ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ ಸಮಾಜದ ಕಲ್ಪನೆ ಬಿತ್ತಿದ್ದ ಬಸವಣ್ಣ

ತೇಗಂಪೂರ: ಬಸವ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಪಾಟೀಲ ಹೇಳಿಕೆ
Published 24 ಏಪ್ರಿಲ್ 2023, 11:16 IST
Last Updated 24 ಏಪ್ರಿಲ್ 2023, 11:16 IST
ಅಕ್ಷರ ಗಾತ್ರ

ಭಾಲ್ಕಿ: ‘ಪ್ರಜಾಪ್ರಭುತ್ವದ ಮೂಲ ತತ್ವಗಳನ್ನು 12ನೇ ಶತಮಾನದಲ್ಲೇ ಜನಸಾಮಾನ್ಯರಿಗೆ ತಿಳಿಸಿಕೊಟ್ಟು ಸಮ ಸಮಾಜದ ಕಲ್ಪನೆಯನ್ನು ಜನಮಾನಸದಲ್ಲಿ ಬಿತ್ತಿದ ಮಹಾನುಭಾವರು ಬಸವಣ್ಣ’ ಎಂದು ಸಿದ್ದಗಂಗಾ ಶ್ರೀ ಸ್ಮಾರಕ ಸೇವಾ ಸಮಿತಿ, ಹಳೆಯ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪೂರ ಹೇಳಿದರು.

ತಾಲ್ಲೂಕಿನ ತೇಗಂಪೂರ ಗ್ರಾಮದಲ್ಲಿ ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿ ಹಾಗೂ ಹಿತೈಷಿ ಸಂಘದ ವತಿಯಿಂದ ನಡೆದ ಬಸವ ಜಯಂತಿ, ಲಿಂ.ಡಾ.ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ಕಾಲದಲ್ಲಿಯೂ ಎಲ್ಲ ವರ್ಗದ ಜನರಿಗೆ ತಿಳಿಯುವಂತೆ ಬಸವಣ್ಣನವರು ವಿಜ್ಞಾನದಿಂದ ಆರೋಗ್ಯದವರೆಗಿನ ಎಲ್ಲ ವಿಷಯಗಳನ್ನು 12ನೇ ಶತಮಾನದಲ್ಲಿಯೇ ಹೇಳಿರುವುದು ಅವರ ವಿಶಿಷ್ಟ ಚಿಂತನೆ, ಬುದ್ಧಿವಂತಿಕೆಯನ್ನು ತಿಳಿಸುತ್ತದೆ ಎಂದು ತಿಳಿಸಿದರು.

ಹಲಬರ್ಗಾ ಗ್ರಾಮ ಪಂಚಾಯಿತಿ ಸದಸ್ಯರಾದ ಅಂಜನಾ ಪಾಟೀಲ, ಕಾವೇರಿ ಪಾಟೀಲ, ಮರಾಠಾ ಸಮಾಜದ ಮುಖಂಡ ಸಂತೋಷ ಪೊಲೀಸ್‌ ಪಾಟೀಲ, ಮಾಣಿಕರಾವ್‌ ಪಾಟೀಲ, ಶಶಿಕಾಂತ ಪಾಟೀಲ, ಸುಭಾಷ ಪಾಟೀಲ, ರೇವಣು ಪಾಟೀಲ, ನಿರ್ಮಲಾ ಸ್ವಾಮಿ, ಇಂದುಮತಿ ಬಿರಾದಾರ, ಶಾರದಾಬಾಯಿ ಕುಂಟೆ ಪಾಟೀಲ ಇದ್ದರು. ಪ್ರೇಮ ಪ್ರಭಾ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT