ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಿ: ಹಾಲು, ಹಣ್ಣು ವಿತರಣೆ

Last Updated 5 ಆಗಸ್ಟ್ 2019, 15:25 IST
ಅಕ್ಷರ ಗಾತ್ರ

ಬೀದರ್: ನಗರದ ಬಸವ ಕೇಂದ್ರದ ವತಿಯಿಂದ ಸೋಮವಾರ ನಾಗರ ಪಂಚಮಿ ಪ್ರಯುಕ್ತ ನೌಬಾದ್‌ನ ಅಲೆಮಾರಿ ಜನಾಂಗದ ಮಕ್ಕಳಿಗೆ ಹಾಲು, ಹಣ್ಣು ವಿತರಿಸಲಾಯಿತು.

ರಾಯಚೂರಿನ ಜ್ಞಾನ ಮಂಟಪದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ನಾಗರಪಂಚಮಿಯ ದಿನ ಜನ ಹುತ್ತಕ್ಕೆ ಹಾಲೆರೆದು ಪೋಲು ಮಾಡುವ ಬದಲು ಬಡ, ನಿರ್ಗತಿಕ ಮಕ್ಕಳಿಗೆ ನೀಡಬೇಕು. ಈ ಮೂಲಕ ಆತ್ಮತೃಪ್ತಿ ಪಡೆಯಬೇಕು’ ಎಂದು ಹೇಳಿದರು.

ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ, ಬಸವ ಕೇಂದ್ರ ಟ್ರಸ್ಟ್ ಅಧ್ಯಕ್ಷ ಪ್ರಭುರಾವ್ ವಸ್ಮತೆ, ಬಸವ ಕೇಂದ್ರ ಯುವ ಘಟಕದ ಜಿಲ್ಲಾ ಅಧ್ಯಕ್ಷ ಸುರೇಶ ಚನಶೆಟ್ಟಿ, ಶಿವಾನಂದ ಗೌಡ್ರು, ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಸವರಾಜ ಬಲ್ಲೂರ, ಜಗನ್ನಾಥ ಕಮಲಾಪುರೆ, ಬಸವ ಕೇಂದ್ರದ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾವತಿ ಬಲ್ಲೂರ, ಸಮಾಜ ಸೇವಕಿ ಶಾರದಾ, ಡಾ.ಜೈಶೀಲಾ, ಕಸ್ತೂರಿ ಪಟಪಳ್ಳಿ, ಶೀಲಾವತಿ ಶೀಲವಂತ, ಕರುಣಾ ಶೆಟಕಾರ, ಪಂಪಾವತಿ ಪಾಟೀಲ, ರಜಿಯಾ ಬಳಬಟ್ಟಿ, ಭೂಮಿ ಪಾಟೀಲ, ಆನಂದ ಪಾಟೀಲ, ಶರಣು ಲಂಗೋಟಿ, ವೈಜನಾಥ ಸಜ್ಜನಶೆಟ್ಟಿ, ಗಣೇಶ ಶೀಲವಂತ, ಶಿವಕುಮಾರ ಸಾಲಿ, ಬಸವರಾಜ ಬಿರಾದಾರ ಇದ್ದರು.

ಬಸವ ಪಂಚಮಿಯಾಗಿ ಆಚರಣೆ
ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ಸೋಮವಾರ ನಾಗರ ಪಂಚಮಿಯನ್ನು ಬಸವ ಪಂಚಮಿ ಹಬ್ಬವನ್ನಾಗಿ ಆಚರಿಸಿ ವಡ್ಡರ ಕಾಲೊನಿಯ ಮಕ್ಕಳಿಗೆ ವಿತರಿಸಲಾಯಿತು.

ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಲತಾ ರಾಠೋಡ ಮಾತನಾಡಿ, ‘ಅಸಂಖ್ಯಾತ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹಾಲನ್ನು ಹುತ್ತಕ್ಕೆ ಸುರಿಯುವ ಬದಲು ನಿರ್ಗತಿಕ ಮಕ್ಕಳಿಗೆ ಕೊಡುವುದು ಒಳ್ಳೆಯದು’ ಎಂದು ಹೇಳಿದರು.

ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಜಿಲ್ಲಾ ಸಂಚಾಲಕ ಮಹೇಶ ಗೋರನಾಳಕರ್, ಜಿಗ್ನೇಶ್ ಮೇವಾನಿ ಅಭಿಮಾನಿ ಬಳಗದ ರಾಜ್ಯ ಅಧ್ಯಕ್ಷ ರಾಜರತನ್ ಶಿಂಧೆ, ಜೀತ ವಿಮುಕ್ತಿ ಕರ್ನಾಟಕ ಸಂಘಟನೆ ಜಿಲ್ಲಾ ಸಂಚಾಲಕಿ ಇಂದುಮತಿ ಸಾಗರ, ವೇದಿಕೆಯ ದಕ್ಷಿಣ ಘಟಕದ ಸಂಚಾಲಕ ಅಮರ ಅಲ್ಲಾಪೂರ, ಶಿವಕುಮಾರ ದೇವಕರ್, ಪವನ ಗುನ್ನಳ್ಳಿಕರ್ ಪ್ರದೀಪ ಮೇಟಿ, ಜೈರಾಜ್ ರಂದಿವೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT