ಬೀದರ್: ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯರು, ಸಹೋದರರಾದ ಭೀಮರಾವ್ ಪಾಟೀಲ್, ಡಾ. ಚಂದ್ರಶೇಖರ್ ಪಾಟೀಲ್ ಅವರು ಸಾರ್ವಜನಿಕವಾಗಿ ಪರಸ್ಪರ ಅವಾಚ್ಯ ಶಬ್ದಗಳಿಂದ ದೂಷಿಸಿಕೊಂಡು, ಕೈ ಕೈ ಮಿಲಾಯಿಸಿದ ಪ್ರಸಂಗ ಹೊಸತೇನೂ ಅಲ್ಲ.

ಆದರೆ, ಇದುವರೆಗೆ ಇವರ ಜಗಳ ಹುಮನಾಬಾದ್ ವಿಧಾನಸಭಾ ಮತಕ್ಷೇತ್ರಕ್ಕೆ ಸೀಮಿತವಾಗಿತ್ತು. ಈಗ ಅದು ಬೀದರ್ ಜಿಲ್ಲಾ ಕೇಂದ್ರಕ್ಕೂ ಕಾಲಿಟ್ಟಿರುವುದು ಹೊಸ ಬೆಳವಣಿಗೆ ಎನ್ನಬಹುದು.

ಈ ಹಿಂದೆ ಹುಮನಾಬಾದ್, ಚಿಟಗುಪ್ಪದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ, ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಸಂದರ್ಭದಲ್ಲಿ ಶಾಸಕರು ಪರಸ್ಪರ ಬೈದಾಡಿಕೊಂಡಿದ್ದಾರೆ. 2023ರ ಜೂನ್, 2023ರ ಡಿಸೆಂಬರ್ ಹಾಗೂ 2024 ಜುಲೈನಲ್ಲಿ ನಡೆದ ಸಭೆಯಲ್ಲಿ ಜಗಳವಾಡಿದ್ದು ಪ್ರಮುಖ ಘಟನೆಗಳು. ಆನಂತರ ಸಣ್ಣ ಪುಟ್ಟ ಸಭೆ, ಸಮಾರಂಭಗಳಲ್ಲಿ ಈ ರೀತಿಯ ಘಟನೆಗಳು ನಡೆದಿವೆ.

ಬೀದರ್ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ತ್ರೈಮಾಸಿಕ ಕರ್ನಾಟಕ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ) ಇಂತಹದ್ದೊಂದು ಕಾದಾಟಕ್ಕೆ ಸಾಕ್ಷಿಯಾಗುತ್ತದೆ ಎಂದು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಸುಗಮವಾಗಿಯೇ ಸಭೆ ಆರಂಭಗೊಂಡಿತ್ತು.

ಆದರೆ, ಬೀದರ್ ಗುರುದ್ವಾರ ಸಮೀಪದ ಜಮೀನು ಒತ್ತುವರಿ ವಿಷಯದ ಕುರಿತು ಚರ್ಚೆ ಆರಂಭವಾಗುತ್ತಿದ್ದಂತೆ ಸಭೆಯಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಯಿತು. ಡಾ. ಸಿದ್ದಲಿಂಗಪ್ಪ ಪಾಟೀಲ್ ಮತ್ತು ಭೀಮರಾವ್ ಪಾಟೀಲ್, ಡಾ. ಚಂದ್ರಶೇಖರ್ ಪಾಟೀಲ್ ಅವರು ತಮ್ಮ ಅಭಿಪ್ರಾಯ ಹೇಳಲು ಮುಂದಾದರು. ಎರಡೂ ಕಡೆಯವರು ತಾಳ್ಮೆ ಕಳೆದುಕೊಂಡು ಪರಸ್ಪರ ನಿಂದನೆಗಿಳಿದರು. ಆನಂತರ ಭೀಮರಾವ್ ಪಾಟೀಲ್ ಅವರು ಸಿದ್ದಲಿಂಗಪ್ಪ ಪಾಟೀಲ್ ಅವರ ಕಡೆಗೆ ಹೋಗಿ, ಜಗಳಕ್ಕಿಳಿದರು. ಬಳಿಕ ಕೈ ಕೈ ಮಿಲಾಯಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಸಚಿವರಾದ ಈಶ್ವರ ಬಿ. ಖಂಡ್ರೆ, ರಹೀಂ ಖಾನ್ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಎಷ್ಟೇ ಮನವಿ ಮಾಡಿದರೂ ಎರಡು ಕಡೆಯವರು ಸುಮ್ಮನಾಗಲಿಲ್ಲ. ಆನಂತರ ವೇದಿಕೆಯಿಂದ ಕೆಳಗಿಳಿದು, ಹೆಚ್ಚಿನ ಪೊಲೀಸರು ಬಂದು, ವಾತಾವರಣ ತಿಳಿಗೊಳಿಸಿದರು.

ಹೀಗೆ ಶಾಂತಿಯುತವಾಗಿ ನಡೆಯುತ್ತಿದ್ದ ಸಭೆ ರಣರಂಗವಾಗಿ ಮಾರ್ಪಟ್ಟಿತ್ತು. ಹೆಚ್ಚುವರಿ ಎಸ್ಪಿ ಚಂದ್ರಕಾಂತ ಪೂಜಾರಿ ಅವರು ಜಗಳ ಬಿಡಿಸಲು ತೀವ್ರ ಹರಸಾಹಸ ಪಟ್ಟರು. ಜಿಲ್ಲಾಮಟ್ಟದ ಅಧಿಕಾರಿಗಳು ಅಸಹಾಯಕರಾಗಿ ನೋಡಿದರು. ಕೆಳಹಂತದ ಸಿಬ್ಬಂದಿ ಮೌನವಾಗಿದ್ದರು.

ಘಟನೆಯ ವಿಷಯ ಎಲ್ಲೆಡೆ ಹರಡುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಶಾಸಕರ ವರ್ತನೆಗೆ ಟೀಕೆ ವ್ಯಕ್ತವಾಯಿತು. ‘ಜನಸಾಮಾನ್ಯರು ಈ ರೀತಿ ಮಾಡಿದ್ದರೆ ಸುಮ್ಮನೆ ಬಿಡುತ್ತಿದ್ದರೆ. ಎಂಎಲ್ಎಗಳಾದರೆ ಏನು ಬೇಕಾದರು ಮಾಡಬಹುದೇ?’ ಎಂಬ ಧಾಟಿಯಲ್ಲಿ ಸಾಮಾಜಿಕ ಜಾಲತಾಣಗಳು, ಜನರ ನಡುವೆ ದಿನವಿಡೀ ಚರ್ಚೆಗಳು ನಡೆದವು.

ಜಗಳವಾಡಲು ಬಿಟ್ಟು ಮಜಾ’ ಬೀದರ್: ‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಇಬ್ಬರು ಶಾಸಕರಿಗೆ ಜಗಳವಾಡಲು ಬಿಟ್ಟು ಮಜಾ ತೆಗೆದುಕೊಂಡಿದ್ದಾರೆ. ಸಭೆಯನ್ನು ಮುಂದೂಡಿ ಅವರೇನು ಸಾಧಿಸಿದ್ದಾರೆ’ ಎಂದು ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಪ್ರಶ್ನಿಸಿದ್ದಾರೆ. ನಾನು ಸಚಿವನಾಗಿ ದೇಶದಾದ್ಯಂತ ನೂರಾರು ಸಭೆಗಳನ್ನು ನಡೆಸಿದ್ದೇನೆ. ಅನೇಕ ರಾಜಕೀಯ ಬದ್ಧ ವೈರಿಗಳಿದ್ದರು. ಸಭೆಗೆ ಚ್ಯುತಿ ಬರಗೊಟ್ಟಿರಲಿಲ್ಲ. ಆದರೆ ಖಂಡ್ರೆಯವರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಜಗಳವಾಡಲು ಬಿಟ್ಟಿದ್ದಾರೆ. ಇದರ ಲಾಭ ಪಡೆದಿದ್ದಾರೆ. ಅವರು ಸಭೆ ನಿರ್ವಹಿಸಿದ ರೀತಿ ಖಂಡನಾರ್ಹ. ಅದರ ಜವಾಬ್ದಾರಿ ಹೊತ್ತುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಶಾಸಕರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ ಬೀದರ್: ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿಕೊಂಡು ಅಸಭ್ಯವಾಗಿ ವರ್ತಿಸಿದ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶ್ವಕ್ರಾಂತಿ ದಿವ್ಯ ಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಸಾಮಾಜಿಕ ಕಾರ್ಯಕರ್ತ ಜಗದೀಶ್ವರ ಬಿರಾದಾರ ಆಗ್ರಹಿಸಿದ್ದಾರೆ. ಈ ಸಂಬಂಧ ಅವರು ಎಸ್ಪಿಗೆ ದೂರು ಕೊಟ್ಟಿದ್ದಾರೆ. ಶಾಸಕರ ವರ್ತನೆಯಿಂದ ಸಭೆಯ ಗೌರವ ಹಾಳಾಗಿದೆ. ಸಾರ್ವಜನಿಕ ಸೇವಾ ವ್ಯವಸ್ಥೆಗೆ ಕೆಟ್ಟ ಮಾದರಿ ನಿರ್ಮಾಣವಾಗಿದೆ. ಕಾನೂನಿನ ಅಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಹುಮನಾಬಾದ್ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಬೀದರ್: ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸೋಮವಾರದಿಂದ (ಜ.5) ಜಾರಿಗೆ ಬರುವಂತೆ ಮುಂದಿನ ಆದೇಶದ ವರೆಗೆ ಹುಮನಾಬಾದ್ ಪಟ್ಟಣದಲ್ಲಿ ಭಾರತೀಯ ನಾಗರೀಕ ಸಂಹಿತೆ–2023ರ ಕಲಂ 163(1) ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಅಂಜುಮ್ ತಬಸ್ಸುಮ್ ಆದೇಶ ಹೊರಡಿಸಿದ್ದಾರೆ. ಬೀದರ್ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಹಾಗೂ ಎಂ.ಎಲ್.ಸಿ. ಭೀಮರಾವ್ ಪಾಟೀಲ್ ಅವರು ಪರಸ್ಪರ ನಿಂದಿಸಿಕೊಂಡು ಜಗಳವಾಡಿದ್ದಾರೆ. ಇಬ್ಬರು ಹುಮನಾಬಾದ್ ಮತಕ್ಷೇತ್ರದವರು. ಇಬ್ಬರು ಪಟ್ಟಣದಲ್ಲಿ ಮನೆ ಹೊಂದಿದ್ದಾರೆ. ವಿಷಯ ತಿಳಿದ ನಂತರ ಹುಮನಾಬಾದಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ತಹಶೀಲ್ದಾರ್ ನಿಷೇಧಾಜ್ಞೆ ಜಾರಿಗೊಳಿಸಿದ್ಧಾರೆ. ಪಟ್ಟಣದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಐದಕ್ಕಿಂತ ಹೆಚ್ಚು ಜನ ಗುಂಪು ಗುಂಪಾಗಿ ತಿರುಗಾಡುವುದು ಆಯುಧಗಳನ್ನು ಹಿಡಿದುಕೊಂಡು ಓಡಾಡುವುದು ಯಾವುದೇ ಪಕ್ಷ ಅಥವಾ ವ್ಯಕ್ತಿಯ ಪರ ಘೋಷಣೆ ಹಾಕುವುದು ಪ್ರಚೋದನಕಾರಿ ಭಾಷಣ ಮಾಡುವುದು ಗುಂಪುಗೂಡಿ ರಾಜಕೀಯ ವಿಚಾರಗಳನ್ನು ಚರ್ಚಿಸುವುದರ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ಧಾರೆ.

ಪೊಲೀಸ್ ಸರ್ಪಗಾವಲು ಹದ್ದಿನ ಕಣ್ಣು ಪೊಲೀಸರು ತುರ್ತು ಕ್ರಮಗಳನ್ನು ಕೈಗೊಂಡಿದ್ದರಿಂದ ಯಾವುದೇ ರೀತಿಯ ಅಹಿತಕರ ಘಟನೆ ನಡೆಯಲಿಲ್ಲ. ಶಾಸಕರಿಬ್ಬರು ಜಗಳವಾಡಿದ ವಿಷಯ ಎಲ್ಲೆಡೆ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಹುಮನಾಬಾದ್ ಪಟ್ಟಣಕ್ಕೆ ತೆರಳಿ ಪೊಲೀಸ್ ಸರ್ಪಗಾವಲು ಹಾಕಿದರು. ಶಾಸಕರ ಬೆಂಬಲಿಗರು ಗುಂಪು ಗೂಡದಂತೆ ಕ್ರಮ ಕೈಗೊಂಡರು. ಯಾವುದೇ ರೀತಿಯ ಸಭೆ ಚರ್ಚೆಗೂ ಅವಕಾಶ ಕಲ್ಪಿಸಲಿಲ್ಲ. ತತಕ್ಷಣದ ಕ್ರಮ ಕೈಗೊಂಡಿದ್ದರಿಂದ ಹುಮನಾಬಾದ್ನಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಆದರೆ ಘಟನೆಯಿಂದ ಹುಮನಾಬಾದ್ ಸ್ತಬ್ಧಗೊಂಡಿತ್ತು. ಇಡೀ ದಿನ ಪೊಲೀಸರು ಎಲ್ಲೆಡೆ ಗಸ್ತು ತಿರುಗಿ ಹದ್ದಿನ ಕಣ್ಣು ಇಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.