ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ಗುಡಿ ಗುಂಡಾರಗಳಲ್ಲಿ ಅಲ್ಲ, ಅಂತರಂಗದಲ್ಲಿರುವ ದೇವರು: ಶಂಭುಲಿಂಗ

ಬಸವ ಜಯಂತಿ ಉತ್ಸವದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಅಭಿಮತ
Published 13 ಮೇ 2024, 16:22 IST
Last Updated 13 ಮೇ 2024, 16:22 IST
ಅಕ್ಷರ ಗಾತ್ರ

ಬೀದರ್‌: ‘ಗುಡಿ–ಗುಂಡಾರಗಳಲ್ಲಿ ದೇವರಿಲ್ಲ. ಅಂತರಂಗದಲ್ಲಿ ದೇವರಿದ್ದಾನೆ’ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ತಿಳಿಸಿದರು.

ನಗರದ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 163ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ, ಬಸವ ಜಯಂತಿ ಉತ್ಸವ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಎಲ್ಲರ ಅಂತರಂಗದಲ್ಲಿ ದೇವರಿದ್ದಾನೆ. ದೇವರು ಹೊರಗೆ ಹುಡುಕಿದರೆ ಸಿಗುವುದಿಲ್ಲ. ಎಲ್ಲಿ ಸತ್ಯ, ಶುದ್ಧ ಕಾಯಕ, ದಾಸೋಹ ಭಾವ ಮತ್ತು ‘ದಯಯೇ ಧರ್ಮದ ಮೂಲ’ ದೇಹವೇ ದೇವಾಲಯವಾಗಿದ್ದಾಗ, ಶಿರವೇ ಹೊನ್ನ ಕಳಸವಾದಾಗ, ಕಾಲುಗಳು ಕಂಬವಾದಾಗ, ಕಾಶಿ-ಕೇದಾರಗಳಿಗೆ ಹೋಗಿ ದೇವರನ್ನು ಹುಡುಕಿದರೆ ಅಲ್ಲಿ ದೇವರು ಸಿಗುವುದಿಲ್ಲ ಎಂದರು.

‘ತನ್ನ ತಾನರಿಯದೇ ತಾನೇ ದೇವ’ ಹಸಿದವರಿಗೆ ಅನ್ನ ನೀಡುವುದು, ಕೆಳಗೆ ಬಿದ್ದವರನ್ನು ಮೇಲ್ಲೆತ್ತುವುದು ನಿಜವಾದ ಧರ್ಮ. ಆಚಾರವಂತಿಕೆಯೇ ಸ್ವರ್ಗ, ಅನಾಚಾರದ ಬದುಕೇ ನರಕ. ಈ ಹಿನ್ನೆಲೆಯಲ್ಲಿ ಬಸವಾದಿ ಶರಣರು ಸಾಮರಸ್ಯದ ಮೌಲ್ಯವನ್ನು, ನಿಸ್ವಾರ್ಥದ ಪ್ರೇಮವನ್ನು ಕಲಿಸಿಕೊಟ್ಟಿದ್ದಾರೆ. ಜಗತ್ತಿಗೆ ಆಧ್ಯಾತ್ಮಿಕ ಬೆಳಕು ನೀಡಿದ ಮಹಾಪುರುಷ ಬಸವಣ್ಣ ಎಂದು ತಿಳಿಸಿದರು.

ಲಾಡಗೇರಿಯ ರಾಷ್ಟ್ರೀಯ ಬಸವದಳದ ಮಾತೆ ವಿಜಯಾಂಬೆ ಕಾರ್ಯಕ್ರಮ ಉದ್ಘಾಟಿಸಿ,‘ಬಸವಲಿಂಗ ಪಟ್ಟದ್ದೇವರು ಈ ಭಾಗದಲ್ಲಿ ಧರ್ಮದ ತಳಹದಿಯ ಮೇಲೆ ವೈಜ್ಞಾನಿಕ, ಸಂಸ್ಕಾರಯುತ ಬಸವ ಸಂಸ್ಕೃತಿಯ ಶಿಕ್ಷಣ ನೀಡುತ್ತಿದ್ದಾರೆ. ಎಲ್ಲವನ್ನು ಅರಿತರೂ ಫಲವೇನು? ನಾನಾರು ಎಂದು ಅರಿತುಕೊಂಡಾಗ ಮಾತ್ರ ಬದುಕು ಮೌಲ್ಯವಾಗುತ್ತದೆ’ ಎಂದು ಅಕ್ಕನ ವಚನ ಉದಾಹರಿಸಿದರು.

ಸಾನ್ನಿಧ್ಯ ವಹಿಸಿದ್ದ ಹಿರೇಮಠ ಸಂಸ್ಥಾನದ ಮಹಾಲಿಂಗ ಸ್ವಾಮೀಜಿ,‘ಬಸವಲಿಂಗ ಪಟ್ಟದ್ದೇವರು ಸ್ಥಾಪಿಸಿರುವ ಕನ್ನಡ ಮಾಧ್ಯಮದ ಡಾ ತೋಂಟದ ಸಿದ್ಧಲಿಂಗ ಪ್ರೌಢ ಶಾಲೆಯಲ್ಲಿ ಕಲಿತಿರುವ ಮಕ್ಕಳು ಧಾರ್ಮಿಕ, ಗುಣಾತ್ಮಕ ಹಾಗೂ ಸಂಸ್ಕಾರಯುತ ಶಿಕ್ಷಣ ಪಡೆಯುತ್ತಿದ್ದಾರೆ. ಜೊತೆಗೆ ಫಲಿತಾಂಶದಲ್ಲೂ ಮುಂದೆ ಇದ್ದಾರೆ’ ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಧನಲಕ್ಷ್ಮಿ ರಾಜಕುಮಾರ, ಬಸವಾಂಜಲಿ ಸುಭಾಷ, ಕಾವೇರಿ ಸಂತೋಷ, ಸಪ್ನಾ, ನಂದಿನಿ, ಸುಪ್ರಿಯಾ, ಪ್ರತೀಕ, ಸೃಷ್ಟಿ ಹಾಗೂ ನವನಾಥ ಅವರನ್ನು ಗೌರವಿಸಲಾಯಿತು. 

ಡಾ. ಚನ್ನಬಸವ ಪಟ್ಟದ್ದೇವರು‌ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸುನೀಲ ಶಿವಾಜಿರಾವ ದೇಶಮುಖ ಅವರನ್ನು ಸನ್ಮಾನಿಸಲಾಯಿತು.

ದಾಸೋಹಿಗಳಾದ ಉಮಾದೇವಿ ಶರಣಪ್ಪ ಯದಲಾಪುರೆ ಗುರುಬಸವ ಪೂಜೆ ನೆರವೇರಿಸಿದರು.

ಚನ್ನಬಸಪ್ಪ ನೌಬಾದೆ, ಬೋಗಾರ ಅವರು ವಚನ ಗಾಯನ ನಡೆಸಿಕೊಟ್ಟರು. ಉಮಾಕಾಂತ ಮೀಸೆ, ಲಕ್ಷ್ಮಿ ಬಿರಾದಾರ, ಡಾ.ತೋಂಟದ ಸಿದ್ಧಲಿಂಗ ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ಸುಧಾ ನಾಯಕ, ಶಾಲೆಯ ಸ್ಥಾನಿಕ ಕಮಿಟಿ ನಿರ್ದೇಶಕ ಸಂಗ್ರಾಮಪ್ಪ ಬಿರಾದಾರ, ಸಂಗ್ರಾಮ ಎಂಗಳೆ, ಶ್ರೀಕಾಂತ ಬಿರಾದಾರ, ಗುರುನಾಥ ಬಿರಾದಾರ, ಲಕ್ಷ್ಮಿಬಾಯಿ ರಾಮಶೆಟ್ಟಿ ಮಾಳಗೆ, ಬೊಮ್ಮಶೆಟ್ಟಿ ಬಿರಾದಾರ, ಮೀನಾಕ್ಷಿ ಪಾಟೀಲ, ಸಂಜುಕುಮಾರ ಅತಿವಾಳೆ, ಸಿದ್ದಯ್ಯ ಕವಡಿಮಠ, ಕಸ್ತೂರಿಬಾಯಿ ಬಿರಾದಾರ, ಮಾಲಾಶ್ರೀ ಗುರುನಾಥ, ಶಾಲೆಯ ಶಿಕ್ಷಕರಾದ ಯೋಗಿತಾ ಬಿರಾದಾರ, ಪವಿತ್ರಾ, ಗಿರಿಜಾ ಎಂ.ಮೀನಾಕ್ಷಿ, ವನಜಾಕ್ಷಿ, ಪವನ, ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT