ಬೀದರ್: ‘ಸೌಹಾರ್ದ ಸಹಕಾರಿ ಸಂಘ ಕಡಿಮೆ ಬಡ್ಡಿ ದರದಲ್ಲಿ ಬಡವರಿಗೆ ಸಾಲ ನೀಡಿ ಅವರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತಿವೆ. ಆದ್ದರಿಂದ ಸಹಕಾರಿ ಸಂಘಗಳು ಬಡವರ ಪಾಲಿಗೆ ಆಶಾ ಕಿರಣಗಳಾಗಿವೆ’ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಗುರುನಾಥ ಜಾಂತಿಕರ್ ಅಭಿಪ್ರಾಯ ಪಟ್ಟರು.

ನಗರದಲ್ಲಿ ಭಾನುವಾರ ಬೀದರ್ ಪ್ರಗತಿ ಸೌಹಾರ್ದ ಸಹಕಾರಿಯ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

‘ಸಹಕಾರಿಯಲ್ಲಿ ಸಾಲ ಪಡೆದ ಸದಸ್ಯರು ಮುಂದಿನ ದಿನಗಳಲ್ಲಿ ಠೇವಣಿದಾರರಾಗಿ ಮಾರ್ಪಾಡಾಗುವಂತೆ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸಬೇಕು. ಸಹಕಾರಿಯಲ್ಲಿ ಸಾಲ ಪಡೆದ ಸಾಲಗಾರರು ಸಮಯಕ್ಕೆ ಸರಿಯಾಗಿ ಕಂತುಗಳನ್ನು ಪಾವತಿಸಿ ಸಹಕಾರಿಯ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ತಿಳಿಸಿದರು.

ಭಾರತ ಪತ್ತಿನ ಸೌಹಾರ್ದ ಸಹಕಾರಿಯ ಅಧ್ಯಕ್ಷ ನಂದಾ ವಿವೇ ಕಾನಂದ ಮಾತನಾಡಿ,‘ ಸಹಕಾರಿಗಳು ಕೇವಲ ಲಾಭದ ದೃಷ್ಟಿಯಿಂದ ಕಾರ್ಯ ನಿರ್ವಹಿಸದೆ ಸಂಘದ ಸದಸ್ಯರು ಅಭಿವೃದ್ಧಿ ಹೊಂದುವಂತೆ ಕಾರ್ಯನಿರ್ವಹಿಸಬೇಕು’ ಎಂದು ಹೇಳಿದರು. ಜಿಲ್ಲಾ ಸೌಹಾರ್ದ ಸಹಕಾರಿಯ ನಿರ್ದೇಶಕ ರಾಜಶೇಖರ ನಾಗ ಮೂರ್ತಿ,ಮುಖಂಡ ಇರ್ಷಾದ್ ಅಲೀ ಪೈಲ್ವಾನ್, ಮೈನೊದ್ದಿನ್, ಜೈವಂತ, ಮಹಮ್ಮದ್ ಸೈಫೋದ್ದಿನ್, ಜಿಲ್ಲಾ ಸೌಹಾರ್ದ ಸಹಕಾರಿಯ ಸಂಯೋಜಕ ವೀರಶೆಟ್ಟಿ ಕಾಮಣ್ಣ, ಮುಖ್ಯ ಕಾರ್ಯನಿರ್ವಾಹಕ ಅಮೃತ ಹೊಸಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.