ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್- ಮುಂಬೈ ರೈಲು ಪುನರಾರಂಭ: ಸಂಸದ ಭಗವಂತ ಖೂಬಾ

Last Updated 2 ಜುಲೈ 2021, 14:14 IST
ಅಕ್ಷರ ಗಾತ್ರ

ಬೀದರ್: ಕೋವಿಡ್ ಕಾರಣ ಸ್ಥಗಿತಗೊಳಿಸಲಾಗಿದ್ದ ವಾರದಲ್ಲಿ ಮೂರು ದಿನ ಸಂಚರಿಸುವ ಬೀದರ್-ಮುಂಬೈ ರೈಲು ಸೇವೆ ಪುಃನರಾರಂಭಗೊಂಡಿದೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.

ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಕ್ಷೇತ್ರದ ಜನರಿಗೆ ಅನಾನುಕೂಲವಾಗಿತ್ತು. ಕಾರಣ, ಮುಂಬೈನಲ್ಲಿ ಮಧ್ಯ ರೈಲ್ವೆ ಮುಖ್ಯ ವ್ಯವಸ್ಥಾಪಕರನ್ನು ಭೇಟಿ ಮಾಡಿ, ರೈಲು ಸಂಚಾರ ಪುಃನರಾರಂಭಿಸಲು ಮನವಿ ಮಾಡಿದ್ದೆ. ಅದರ ಫಲಶ್ರುತಿಯಿಂದಾಗಿ ರೈಲು ಸಂಚಾರ ಶುರು ಮಾಡಲಾಗಿದೆ ಎಂದು ಹೇಳಿದ್ದಾರೆ.

02043 ಸಂಖ್ಯೆಯ ರೈಲು ಬುಧವಾರ, ಶುಕ್ರವಾರ ಮತ್ತು ಶನಿವಾರ ರಾತ್ರಿ 9ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್‍ನಿಂದ ಹೊರಟು ಥಾಣೆ, ಕಲ್ಯಾಣ ಜಂಕ್ಷನ್, ಪುಣೆ, ದೌಂಡ್, ಬಾರ್ಸಿ ಟೌನ್, ಉಸ್ಮಾನಾಬಾದ್, ಲಾತೂರ್‌, ಲಾತೂರ್ ರಸ್ತೆ, ಉದಗಿರ್, ಭಾಲ್ಕಿ ಮಾರ್ಗವಾಗಿ ಮರುದಿನ ಬೆಳಿಗ್ಗೆ 9.10ಕ್ಕೆ ಬೀದರ್‌ಗೆ ಬರಲಿದೆ ಎಂದು ಹೇಳಿದ್ದಾರೆ.

02044 ಸಂಖ್ಯೆಯ ರೈಲು ಗುರುವಾರ, ಶನಿವಾರ ಹಾಗೂ ಭಾನುವಾರ ರಾತ್ರಿ 7.50ಕ್ಕೆ ಬೀದರ್‌ದಿಂದ ಹೊರಟು ಮರುದಿನ ಬೆಳಿಗ್ಗೆ 7.55ಕ್ಕೆ ಮುಂಬೈ ತಲುಪಲಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಜನ ರೈಲಿನ ಸುದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT