಾವಿಕಟ್ಟೆ ನಿರೂಪಿಸಿದರು. ಮುಖಂಡ ಮಾರುತಿ ಭಾವಿಕಟ್ಟೆ ಸ್ವಾಗತಿಸಿದರು. ನಾರಾಯಣ ಮೋರೆ ವಂದಿಸಿದರು.

ಅಂಬೇಡ್ಕರರು ತಮ್ಮ ಜೀವನದುದ್ದಕ್ಕೂ ಅಸ್ಪೃಶ್ಯತೆ ಅನಕ್ಷರತೆ ಬಡತನ ಹೋಗಲಾಡಿಸಿ ಸಮ ಸಮಾಜ ಸ್ಥಾಪಿಸಲು ಶ್ರಮಿಸಿದ ಶ್ರೇಷ್ಠ ಜೀವಿ
ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.