ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಿರ್ಣಾ | ಮಾದರಿ ಅಂಗನವಾಡಿ ಕಟ್ಟಡ: ವರ್ಷ ಕಳೆದರೂ ಉದ್ಘಾಟನೆ ಭಾಗ್ಯವಿಲ್ಲ

ವೀರೇಶ್‌ ಎನ್.ಮಠಪತಿ
Published 11 ಜನವರಿ 2024, 6:48 IST
Last Updated 11 ಜನವರಿ 2024, 6:48 IST
ಅಕ್ಷರ ಗಾತ್ರ

ಚಿಟಗುಪ್ಪ: ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ ನಿರ್ಮಿಸಿರುವ ಮಾದರಿ ಅಂಗನವಾಡಿ ಕಟ್ಟಡ ನಿರ್ಮಾಣಗೊಂಡು ವರ್ಷ ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಬಂದಿಲ್ಲ.

ಶಿಶು ವಿಹಾರದ ಮಕ್ಕಳಿಗಾಗಿ ಹೈಟೆಕ್‌ ಸೌಲಭ್ಯಗಳನ್ನೊಳಗೊಂಡ ಅಂಗನವಾಡಿ ಕೇಂದ್ರ ಹಿಂದಿನ ಶಾಸಕ ಬಂಡೆಪ್ಪ ಕಾಶಂಪೂರ್‌ ಅವರ ಪರಿಶ್ರಮದಿಂದ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 2020-24ನೇ ಸಾಲಿನಲ್ಲಿ ₹50 ಲಕ್ಷ ಅನುದಾನದಲ್ಲಿ ನಿರ್ಮಿತಿ ಕೇಂದ್ರದ ಮೂಲಕ ನಿರ್ಮಿಸಲಾಗಿದೆ. ಆದರೆ ಇರುವರೆಗೂ ಕೇಂದ್ರಕ್ಕೆ ಉದ್ಘಾಟನಾ ಭಾಗ್ಯ ಬಾರದಿರುವುದಕ್ಕೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಕಟ್ಟಡದ ಮುಖ್ಯ ದ್ವಾರ ಸುತ್ತು ಗೋಡೆಗಳಲ್ಲಿ ಅಂದ ಚಂದದ ಬರವಣಿಗೆಯಲ್ಲಿ ವಿವಿಧ ಬಗೆಯ ಪ್ರಾಣಿ, ಪಕ್ಷಿಗಳ ಸುಂದರ ಕಲಾಕೃತಿಗಳು ರಚಿಸಿದ್ದು ಒಳಗಡೆ ಮಕ್ಕಳ ಆಟಿಕೆ ಸಾಮಗ್ರಿಗಳು, ಅಡುಗೆ ಸಾಮಗ್ರಿಗಳು ಇಡಲಾಗಿದೆ ಆದರೂ ಕಟ್ಟಡದ ಸದ್ಬಳಕೆಯಾಗದಕ್ಕೆ ಎಲ್ಲವೂ ಹಾಳಾಗುತ್ತಿವೆ.

ಸೂಕ್ತ ನಿರ್ವಹಣೆ ಇಲ್ಲದ ಕಾರಣ ಕಟ್ಟಡದ ಒಳ ಪ್ರದೇಶ, ಪ್ರವೇಶ ದ್ವಾರದ ಸುತ್ತ ಕಸ ಹರಡಿಕೊಂಡಿದೆ.ಹುಲ್ಲು ಕಂಟಿಗಳು ಬೆಳೆಯಲಾರಂಭಿಸಿವೆ ಯಾವ ಕಾರಣಕ್ಕೆ ಕಟ್ಟಡ ಉದ್ಘಾಟನೆ ಆಗುತ್ತಿಲ್ಲ ಎಂಬ ವಿಷಯ ಯಾರಿಗೂ ತಿಳಿದಿಲ್ಲ.ಅಧಿಕಾರಿಗಳು, ಜನ ಪ್ರತಿನಿಧಿಯವರು ಉದ್ಘಾಟನೆಗೇ ಬೇಜವಾಬ್ದಾರಿ ತೋರುತ್ತಿರುವುದು ಸರಿಯಲ್ಲ ಎಂದು ಗ್ರಾಮದ ನಿವಾಸಿ ರಾಜಕುಮಾರ್‌ ಬೇಸರ ವ್ಯಕ್ತಪಡಿಸುತ್ತಾರೆ.

ಬೇಗ ಶಾಸಕರಿಂದ ದಿನಾಂಕ ಪಡೆದು ಕಟ್ಟಡ ಉದ್ಘಾಟಿಸಿ ಕೇಂದ್ರ ಆರಂಭಿಸಲಾಗುವುದು
ಶಿವಪ್ರಕಾಶ್‌, ಶಿಶು ಅಭಿವೃದ್ಧಿ ಅಧಿಕಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹುಮನಾಬಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT