ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿ: ಮಳೆಗೆ ತಂಪಾದ ಇಳೆ

Published 16 ಮೇ 2024, 14:12 IST
Last Updated 16 ಮೇ 2024, 14:12 IST
ಅಕ್ಷರ ಗಾತ್ರ

ಭಾಲ್ಕಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಒಂದು ಗಂಟೆಗೂ ಹೆಚ್ಚು ಸಮಯ ಮಳೆ ಸುರಿದಿದೆ.

ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆಗಾಲದ ತಂಪಿನ ಅನುಭವ ನೀಡಿತು. ತಾಲ್ಲೂಕಿನ ಭಾತಂಬ್ರಾ, ಆನಂದವಾಡಿ, ನಿಡೇಬನ, ತಳವಾಡ ಎಂ. ರಾಮತೀರ್ಥ ವಾಡಿ, ಕಲವಾಡಿ, ಧಾರಜವಾಡಿ, ಕದಲಾಬಾದ, ಸಿದ್ದಾಪುರ ವಾಡಿ, ಕರಡ್ಯಾಳ, ತಳವಾಡ ಸೇರಿದಂತೆ ಅನೇಕ ಕಡೆಗಳಲ್ಲಿ ಮಳೆ ಸುರಿದಿದೆ.

ಕೆಲ ಹೊಲಗಳಲ್ಲಿ ಅಲ್ಪ, ಸ್ವಲ್ಪ ನೀರು ನಿಂತಿದ್ದು ಕಂಡು ಬಂತು. ಗುರುವಾರ ಬೆಳಿಗ್ಗೆಯಿಂದ ಸಂಜೆ 4 ಗಂಟೆಯವರೆಗೆ ತುಂಬಾ ಬಿಸಿಲು, ಧಗೆಯಿಂದ ಜನರು ಬೇವರಿದ್ದರು. ಸಂಜೆ ಸುರಿದ ಮಳೆಗೆ ಎಲ್ಲೆಡೆ ತಣ್ಣನೆಯ ವಾತಾವರಣ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT