ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣ ಸಂಸ್ಕೃತಿ ಉತ್ಸವ 4ರಿಂದ

ಅಭಿನವ ಚನ್ನಬಸವ ಸ್ವಾಮೀಜಿ ಪಟ್ಟಾಧಿಕಾರ ವಾರ್ಷಿಕೋತ್ಸವ
Published 2 ಫೆಬ್ರುವರಿ 2024, 5:25 IST
Last Updated 2 ಫೆಬ್ರುವರಿ 2024, 5:25 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಹೋಬಳಿ ಕೇಂದ್ರ ಮಂಠಾಳದ ಗುರುಲಿಂಗೇಶ್ವರ ಚೌಕಿ ಮಠವು ಐತಿಹಾಸಿಕ ತಾಣ. ಈ ಮಠದಲ್ಲೀಗ ಏಳನೇ ಪೀಠಾಧಿಪತಿ‌ ಅಭಿನವ ಚನ್ನಬಸವ ಸ್ವಾಮೀಜಿ ಪಟ್ಟಾಧಿಕಾರ ವಾರ್ಷಿಕೋತ್ಸವದ ಸಡಗರ ಮನೆ ಮಾಡಿದೆ. ಪಟ್ಟಾಧಿಕಾರ ವಾರ್ಷಿಕೋತ್ಸವದ ಅಂಗವಾಗಿ ಫೆ.4ರಿಂದ ಎರಡು ದಿನಗಳ ಪ್ರಥಮ ಶರಣ ಸಂಸ್ಕೃತಿ ಉತ್ಸವವೂ ನಡೆಯಲಿದೆ.

ಮಠದ ಹಿನ್ನೆಲೆ:

12ನೇ ಶತಮಾನದಲ್ಲಿ ಈ ಭಾಗದಲ್ಲಿ ಅನೇಕ ಕಡೆ ಶರಣ ಕ್ಷೇತ್ರಗಳಿದ್ದವು. ಮಂಠಾಳದಲ್ಲೂ ನೂರೊಂದು ಮಠಗಳಿದ್ದವು. ಆದ್ದರಿಂದಲೇ ಈ ಊರಿಗೆ ಮಠಾಲಯ ಎಂಬ ಹೆಸರಿತ್ತು. ಅದೇ ಮುಂದೆ ಮಂಠಾಳ ಆಗಿದೆ. ಆದರೆ, ಕಾಲಾನಂತರದಲ್ಲಿ ಇಲ್ಲಿನ ಅನೇಕ ಮಠಗಳು ನಶಿಸಿದ್ದು, ಕೆಲವು ಮಾತ್ರ ಸುಸ್ಥಿತಿಯಲ್ಲಿವೆ. ಅವುಗಳಲ್ಲಿ ಗುರುಲಿಂಗೇಶ್ವರ ಚೌಕಿಮಠ ಪ್ರಮುಖವಾಗಿದೆ.

ಗ್ರಾಮದ ಉತ್ತರದಲ್ಲಿ ಮಹಾದೇವ ದೇವಸ್ಥಾನ ಸಮೀಪದ ಚೌಕಿ ಮಠದ ಕಟ್ಟಡ ನಿರ್ಮಾಣ ಶೈಲಿಯಿಂದ ಗಮನ ಸೆಳೆಯುತ್ತದೆ. ಪೂರ್ವಾಭಿಮುಖವಾಗಿ ವಾಡೆಯಂತೆ ಎತ್ತರದ ದ್ವಾರವಿದೆ. ಒಳಗೆ ಕಮಾನುಗಳಿರುವ ಕೊಠಡಿಗಳಿವೆ. ಇದುವರೆಗೆ ಆರು ಪೀಠಾಧಿಪತಿಗಳು ಆಗಿಹೋಗಿದ್ದಾರೆ. ಅವರಲ್ಲಿ ಬೋಳ ಬಸವೇಶ್ವರ, ಗುರುಲಿಂಗೇಶ್ವರ ಸ್ವಾಮೀಜಿ, ಗುಹೇಶ್ವರ ಸ್ವಾಮೀಜಿ ಅವರ ಗದ್ದುಗೆಗಳು ಇಲ್ಲಿವೆ. ಉತ್ತರಾಭಿಮುಖವಾದ ಕೊಠಡಿಯೊಳಗೆ ಗುರುಲಿಂಗೇಶ್ವರರ ಗದ್ದುಗೆ ಇದ್ದು, ಅದರ ಮೇಲೆ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

‘ಯಡಿಯೂರು ಸಿದ್ದಲಿಂಗೇಶ್ವರರ ನೂರೊಂದು ವಿರಕ್ತರಲ್ಲಿ ಒಬ್ಬರಾದ ಬೋಳ ಬಸವೇಶ್ವರರು ಇಲ್ಲಿಗೆ ಬಂದು ಮಠ ಸ್ಥಾಪಿಸಿದ್ದಾರೆ. ಅವರು ಇಲ್ಲಿಯೇ ಲಿಂಗೈಕ್ಯರಾದರು. ನಂತರದಲ್ಲಿನ ಗುರುಲಿಂಗೇಶ್ವರರು ಮಹಾತಪಸ್ವಿ ಆಗಿದ್ದರು. ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು ತಮ್ಮ ಕರ್ತೃತ್ವ ಶಕ್ತಿಯಿಂದ ಮಠದ ಕೀರ್ತಿ ಎಲ್ಲೆಡೆ ಹರಡಿಸಿದ್ದರಿಂದ ಅವರ ಹೆಸರಿನಿಂದಲೇ ಮಠವನ್ನು ಗುರುತಿಸಲಾಗುತ್ತದೆ’ ಎಂದು ಈಗಿನ ಮಠಾಧಿಪತಿ ಅಭಿನವ ಚನ್ನಬಸವ ಸ್ವಾಮೀಜಿ ಹೇಳುತ್ತಾರೆ.

ಬಸವಕಲ್ಯಾಣ ತಾಲ್ಲೂಕಿನ ಮಂಠಾಳದ ಚೌಕಿಮಠ
ಬಸವಕಲ್ಯಾಣ ತಾಲ್ಲೂಕಿನ ಮಂಠಾಳದ ಚೌಕಿಮಠ
ಬಸವಕಲ್ಯಾಣ ತಾಲ್ಲೂಕಿನ ಮಂಠಾಳದ ಚೌಕಿಮಠದಲ್ಲಿನ ಗುರುಲಿಂಗೇಶ್ವರರ ಗದ್ದುಗೆ
ಬಸವಕಲ್ಯಾಣ ತಾಲ್ಲೂಕಿನ ಮಂಠಾಳದ ಚೌಕಿಮಠದಲ್ಲಿನ ಗುರುಲಿಂಗೇಶ್ವರರ ಗದ್ದುಗೆ
ಬಸವಕಲ್ಯಾಣ ತಾಲ್ಲೂಕಿನ ಮಂಠಾಳದ ಚೌಕಿಮಠದಲ್ಲಿನ ಗುರುಲಿಂಗೇಶ್ವರರ ಉತ್ಸವ ಮೂರ್ತಿ
ಬಸವಕಲ್ಯಾಣ ತಾಲ್ಲೂಕಿನ ಮಂಠಾಳದ ಚೌಕಿಮಠದಲ್ಲಿನ ಗುರುಲಿಂಗೇಶ್ವರರ ಉತ್ಸವ ಮೂರ್ತಿ

ಹೋಬಳಿ ಕೇಂದ್ರವಾದ ಮಂಠಾಳ ವಾರದಿಂದ ನಡೆಯುತ್ತಿದೆ ಪ್ರವಚನ ಕಾರ್ಯಕ್ರಮ ಫೆ.4 ಮತ್ತು ಫೆ.5ರಂದು ಕಾರ್ಯಕ್ರಮ

ಮಠದ ಸ್ಥಾಪಕರಾದ ಬೋಳ ಬಸವೇಶ್ವರ ಹಾಗೂ ಗುರುಲಿಂಗೇಶ್ವರರ ಮಾತ್ರವಲ್ಲದೇ ಹಿಂದಿನ ಪೀಠಾಧಿಪತಿಗಳ ಗದ್ದುಗೆಗಳು ಇಲ್ಲಿದ್ದು ನಿತ್ಯ ಪೂಜೆ ನಡೆಯುತ್ತದೆ

-ಅಭಿನವ ಚನ್ನಬಸವ ಸ್ವಾಮೀಜಿ ಪೀಠಾಧಿಪತಿ

ಎರಡು ದಿನಗಳ ಉತ್ಸವ...

‘ಅಭಿನವ ಚನ್ನಬಸವ ಸ್ವಾಮೀಜಿ 7ನೇ ಪೀಠಾಧಿಪತಿಯಾಗಿ ಅಧಿಕಾರ ವಹಿಸಿಕೊಂಡು ವರ್ಷ ಆಗುತ್ತಿದೆ. ಆದ್ದರಿಂದ ಪ್ರಥಮ ಶರಣ ಸಂಸ್ಕೃತಿ ಉತ್ಸವ ಆಯೋಜಿಸಲಾಗುತ್ತಿದೆ. ಮುಖಂಡರಾದ ಜಗನ್ನಾಥ ಪಾಟೀಲ ಅಧ್ಯಕ್ಷತೆಯಲ್ಲಿ ಉತ್ಸವ ಸಮಿತಿ ರಚಿಸಿ ಸಿದ್ಧತೆ ಕೈಗೊಳ್ಳಲಾಗಿದೆ. ಫೆ.4 ಹಾಗೂ ಫೆ.5ರಂದು ಎರಡು ದಿನದ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಳ್ಳಲಿದ್ದು ವಿವಿಧ ಗೋಷ್ಠಿಗಳು ಮತ್ತು ಅನ್ನ ದಾಸೋಹ ಏರ್ಪಡಿಸಲಾಗುತ್ತದೆ’ ಎಂದು ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಶಿವಕುಮಾರ ಶೆಟಗಾರ ಹೇಳಿದ್ದಾರೆ.

‘ಅಕ್ಕ’ನ ಪ್ರವಚನ ಸ್ವಾಮೀಜಿ ತುಲಾಭಾರ

‘ಮಠದಲ್ಲಿ ಬಸವಣ್ಣನವರ ಸಮಾನತೆ ಕಾಯಕ ದಾಸೋಹ ತತ್ವವನ್ನು ಪರಿಪಾಲಿಸಲಾಗುತ್ತದೆ. ಆದ್ದರಿಂದ ಪಟ್ಟಾದಿಕಾರ ವಾರ್ಷಿಕೋತ್ಸವ ಅಂಗವಾಗಿ ವಾರದಿಂದ ರಟಕಲ್ ಸಿದ್ದರಾಮ ಸ್ವಾಮೀಜಿ ಅವರು ಅಕ್ಕಮಹಾದೇವಿ ಜೀವನ ದರ್ಶನ ಪ್ರವಚನ ಹೇಳುತ್ತಿದ್ದಾರೆ. ಶರಣ ಸಂಸ್ಕೃತಿ ಉತ್ಸವವನ್ನು ಶಾಸಕ ಶರಣು ಸಲಗರ ಉದ್ಘಾಟಿಸುವರು. ವಿವಿಧ ಗೋಷ್ಠಿಗಳಲ್ಲಿ ನಾಡಿನ ಪ್ರಮುಖ ಮಠಾಧೀಶರು ಸಚಿವರು ಶಾಸಕರು ಸಾಹಿತಿಗಳು ಚಿಂತಕರು ಮತ್ತು ಗಣ್ಯರು ಪಾಲ್ಗೊಳ್ಳುವರು. ಪೀಠಾಧಿಪತಿಗಳ ತುಲಾಭಾರವೂ ನಡೆಯಲಿದೆ’ ಎಂದು ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪೊಲೀಸ್ ಪಾಟೀಲ ಮತ್ತು ಕಾರ್ಯದರ್ಶಿ ರವೀಂದ್ರ ಶಾಯಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT