ಸೋಮವಾರ, ಮೇ 23, 2022
24 °C

ಕಲ್ಯಾಣ ನೆಲದಲ್ಲಿ ಜಗಜ್ಯೋತಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್/ ಬಸವಕಲ್ಯಾಣ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳ ವಾರ ಜಗಜ್ಯೋತಿ ಬಸವೇಶ್ವರ ಜಯಂತಿಯಂದು ವಿವಿಧ ಓಣಿಗಳಲ್ಲಿ ಬಸವೇಶ್ವರ ಭಾವಚಿತ್ರ, ಪ್ರತಿಮೆ ಹಾಗೂ ಪುತ್ಥಳಿಗಳಿಗೆ ಪೂಜೆ ಸಲ್ಲಿಸಿ ಅದ್ದೂರಿಯಾಗಿ ಭಾವಚಿತ್ರದ ಮೆರ ವಣಿಗೆ, ಬೈಕ್ ರ್‍ಯಾಲಿ ನಡೆಸಲಾಯಿತು.

‌ಕಳೆದ ಎರಡು ವರ್ಷಗಳ ಕೋವಿಡ್ ಕಾರಣ ಸರಳವಾಗಿ ಬಸವ ಜಯಂತಿ ಆಚರಿಸಲಾಯಿತು. ಈ ವರ್ಷ ಸೋಂಕಿನ ಆತಂಕ ದೂರಾಗಿದ್ದರಿಂದ ಬಸವಣ್ಣನ ಅನುಯಾಯಿಗಳು, ಭಕ್ತರು ಸಂಭ್ರಮದಿಂದ ಜಯಂತಿ ಆಚರಿಸಿದರು.

ಬಸವಾದಿ ಶರಣರು 12ನೇ ಶತಮಾನದಲ್ಲಿ ಕಾರ್ಯಗೈದ ಹಾಗೂ ಕಲ್ಯಾಣಕ್ರಾಂತಿ ನಡೆದ ಬಸವಕಲ್ಯಾಣದ ನೆಲದಲ್ಲಿ ಬಸವ ಜಯಂತಿ ಹಾಗೂ ಬಸವೇಶ್ವರ ದೇವಸ್ಥಾನದ ಜಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮಗಳು ಅದ್ದೂರಿ ಯಾಗಿ ನಡೆದವು.

ಬಸವೇಶ್ವರರ ತೊಟ್ಟಿಲು ಹಾಗೂ ಮೂರ್ತಿಯನ್ನು ಅಲಂಕೃತ ರಥದಲ್ಲಿ ಇರಿಸಿ ಮೆರವಣಿಗೆ ನಡೆಸ ಲಾಯಿತು. ವಿವಿಧ ಶರ ಣರ ಭಾವಚಿತ್ರಗಳನ್ನು ವಾಹನಗಳಲ್ಲಿ ಇಡಲಾ ಯಿತು. ವಿದ್ಯಾರ್ಥಿ ಗಳು ವಿವಿಧ ವೇಷಗಳನ್ನು ತೊಟ್ಟುಕೊಂಡು ಕುಳಿತಿ ದ್ದರು. ಕುದುರೆ ಮೇಲೆ ಕುಳಿತ ಬಸವಣ್ಣ ಮತ್ತು ಅಕ್ಕಮಹಾದೇವಿ ವೇಷ ಧಾರಿ ಗಳು ಗಮನ ಸೆಳೆ ದರು.

ತೆರೆದ ವಾಹನದ ಮೇಲೆ ಸಂಗೀತಗಾರ ಶಿವಕುಮಾರ ಪಂಚಾಳ ಅವರು ಮೆರವಣಿಗೆ ಯುದ್ದಕ್ಕೂ ವಚನ ಗಾಯನ ನಡೆಸಿಕೊಟ್ಟರು. ವಾಹನದ ಮೇಲೆ ವಿದ್ಯಾರ್ಥಿ ನಿಯರು ನೃತ್ಯಗೈದರು. ಲಂಬಾಣಿ ನೃತ್ಯದ ತಂಡ ಪಾಲ್ಗೊಂಡಿತ್ತು. ಮಹಿಳೆಯರು ಕೋಲಾಟ ಆಡಿದರು. ಯುವಕರು ಧ್ವನಿವರ್ಧಕದ ಹಾಡಿಗೆ ಹೆಜ್ಜೆಹಾಕಿದರು.

ಶಾಸಕ ಶರಣು ಸಲಗರ ದೇವಸ್ಥಾನದಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು. ಹುಲಸೂರ ಶಿವಾನಂದ ಸ್ವಾಮೀಜಿ, ಅಕ್ಕ ಗಂಗಾಂಬಿಕಾ, ಬಸವರಾಜ ಪಾಟೀಲ ಸೇಡಂ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಉಪ ವಿಭಾಗಧಿಕಾರಿ ರಮೇಶ ಕೋಲಾರ, ತಹಶೀಲ್ದಾರ್ ಸಾವಿತ್ರಿ ಸಲಗರ, ತಾ.ಪಂ ಇಒ ಕಿರಣ ಪಾಟೀಲ, ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ ಇದ್ದರು.

ಎಐಸಿಸಿ ಸದಸ್ಯ ಆನಂದ ದೇವಪ್ಪ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ತಂಪು ಮಜ್ಜಿಗೆ ವಿತರಿಸಿದರು. ಸಂಜೆ ದೇವ ಸ್ಥಾನದ ಆವರಣದಲ್ಲಿ ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮ ನಡೆಯಿತು. ಮಹಿಳೆಯರು ಇದ್ದರು.

ಜಿಲ್ಲಾಡಳಿತದಿಂದ ಬಸವ ಜಯಂತಿ ಆಚರಣೆ

ಬೀದರ್: ಜಿಲ್ಲಾ ಆಡಳಿತ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಶಾಸಕ ರಹೀಂಖಾನ್, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಮುಖಂಡ ಗುರುನಾಥ ಕೊಳ್ಳೂರ, ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ, ಗೌರವ ಸಲಹೆಗಾರ ಶಿವಶರಣಪ್ಪ ವಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರಬಾಬು ಇತರರು ಇದ್ದರು.

ಗಣ್ಯರು ಹಾಗೂ ಜಿಲ್ಲಾ ಆಡಳಿತದ ಅಧಿಕಾರಿಗಳು ಬಸವೇಶ್ವರ ವೃತ್ತದಲ್ಲಿನ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಜಿಲ್ಲಾ ಆಡಳಿತ ವತಿಯಿಂದ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಡಾ. ಶಿವಗಂಗಾ ರುಮ್ಮಾ ಉಪನ್ಯಾಸ ನೀಡಿದರು.

ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಬಿಡಿಎ ಅಧ್ಯಕ್ಷ ಬಾಬುವಾಲಿ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರಬಾಬು, ಹೆಚ್ಚುವರಿ ಜಿಲ್ಲಾಧಿಕಾರಿ
ಶಿವಕುಮಾರ ಶೀವಲಂತ, ಮುಖಂಡರಾದ ಗುರುನಾಥ ಕೊಳ್ಳೂರ, ಬಸವರಾಜ ಧನ್ನೂರ, ಮಾರುತಿ ಬೌದ್ಧೆ ಇದ್ದರು.

ಬಸವ ಮಂಟಪದಲ್ಲಿ ಷಟಸ್ಥಲ ಧ್ವಜಾ ರೋಹಣ, ತೊಟ್ಟಿಲು ಕಾರ್ಯಕ್ರಮ ನಡೆದವು. ಬಸವ ಕೇಂದ್ರ, ಗಾಂಧಿ ಗಂಜ್‍ನ ಬಸವೇಶ್ವರ ದೇವಸ್ಥಾನ, ಹಾರೂರ ಗೇರಿ ಮೊದಲಾದ ಕಡೆ ವಿವಿಧ ಕಾರ್ಯ ಕ್ರಮಗಳು ಜರುಗಿದವು.

‘ಬಸವಣ್ಣ ಜಗದ್ಗುರು’

ಬಸವಕಲ್ಯಾಣ: ತೇರು ಮೈದಾನದ ಸಭಾಭವನದಲ್ಲಿ ತಾಲ್ಲೂಕು ಆಡಳಿತದಿಂದ ಬಸವ ಜಯಂತಿ ನಡೆಯಿತು.ಉಪನ್ಯಾಸಕಿ ಡಾ. ನೀಲಾಂಬಿಕಾ ಶೇರಿಕಾರ ಮಾತನಾಡಿ, `ಮಾನ ವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಕಾರಣ ಬಸವಣ್ಣ ಜಗದ್ಗುರು ಎನಿಸಿದ್ದಾರೆ ಎಂದರು.

ಸಿಪಿಐ ಗೋಪಾಲ ನಾಯಕ, ಪೌರಾಯುಕ್ತ ಶಿವಕುಮಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು