ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲನಗರ | ಶಾಲಾ ಅಭಿವೃದ್ಧಿಗೆ ಸಹಕಾರ: ಗ್ರಾಮಸ್ಥರಿಂದಲೇ ಅತಿಥಿ ಶಿಕ್ಷಕರ ವೇತನ!

Published 29 ಆಗಸ್ಟ್ 2023, 7:54 IST
Last Updated 29 ಆಗಸ್ಟ್ 2023, 7:54 IST
ಅಕ್ಷರ ಗಾತ್ರ

ಗಣಪತಿ ಕುರನ್ನಳೆ

ಕಮಲನಗರ (ಬೀದರ್ ಜಿಲ್ಲೆ): ತಾಲ್ಲೂಕಿನ ಹಾಲಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶಾಲೆಗೆ ಪೀಠೋಪಕರಣ ಸೇರಿದಂತೆ ಅನೇಕ ಸಾಮಗ್ರಿಗಳನ್ನು ನೀಡಿದ್ದು, ಅತಿಥಿ ಶಿಕ್ಷಕರ ವೇತನವನ್ನೂ ಭರಿಸುತ್ತಿದ್ದಾರೆ.

‘ಗ್ರಾಮದ 30 ಮಕ್ಕಳನ್ನು ಪೋಷಕರು ಖಾಸಗಿ ಶಾಲೆಯಿಂದ ಹಾಲಹಳ್ಳಿ ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ. ಶಾಲೆಗೆ ಮೂವರು ಅತಿಥಿ ಶಿಕ್ಷರನ್ನು ಗ್ರಾಮಸ್ಥರೇ ನೇಮಿಸಿ ಅವರಿಗೆ ಗೌರವಧನ ನೀಡುತ್ತಿದ್ದಾರೆ. ಗ್ರಾಮದ ನಿವೃತ್ತ ಶಿಕ್ಷಕ ಶಿವಾಜಿ ಅವರು ಡಾ. ಶಿವಾಜಿರಾವ್‌ ಹೆಸರಿನಲ್ಲಿ ಅತಿಥಿ ಶಿಕ್ಷಕರಿಗೆ ಸಂಬಳ ನೀಡಲು ಪ್ರತಿ ತಿಂಗಳು ₹ 1000 ಮತ್ತು ಶಾಲೆಯ ಕ್ರೀಡಾಪಟುಗಳಿಗೆ ಸಮವಸ್ತ್ರ ಖರೀದಿಸಲು ₹ 10 ಸಾವಿರ ನೀಡಿದ್ದಾರೆ’ ಎಂದು ಮುಖ್ಯ ಶಿಕ್ಷಕ ಶಿರಾಜೋದ್ದಿನ್ ಹೇಳುತ್ತಾರೆ.

‘ಶಾಮರಾವ್ ಬಿರಾದಾರ ಹಾಗೂ ಅವರ ಸಹೋದರರು ಪ್ರತಿ ತಿಂಗಳು ₹ 3000 ನೀಡುತ್ತಿದ್ದಾರೆ. ಪ್ರವೀಣ ತಾತ್ಯಾರಾವ್ ಅವರು ಶಾಲೆಗೆ 12 ಪ್ಲೇಟ್, 6 ಕುರ್ಚಿ ಹಾಗೂ ₹ 21 ಸಾವಿರ ನಗದು ನೀಡಿದ್ದಾರೆ. ಶಾಲೆಯ ಹಳೆ ವಿದ್ಯಾರ್ಥಿ ಬಾಲಾಜಿ ಕೋಂಡಿಬಾ ಬಿರಾದಾರ ಶಾಲೆಗೆ ಪ್ರೊಜೆಕ್ಟರ್‌, ಕಂಪ್ಯೂಟರ್‌ ನೀಡಿದ್ದಾರೆ. ಗಣೇಶ ಪಾಟೀಲ ಅವರು 120 ಮಕ್ಕಳಿಗೆ ಟೈ, ಬೆಲ್ಟ್, ಐಡಿ ಕಾರ್ಡ್ ಮಾಡಿಸಿ ಕೊಟ್ಟಿದ್ದಾರೆ. ಬಳಿರಾಮ 120 ಮಕ್ಕಳಿಗೆ ಪ್ರತಿ ಒಬ್ಬರಿಗೆ 10ರಂತೆ ನೋಟ್‌ಬುಕ್ಸ್ ನೀಡಿದ್ದಾರೆ. ಮೋಹನರಾವ್ ಅವರು 6 ಟೇಬಲ್, 120 ಮಕ್ಕಳಿಗೆ ಸ್ಕೂಲ್ ಬ್ಯಾಗ್‌, ಕಂಪಾಸ್ ಬಾಕ್ಸ್, ಪರೀಕ್ಷೆ ಬರೆಯಲು ಬಳಸುವ ಪ್ಯಾಡ್‌ಗಳನ್ನು ನೀಡಿರುತ್ತಾರೆ’ ಎಂದು ಅವರು ಮಾಹಿತಿ ನೀಡಿದರು.

‘ಗ್ರಾಮದ ದಾನಿಗಳು ಶಾಲಾಭಿವೃದ್ಧಿಗೆ ಸಹಾಯ ಮಾಡಿದ್ದರಿಂದ ನಮ್ಮ ಶಾಲೆಯ ಶಿಕ್ಷಕರು ಕೂಡ ತಲಾ ₹ 2 ಸಾವಿರ ನೀಡಿ ಶಾಲೆಯ ಕಿಟಕಿ, ಬಾಗಿಲುಗಳನ್ನು ಸರಿಪಡಿಸಿದ್ದೇವೆ’ ಎಂದು ಶಿರಾಜೋದ್ದಿನ್ ಅವರು ಖುಷಿಯಿಂದ ಹೇಳಿದರು.

‘ಹಾಲಹಳ್ಳಿ ಗ್ರಾಮಸ್ಥರು ಗ್ರಾಮದ ಹಿರಿಯರಾದ ಸುಭಾಸ ಪಾಟೀಲ ಅವರ ಹತ್ತಿರ ಹಣ ಇಟ್ಟು, ಪ್ರತಿ ತಿಂಗಳು ಅತಿಥಿ ಶಿಕ್ಷಕರಿಗೆ ವೇತನವನ್ನು ನೀಡಲು ಬಳಸುತ್ತಾರೆ’ ಎನ್ನುತ್ತಾರೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ (ಸಿಆರ್‌ಸಿ) ಶಿವಕುಮಾರ್ ಮೇತ್ರೆ.

ಬೀದರ್ ಜಿಲ್ಲೆ ಕಮಲನಗರ ತಾಲ್ಲೂಕಿನ ಹಾಲಹಳ್ಳಿ ಸರ್ಕಾರಿ ಶಾಲೆಯ ನೂತನ ಕಟ್ಟಡ
ಬೀದರ್ ಜಿಲ್ಲೆ ಕಮಲನಗರ ತಾಲ್ಲೂಕಿನ ಹಾಲಹಳ್ಳಿ ಸರ್ಕಾರಿ ಶಾಲೆಯ ನೂತನ ಕಟ್ಟಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT