ಔರಾದ್: ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧೆಡೆಯ ಕನ್ನಡೇತರ ನಾಮಫಲಕ ತೆರವು ಮಾಡಲಾಗುತ್ತಿದೆ.

ಇಲ್ಲಿಯ ವಿವಿಧ ಕನ್ನಡಪರ ಸಂಘಟನೆಗಳು ಕಳೆದ ಎರಡು ವಾರಗಳಿಂದ ಕನ್ನಡೇತರ ನಾಮಫಲಕ ತೆರವು ಮಾಡುವಂತೆ ಸಾಕಷ್ಟು ಸಲ ಮನವಿ ಮಾಡಿದರೂ ಕೆಲ ಕಡೆ ಅನ್ಯ ಭಾಷಿಕ ನಾಮಫಲಕಗಳು ರಾರಾಜಿಸುತ್ತಿವೆ.

ತಹಶೀಲ್ದಾರ್ ಮಹೇಶ ಪಾಟೀಲ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಅನೀಲ ದೇವಕತೆ, ಕೇಶವ ಹಕ್ಕೆ, ಭೀಮ, ಬಸವರಾಜ ಚೌಕನಪಳ್ಳೆ, ಕಪಿಲ್, ಡಿ. ಕಾಂಬಳೆ, ರಾಹುಲ್, ಅಭಿಷೇಕ ಜಾಧವ್ ಅವರು ಮಂಗಳವಾರ ಪಟ್ಟಣದ ವಿವಿಧ ಅಂಗಡಿಗಳಿಗೆ ಭೇಟಿ ನೀಡಿದರು. ಸರ್ಕಾರದ ಆದೇಶದಂತೆ ನಾಮಫಲಕದಲ್ಲಿ ಶೇ 60ರಷ್ಟು ಭಾಗ ಕನ್ನಡದಲ್ಲಿ ಇರಬೇಕು. ಹೀಗಾಗಿ ಎಲ್ಲ ಅಂಗಡಿಗಳ ನಾಮಫಲಕದಲ್ಲಿ ಮೊದಲಿಗೆ ಕನ್ನಡದಲ್ಲಿ ಬರೆಸಿ ಕೆಳಗೆ ತಮಗೆ ಬೇಕಾದ ಭಾಷೆ ಬರೆಸಿಕೊಳ್ಳಿ ಎಂದು ತಹಶೀಲ್ದಾರ್ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.