ಭಾರಿ ಮಳೆಯಿಂದಾಗಿ ಔರಾದ್ ತಾಲ್ಲೂಕಿನ ಬೋರಾಳ ಗ್ರಾಮದ ಸೋಪಾನ ಪಾಂಡ್ರೆ ಅವರ ಹತ್ತಿ ಬೆಳೆ ಜಲಾವೃತವಾಗಿದೆ
ಔರಾದ್ ತಾಲ್ಲೂಕಿನ ಮುಂಗನಾಳ-ಬೋರಾಳ ಸಂಪರ್ಕ ಕಲ್ಪಿಸುವ ರಸ್ತೆ ಮಳೆಗೆ ಕಿತ್ತು ಹೋಗಿದೆ
ದಲಿತ ಸಂಘರ್ಷ ಸಮಿತಿ ಮುಖಂಡರು ಔರಾದ್ ಗ್ರೇಡ್-2 ತಹಶೀಲ್ದಾರ್ ಸಂಗಯ್ಯ ಸ್ವಾಮಿ ಅವರಿಗೆ ಮನವಿ ಸಲ್ಲಿಸಿ ರೈತರಿಗೆ ಪರಿಹಾರ ನೀಡಲು ಆಗ್ರಹಿಸಿದರು

ಈ ಮಳೆಯಿಂದ ರಸ್ತೆ ಸೇತುವೆ ಹಾಗೂ ಗ್ರಾಮೀಣ ಭಾಗದ ಮನೆಗಳಿಗೆ ಹಾನಿಯಾಗಿದೆ. ಕೆಲ ಹೊಲಗಳಲ್ಲಿ ಮಣ್ಣು ಸಹಿತ ಬೆಳೆ ಕೊಚ್ಚಿಕೊಂಡು ಹೋಗಿದ್ದು ತಾಲ್ಲೂಕಿನ ರೈತರ ಸ್ಥಿತಿ ಶೋಚನೀಯವಾಗಿದೆ
ಮಹೇಶ ಪಾಟೀಲ ಔರಾದ್ ತಹಶೀಲ್ದಾರ್
ಔರಾದ್ ತಾಲ್ಲೂಕಿನ ರೈತರು ಪೂರ್ಣವಾಗಿ ಮುಂಗಾರು ಬೆಳೆಗಳ ಮೇಲೆ ಅವಲಂಬಿತರಾಗಿದ್ದಾರೆ. ಎರಡು ದಿನದಲ್ಲಿ ಸುರಿದ ಭಾರಿ ಮಳೆಯಿಂದ ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿದೆ. ಸರ್ಕಾರ ತಕ್ಷಣ ರೈತರ ನೆರವಿಗೆ ಬರಬೇಕು
ಪ್ರಕಾಶ ಬಾವುಗೆ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ