ಬೀದರ್: ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ, ಅವರ ವಚನಗಳ ಮಹತ್ವ ಹಾಗೂ ತತ್ವಾದರ್ಶಗಳ ಸಂದೇಶ ಸಾರುವ ಕೃತಿ ‘ಬಸವೋಪನಿಷತ್ತು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ ಅಭಿಪ್ರಾಯ ಪಟ್ಟರು.

ಬಸವ ಜಯಂತಿ ಅಂಗವಾಗಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರ ‘ಬಸವೋಪನಿಷತ್ತು’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಬಸವಣ್ಣನವರ ಮನುಕುಲೋದ್ಧಾರ ಬದ್ಧತೆಯ ವಚನಗಳನ್ನು ಆಯ್ದು, ಸರಳ ಸುಂದರ ವ್ಯಾಖ್ಯಾನದ ಮೂಲಕ ಈ ಪುಸ್ತಕವನ್ನು ಬರೆದಿದ್ದಾರೆ. ಇದು ಅವರ 53ನೇ ಪುಸ್ತಕವಾಗಿದ್ದು ಬಸವಣ್ಣನವರ ವಚನಗಳ ಅರ್ಥ, ವಿಶ್ಲೇಷಣೆ ಒಳಗೊಂಡ ಮಹತ್ವದ ಕೃತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಾಗತಿಕ ಇತಿಹಾಸದಲ್ಲಿ ಸಮಾಜೋ ಧಾರ್ಮಿಕ ಸುಧಾರಕರ ಸಾಲಿನಲ್ಲಿ ಬಸವಣ್ಣನವರಿಗೆ ಅಗ್ರ ಹಾಗೂ ವಿಶಿಷ್ಟ ಸ್ಥಾನವಿದೆ. ಪರಿಶುದ್ಧ ವ್ಯಕ್ತಿತ್ವದ, ದಯಾಮಯಿಗಳಾಗಿದ್ದ ಬಸವಣ್ಣನವರು ಕಲ್ಯಾಣದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸುವ ಮೂಲಕ ಜಗತ್ತಿನ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಮಾದರಿ ಸಂಸತ್ತನ್ನು ನೀಡಿದ್ದಾರೆ. ಬಸವಣ್ಣನವರು ಮಹಾತ್ಮಗಾಂಧೀಜಿ, ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರಂತಹ ಧೀಮಂತ ನಾಯಕರುಗಳ ಮೇಲೆ ದಟ್ಟ ಪ್ರಭಾವ ಬೀರಿದ್ದರಿಂದ ನಮ್ಮ ಸಂವಿಧಾನದ ಹಲವು ಅನುಚ್ಛೇದಗಳಲ್ಲಿ ಬಸವಪ್ರಭಾವ, ಬಸವ ಸ್ಫೂರ್ತಿಯನ್ನು ಗುರುತಿಸಬಹುದು ಎಂದರು.

ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಇಲಾಖೆಯ ನಿವೃತ್ತ ಉಪನಿರ್ದೇಶಕ ರಮೇಶ ಮಠಪತಿ ಪುಸ್ತಕ ಪರಿಚಯಿಸಿದರು. ದೇವದುರ್ಗದ ಸಾಹಿತಿ ಬಸವರಾಜ ಬ್ಯಾಗವಾಟ್, ಮುಕ್ಕಣ್ಣ ಕರಿಗಾರ, ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ ದುಬೆ, ಡಿಆರ್ಡಿಎ ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ರಾಮಲಿಂಗ ಬಿರಾದಾರ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶಿವಾಜಿ ಡೋಣಿ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ. ಪಾಟೀಲ, ಜಿಪಂ ಸಹಾಯಕ ಕಾರ್ಯದರ್ಶಿ ಬೀರೇಂದ್ರಸಿಂಗ್ ಹಾಜರಿದ್ದರು. ಪ್ರವೀಣ್ ಸ್ವಾಮಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.