ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿ: ವಚನ ಜಾತ್ರೆ; ಪ್ರಶಸ್ತಿ ಪುರಸ್ಕೃತರ ಘೋಷಣೆ

Last Updated 18 ಏಪ್ರಿಲ್ 2022, 6:32 IST
ಅಕ್ಷರ ಗಾತ್ರ

ಭಾಲ್ಕಿ: ಹಿರೇಮಠ ಸಂಸ್ಥಾನ ವತಿಯಿಂದ ನಡೆಯುವ ವಚನ ಜಾತ್ರೆ ಹಾಗೂ ಡಾ.ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವದ ವೇಳೆ ನೀಡಲಾಗುವ ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾದ ಸಾಧಕರ ಹೆಸರು ಪ್ರಕಟಿಸಲಾಗಿದೆ.

‘ಸಿದ್ಧರಾಮ ಜಂಬಲದಿನ್ನಿ ಸಂಗೀತ ಪ್ರಶಸ್ತಿ’ಗೆ ಭಾಲ್ಕಿಯ ಕೇಶವರಾವ್‌ ಸೂರ್ಯವಂಶಿ (2020), ಧಾರವಾಡದ ಡಾ.ನಂದಾ ಪಾಟೀಲ (2021), ಬೀದರ್‌ನಶಿವಕುಮಾರ ಪಾಂಚಾಳ (2022 ), ‘ಚನ್ನಬಸವ ಪಟ್ಟದ್ದೇವರು ಯುವ ಪ್ರಶಸ್ತಿ‘ಗೆ ಯಾದಗಿರಿಯ ರಜನಿಕಾಂತ ಚವ್ಹಾಣ (2020), ಬೆಳಗಾವಿಯ ಸಾಹಿತಿ ಪ್ರಕಾಶ ಗಿರಿಮಲ್ಲ (2021), ಬೀದರ್‌ನ ಸಾಹಿತಿಸಂಗಮೇಶ ಜವಾದಿ (2022), ‘ಚನ್ನಬಸವ ಪಟ್ಟದ್ದೇವರ ಮಕ್ಕಳ ಸಾಹಿತ್ಯ ಪ್ರಶಸ್ತಿ’ಗೆ ಹುಮನಾಬಾದ್‌ನಶೋಭಾ ಔರಾದೆ (2020), ಬೆಳಗಾವಿಯಎಂ.ಎಂ.ಸಂಗಣ್ಣನ (2021), ಬಾಗಲಕೋಟೆಯಸೋಮಲಿಂಗ ಬೇಡರ್ (2022), ‘ನಾಡೋಜ ಡಾ.ಜಿ.ಎಸ್.ಖಂಡೇರಾವ್‌ ಚಿತ್ರಕಲಾ ಪ್ರಶಸ್ತಿ’ಗೆ ಕಲಬುರಗಿಯ ಕಿಶನರಾವ್‌ ಸದಾನಂದರಾವ್‌ ಸರೋದೆ (2020), ಎ.ಎಸ್.ಪಾಟೀಲ (2021) ಮತ್ತು ಮನಯ್ಯಾ ಎಂ. ಬಡಿಗೇರ (2022), ‘ಡಾ.ಜಿ.ಬಿ.ವಿಸಾಜಿ ಸಾಹಿತ್ಯ ಪ್ರಶಸ್ತಿ’ಗೆ ಭಾಲ್ಕಿಯ ಸಾಹಿತಿ ಡಾ.ಸೋಮನಾಥ ನುಚ್ಚಾ 2020), ಡಾ.ವೈಜಿನಾಥ ಭಂಡೆ (2021), ಪ್ರೊ.ಚಂದ್ರ ಶೇಖರ ಬಿರಾದಾರ (2022) ಆಯ್ಕೆಯಾದರು.

ಕೋವಿಡ್‌ ಹಿನ್ನೆಲೆಯಲ್ಲಿ 2020 ರಿಂದ ಪ್ರಶಸ್ತಿಗಳನ್ನು ನೀಡಿಲ್ಲ. 2020ರಿಂದ 2022ರವರೆಗಿನ ಎಲ್ಲ ಪ್ರಶಸ್ತಿಗಳಿಗೆ ಆಯ್ಕೆಯಾದ ಸಾಧಕರಿಗೆ ಏ.21, 22ರಂದು ನಡೆಯುವ ವಚನ ಜಾತ್ರೆ ಹಾಗೂ ಸ್ಮರಣೋತ್ಸವ ಸಮಾ ರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾ ಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT