ಬೀದರ್: ನಗರದ ನ್ಯಾಯಾಂಗ ವಸತಿ ಗೃಹದಲ್ಲಿರುವ ಎರಡನೇ ಹೆಚ್ಚುವರಿ ಸಿವಿಲ್ ಹಾಗೂ ಎರಡನೇ ಜೆಎಂಎಫ್ ಸಿ ಜಿಲ್ಲಾ ನ್ಯಾಯಾಧೀಶ ಎಂ.ಡಿ. ಶಾಯಿಜ್ ಅವರ ಮನೆಯಲ್ಲಿ ಕಳ್ಳತನವಾಗಿದ್ದು, ₹8 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
.ಬೀದರ್ | ಪ್ರೇಮ ಪ್ರಕರಣ: ಯುವತಿ ಸಹೋದರರಿಂದ ಯುವಕನ ಕೊಲೆ .
ಈದ್ ಉಲ್ ಫಿತ್ರ್ ಅಂಗವಾಗಿ ನ್ಯಾಯಾಧೀಶರು ಮಾರ್ಚ್ 29 ರಂದು ಅವರ ಸ್ವಗ್ರಾಮ ಕೊಪ್ಪಳಕ್ಕೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದು ಖಾತ್ರಿಪಡಿಸಿಕೊಂಡ ಕಳ್ಳರು ಬಾಗಿಲು ಮುರಿದು, ಬಿರುವಿನಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಏಪ್ರಿಲ್ 1ರಂದು ಮನೆಯ ಕೆಲಸದಾಕೆ ಸಸಿಗಳಿಗೆ ನೀರು ಬಿಡಲು ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರು ಕಳ್ಳರು ಮನೆಯ ಹಿಂಭಾಗದಿಂದ ಬಂದು ಕೃತ್ಯ ಎಸಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನ್ಯಾಯಾಧೀಶರ ದೂರು ಆಧರಿಸಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.ಬೀದರ್ | ಪಂಚಾಚಾರ್ಯ ಪುಣ್ಯಾಶ್ರಮದ ವಿಕಾಸಕ್ಕೆ ಕೈಜೋಡಿಸಿ: ರಂಭಾಪುರಿ ಶ್ರೀ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.