ಬೀದರ್: ‘ಇವನಾರವ.. ಇವನಾರವ ಎನ್ನದೇ, ಇವನಮ್ಮವ.. ಇವನಮ್ಮವ’ ಎಂಬ ಬಸವಣ್ಣನವರ ತತ್ವ–ಸಂದೇಶಗಳನ್ನು ಜಗತ್ತಿಗೆ ಅರ್ಥೈಸಿ, ಅನುಷ್ಠಾನಕ್ಕೆ ತಂದರೆ ಭಾರತ ವಿಶ್ವಗುರು ಆಗುತ್ತದೆ’

ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಬಸವ ಸಂಸ್ಕೃತಿ ಅಭಿಯಾನ ಸಮಿತಿಯ ಸಹಯೋಗದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಬುಧವಾರ ಏರ್ಪಸಿದ್ದ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗಿನ ವಚನ ಸಂವಾದ ಕಾರ್ಯಕ್ರಮದಲ್ಲಿ ಬಸವಶ್ರೀ ಎಂಬ ವಿದ್ಯಾರ್ಥಿನಿಯ ಪ್ರಶ್ನೆಗೆ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಗಂಗಾಂಬಿಕಾ ಅಕ್ಕ ಮೇಲಿನಂತೆ ಉತ್ತರಿಸಿದರು. ಸಂವಾದದಲ್ಲಿ ಪ್ರಶ್ನೆಗಳಿಗೆ ನಾಡಿನ ವಿವಿಧ ಮಠಗಳ ಸ್ವಾಮೀಜಿಗಳು ಉತ್ತರಿಸಿದ್ದಾರೆ. ಕೆಲ ಆಯ್ದ ಪ್ರಶ್ನೋತ್ತರಗಳ ವಿವರ ಇಲ್ಲಿದೆ:

ಪ್ರಶ್ನೆ: ಸಾತ್ವಿಕ ಸಮಾಜ ಕಟ್ಟಲು ಶರಣರ ಸಂದೇಶವೇನು?–ಸೌಂದರ್ಯ ರಗಟೆ, ವಿದ್ಯಾರ್ಥಿನಿ.

* ಡಂಬಳ–ಗದಗ ಯಡೆಯೂರು ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ ಉತ್ತರ–ಸಮಾಜದಲ್ಲಿ ಸಮಾನತೆ ಮೂಡಿ, ಎಲ್ಲರೂ ಶಾಂತಿ ಸೌಹಾರ್ದದಿಂದ ಬದುಕು ಸಾಗಿಸಬೇಕು. ದುರಾಚಾರಿಗಳು, ವ್ಯಸನಿಗಳು ಇರಬಾರದು. ಆಗ ಸಾತ್ವಿಕ ಸಮಾಜ ರೂಪುಗೊಳ್ಳುತ್ತದೆ. ಶರಣರ ಆಶಯವೂ ಇದೆ.

ಪ್ರಶ್ನೆ: ಚಂಚಲತೆ ಹೋಗಿ ಏಕಾಗ್ರತೆಗೆ ಏನು ಮಾಡಬೇಕು?–ಭಾಗ್ಯವಂತಿ, ವಿದ್ಯಾರ್ಥಿನಿ.

* ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಉತ್ತರ–ನಿತ್ಯ ಧ್ಯಾನ, ಯೋಗ, ಲಿಂಗಪೂಜೆ, ವಚನ ಪಠಣ ಮಾಡಿದರೆ ಚಂಚಲತೆ ಹೋಗುತ್ತದೆ. ಏಕಾಗ್ರತೆ ಮೂಡುತ್ತದೆ.

ಪ್ರಶ್ನೆ: ಕರ್ನಾಟಕದ ಎಲ್ಲ ಮಠಗಳಲ್ಲಿ ಒಂದೇ ರೀತಿಯ ಪೂಜೆ, ಪ್ರಾರ್ಥನೆ ಏಕಿಲ್ಲ?–ಗಣಪತಿ ಬಿರಾದಾರ, ಸ್ಥಳೀಯ ನಿವಾಸಿ.

* ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಉತ್ತರ–ರಾಜ್ಯದಲ್ಲಿರುವ ಬಸವ ಪರಂಪರೆಯ ಎಲ್ಲ ಮಠಗಳಲ್ಲಿ ಒಂದೇ ರೀತಿಯ ಪೂಜೆ, ಪ್ರಾರ್ಥನೆ ನಡೆಯುತ್ತದೆ.

ಪ್ರಶ್ನೆ: ಕರ್ನಾಟಕದ ಪಠ್ಯಕ್ರಮದಲ್ಲಿ ಬಸವಾದಿ ಶರಣರ ಕುರಿತ ಪಠ್ಯಗಳಿವೆ. ಸಿಬಿಎಸ್ಇ ಪಠ್ಯದಲ್ಲಿ ಏಕೆ ಸೇರಿಸಿಲ್ಲ?–ಸಂತೋಷ್, ವಿದ್ಯಾರ್ಥಿನಿ

* ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಉತ್ತರ– ನೀವು ಹೇಳಿದಂತೆ ಕರ್ನಾಟಕದ ಪಠ್ಯಕ್ರಮದಲ್ಲಿ ಬಸವಾದಿ ಶರಣರ ಬಗ್ಗೆ ಪಾಠಗಳಿವೆ. ಸಿಬಿಎಸ್ಇ ಪಠ್ಯಕ್ರಮದಲ್ಲಿ ಇಲ್ಲ. ಅದರಲ್ಲೂ ಸೇರಿಸಬೇಕೆಂದು ಎಲ್ಲ ಮಠಾಧಿಪತಿಗಳು ಒತ್ತಡ ಹಾಕುತ್ತೇವೆ. ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತೇವೆ.

ಪ್ರಶ್ನೆ: 12ನೇ ಶತಮಾನದಲ್ಲಿ ಲಕ್ಷ ಶರಣರಿಗೆ ಪ್ರಸಾದ ವ್ಯವಸ್ಥೆ ಮಾಡುತ್ತಿದ್ದರಂತೆ. ಅದು ಹೇಗೆ ಸಾಧ್ಯವಾಗಿತ್ತು?–ರೂಪಾಲಿ ವಿದ್ಯಾರ್ಥಿನಿ

* ಸಾಣೇಹಳ್ಳಿಯ ತರಳಬಾಳು ಸಂಸ್ಥಾನ ಮಠದ ಪಂಡಿತಾರಾಧ್ಯ ಶಿವಾಚಾರ್ಯರು ಉತ್ತರ–12ನೇ ಶತಮಾನದ ಕಲ್ಯಾಣದಲ್ಲಿ ಪ್ರತಿಯೊಂದು ಮನೆ ಕೂಡ ದಾಸೋಹದ ಮನೆ ಆಗಿತ್ತು. ಕಾಯಕ ಮಾಡಿದ ನಂತರ ಎಲ್ಲರ ಮನೆಯೊಳಗೆ ದಾಸೋಹ ನಡೆಯುತ್ತಿತ್ತು. ಹೀಗಾಗಿಯೇ ಅಪಾರ ಸಂಖ್ಯೆಯ ಶರಣರೆಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲು ಸಾಧ್ಯವಾಗಿತ್ತು.

ಪ್ರಶ್ನೆ: ಸಮಾಜದಲ್ಲಿ ನೈತಿಕ ಮೌಲ್ಯ ಹೆಚ್ಚಿಸಲು ಏನು ಮಾಡಬೇಕು?–ಮೇಧಾ ವಿದ್ಯಾರ್ಥಿನಿ.

* ಸಾಣೇಹಳ್ಳಿಯ ತರಳಬಾಳು ಸಂಸ್ಥಾನ ಮಠದ ಪಂಡಿತಾರಾಧ್ಯ ಶಿವಾಚಾರ್ಯರು–ಪ್ರತಿಯೊಬ್ಬರೂ ನೈತಿಕ ಮಾರ್ಗದಲ್ಲಿ ನಡೆದರೆ ಸಮಾಜದ ನೈತಿಕ ಮೌಲ್ಯ ಹೆಚ್ಚಾಗುತ್ತದೆ.

ಪ್ರಶ್ನೆ: ಬಸವಣ್ಣನವರನ್ನೇಕೆ ಕರ್ನಾಟಕದ ಸಾಂಸ್ಕೃತಿಕ ನಾಯಕನಾಗಿ ಘೋಷಿಸಿದರು?–ಕಾವ್ಯ ವಿದ್ಯಾರ್ಥಿನಿ

ಸಾಣೇಹಳ್ಳಿಯ ತರಳಬಾಳು ಸಂಸ್ಥಾನ ಮಠದ ಪಂಡಿತಾರಾಧ್ಯ ಶಿವಾಚಾರ್ಯರು ಉತ್ತರ–ಬಸವಣ್ಣನವರು ಸಮಗ್ರ ಕ್ರಾಂತಿಯ ಹರಿಕಾರರು. ಸಾಮಾಜಿಕ, ಆಧ್ಯಾತ್ಮಿಕ, ನೈತಿಕ, ಆರ್ಥಿಕ ಕ್ರಾಂತಿ ಮಾಡಿದ್ದಾರೆ. ಸಮ ಸಮಾಜ ಕಟ್ಟಲು ದೊಡ್ಡ ಕ್ರಾಂತಿ ನಡೆಸಿ ಬದಲಾವಣೆ ತಂದಿದ್ದಾರೆ. ಅವರಂತಹ ವ್ಯಕ್ತಿತ್ವ ಬೇರೊಂದಿಲ್ಲ. ಹೀಗಾಗಿಯೇ ರಾಜ್ಯ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನಾಗಿ ಘೋಷಿಸಿದೆ.

ಪ್ರಶ್ನೆ: ಜಗತ್ತಿನಲ್ಲಿ ಯುದ್ಧ ತಡೆಯಲು ಏನು ಮಾಡಬೇಕು?–ವಿಜಯಕುಮಾರ್, ವಿದ್ಯಾರ್ಥಿ.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು–ಬಸವಾದಿ ಶರಣರು ರಚಿಸಿದ ವಚನಗಳನ್ನು ಇಡೀ ಜಗತ್ತಿಗೆ ಅರ್ಥೈಸಿದರೆ ಎಲ್ಲೂ ಕೂಡ ಯುದ್ಧಗಳು ನಡೆಯುವುದಿಲ್ಲ. ಬಸವಣ್ಣನವರು ಪ್ರಧಾನಿ ಇದ್ದಾಗ ಒಂದು ಕೂಡ ಯುದ್ಧ ಆಗಿರಲಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.

ಪ್ರಶ್ನೆ: 12ನೇ ಶತಮಾನದಲ್ಲಿ ಬಸವಣ್ಣನವರಿಗೆ ಆಕರ್ಷಿತರಾಗಿ ವಿವಿಧ ರಾಷ್ಟ್ರಗಳಿಂದ ಬಂದಿದ್ದ ರಾಜ–ಮಹಾರಾಜರು ಕನ್ನಡದಲ್ಲೇಕೆ ವಚನ ರಚಿಸಿದರು. ಅವರ ಭಾಷೆಯಲ್ಲೇಕೆ ರಚಿಸಲಿಲ್ಲ–ನೇಹಾ ವಿದ್ಯಾರ್ಥಿನಿ.

ಸಾಣೇಹಳ್ಳಿಯ ತರಳಬಾಳು ಸಂಸ್ಥಾನ ಮಠದ ಪಂಡಿತಾರಾಧ್ಯ ಶಿವಾಚಾರ್ಯರು ಉತ್ತರ–ವಿವಿಧ ರಾಜ್ಯ–ದೇಶಗಳಿಂದ ರಾಜರುಗಳು ಕಲ್ಯಾಣಕ್ಕೆ ಬಂದದ್ದು ಅವರ ಬದುಕು ಬದಲಿಸಿಕೊಳ್ಳಲು, ಎತ್ತರಕ್ಕೆ ಕೊಂಡೊಯ್ಯಲು ಹೊರತು ಅವರ ಪ್ರಜೆಗಳಿಗೆ ಅರ್ಥೈಸಲು ಅಲ್ಲ. ಹೀಗಾಗಿಯೇ ಅವರು ಕನ್ನಡದಲ್ಲಿ ವಚನಗಳನ್ನು ರಚಿಸಿದರು.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಬೈಲೂರು–ಮುಂಡರಗಿ ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ, ಡಂಬಳ–ಗದಗ ಯಡೆಯೂರು ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ, ಸಾಣೇಹಳ್ಳಿಯ ತರಳಬಾಳು ಸಂಸ್ಥಾನ ಮಠದ ಪಂಡಿತಾರಾಧ್ಯ ಶಿವಾಚಾರ್ಯರು, ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ, ಅಥಣಿ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಬಸವ ಸಂಸ್ಕೃತಿ ಅಭಿಯಾನದ ಅಧ್ಯಕ್ಷ ಬಸವರಾಜ ಧನ್ನೂರ, ಕರಾಶಿ ಸಂಸ್ಥೆ ಟ್ರಸ್ಟ್ ಅಧ್ಯಕ್ಷ ಬಸವರಾಜ ಪಾಟೀಲ ಅಷ್ಟೂರ ಅವರು ವಚನ ಓದಿ ಕಾರ್ಯಕ್ರಮ ಉದ್ಘಾಟಿಸಿದರು. ಹೈಕಶಿ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ. ರಜನೀಶ ವಾಲಿ, ಮುಖಂಡ ಬಸವರಾಜ ಬುಳ್ಳಾ ಮತ್ತಿತರರು ಇದ್ದರು. ನೃತ್ಯಾಂಗನ ತಂಡದ ಕಲಾವಿದರು ವಚನ ನೃತ್ಯ ಪ್ರಸ್ತುತಪಡಿಸಿದರು.

‘ಬಸವ ಸಂಸ್ಕೃತಿ ಬಿತ್ತಲು ಸಂವಾದ’

‘ಬಸವ ಸಂಸ್ಕೃತಿಯ ನಿಜವಾದ ವಾರಸುದಾರರು ಭಾವಿ ಪ್ರಜೆಗಳಾದ ಈ ದೇಶದ ಮಕ್ಕಳು. ಅವರಲ್ಲಿ ಬಸವ ಸಂಸ್ಕೃತಿ ಬಿತ್ತುವ ಉದ್ದೇಶದಿಂದ ಈ ಅಭಿಯಾನ, ಸಂವಾದ ಹಮ್ಮಿಕೊಳ್ಳಲಾಗಿದೆ’ ಎಂದು ಬೈಲೂರು–ಮುಂಡರಗಿ ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ತಿಳಿಸಿದರು.

ಇಡೀ ಜಗತ್ತಿಗೆ ಸಮಾನತೆ ತತ್ವ ಕೊಟ್ಟ ನೆಲ ಬೀದರ್ ಜಿಲ್ಲೆ. 12ನೇ ಶತಮಾನದ ಬಸವಾದಿ ಶರಣರ ಶ್ರೇಷ್ಠ ವಿಚಾರಗಳು, ಬಸವ ಸಂಸ್ಕೃತಿ ಹಾಗೂ ಈ ದೇಶದ ಬಹುಸಂಸ್ಕೃತಿಯನ್ನು ಪರಿಚಯಿಸುವುದು ನಮ್ಮೆಲ್ಲರ ಉದ್ದೇಶವಾಗಿದೆ ಎಂದರು.

‘ಸಮಾನತೆಯ ಸಮಾಜ ಅಗತ್ಯ’

‘12ನೇ ಶತಮಾನದ ಬಸವಾದಿ ಶರಣರು ಸಮಾನತೆಯಿಂದ ಕೂಡಿರುವ ಸಮ ಸಮಾಜಕ್ಕಾಗಿ ಅವಿರತ ಶ್ರಮಿಸಿದ್ದರು. ಆದರೆ, 21ನೇ ಶತಮಾನದಲ್ಲೂ ಜಾತಿ, ಮತಗಳ ಹೆಸರಿನಲ್ಲಿ ಸಂಘರ್ಷ ನಡೆಯುತ್ತಿದೆ. ಅಸಮಾನತೆ ಹೆಚ್ಚುತ್ತಿರುವ ಕಾರಣ ಸಂಘರ್ಷ ಹೆಚ್ಚಾಗುತ್ತಿದೆ. ಸುಂದರ ಹಾಗೂ ಸಮಾನತೆಯಿಂದ ಕೂಡಿರುವ ಸಮಾಜ ನಿರ್ಮಿಸುವ ಅಗತ್ಯವಿದ್ದು, ಅದಕ್ಕೆ ವಚನ ಸಾಹಿತ್ಯದಲ್ಲಿ ಪರಿಹಾರ ಇದೆ’ ಎಂದು ಡಂಬಳ–ಗದಗ ಯಡೆಯೂರು ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.

ಸಮಾಜದಲ್ಲಿ ಸಮಾನತೆ ತರುವುದಕ್ಕಾಗಿಯೇ 12ನೇ ಶತಮಾನದಲ್ಲಿ ವಚನ ಚಳವಳಿ ನಡೆದಿತ್ತು. ಅದರ ಆಶಯಗಳನ್ನು ಹೊಸ ಪೀಳಿಗೆಗೆ ತಲುಪಿಸಿ ಸುಂದರ ಸಮಾಜ ನಿರ್ಮಿಸಲು ಪ್ರಯತ್ನಿಸಬೇಕಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.