ಶನಿವಾರ, ನವೆಂಬರ್ 26, 2022
22 °C

ಬಂಗಾರ ಕಳವು: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಜುಲೈ 20ರಂದು ಪಟ್ಟಣದ ಸಾಗರ ವರ್ಮಾ ಅವರಿಗೆ ಸೇರಿದ ಆರ್.ಕೆ. ಜ್ಯುವೆಲರಿಯಲ್ಲಿ 19 ತೊಲಾ 5 ಗ್ರಾಂ ಬಂಗಾರ ದೋಚಿಕೊಂಡು ಪರಾರಿಯಾಗಿದ್ದ ಮೂವರು ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ದಿಯೋನ ಅಕ್ತರ ಬಂಧಿತ. ಬಂಧಿತನಿಂದ 8 ತೊಲಾ ಬಂಗಾರ ವಶಪಡಿಸಿಕೊಳ್ಳಲಾಗಿದೆ.

ಬಿವಾಸ ಮಲಿಕ್ ಮತ್ತು ಬರನ ಬೇರಾ ಪತ್ತೆಗಾಗಿ ಶೋಧ ನಡೆದಿದೆ.

ಈ ಮೂವರು ಆರೋಪಿಗಳು ಈ ಜ್ಯುವೆಲರಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾಲೀಕರು ಆಭರಣಗಳನ್ನು ತಯಾರಿಸಿ ಕೊಡುವಂತೆ 19 ತೊಲಾ 5 ಗ್ರಾಂ ಬಂಗಾರ ನೀಡಿದ್ದರು. ಆದರೆ ಆರೋಪಿಗಳು ಆಭರಣಗಳು ತಯಾರಿಸಿ ಹಿಂದಿರುಗಿಸದೇ ದೋಚಿಕೊಂಡು ಪರಾರಿಯಾಗಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ ಬಾಬು ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ, ಎಎಸ್ಪಿ ಶಿವಾಂಶು ರಜಪೂತ, ಸಿಪಿಐ ಶರಣಬಸಪ್ಪ ಕೊಡ್ಲಾ, ಪಿಎಸ್ಐ ಮಂಜನಗೌಡ ಪಾಟೀಲ, ಅಪರಾಧ ಪಿಎಸ್ಐ ಸುರೇಶ, ಸಿಬ್ಬಂದಿ ಭಗವಾನ ಬಿರಾದಾರ, ಶಿವಾನಂದ ಹಾಗೂ ಬಾಲಾಜಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.