ಬೀದರ್: ಕರ್ನಾಟಕ ವಚನ ಸಾಹಿತ್ಯ ಪರಿಷತ್ ವತಿಯಿಂದ ನಗರದ ಮಾಧವ ನಗರದಲ್ಲಿರುವ ಅಕ್ಕಮಹಾದೇವಿ ಮಂಟಪದಲ್ಲಿ ಭಾನುವಾರ ಮಾಸಿಕ ಶರಣ ಚಿಂತನ ಗೋಷ್ಠಿ ಕಾರ್ಯಕ್ರಮ ನಡೆಯಿತು. ಅಕ್ಕಮಹಾದೇವಿಯವರ ಜೀವನ ಕುರಿತು ವಿಶೇಷ ಉಪನ್ಯಾಸ ಹಾಗೂ ‘ಕನ್ನಡದ ನಂದಾದೀಪ’ ಕೃತಿ ವಿಮರ್ಶೆ ಜರುಗಿತು.

ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೋ. ಸಿದ್ರಾಮಪ್ಪಾ ಮಾಸಿಮಾಡೆ ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ‘ಅಕ್ಕಮಹಾದೇವಿಯವರ ವಚನಗಳು ವಿಶ್ವಕ್ಕೆ ಶ್ರೇಷ್ಠ ಸಂದೇಶಗಳನ್ನು ನೀಡಿದ್ದು, ಅವರ ಮೇರು ವ್ಯಕ್ತಿತ್ವ ಸ್ತ್ರೀಕುಲಕ್ಕೆ ಆದರ್ಶವಾಗಿದೆ’ ಎಂದರು.

‘12ನೇ ಶತಮಾನದಲ್ಲಿ ಬಸವಾದಿ ಶರಣರು ನೀಡಿದ ವೈಚಾರಿಕ ಮತ್ತು ಆಧ್ಯಾತ್ಮಿಕ ತತ್ವಗಳನ್ನು 20ನೇ ಶತಮಾನದಲ್ಲಿ ಚನ್ನಬಸವ ಪಟ್ಟದೇವರು ಅಕ್ಷರ, ಕಾಯಕ ಮತ್ತು ದಾಸೋಹ ಸೇವೆಗಳ ಮೂಲಕ ಸಮಾಜಕ್ಕೆ ತಲುಪಿಸಿದ್ದಾರೆ’ ಎಂದು ಹೇಳಿದರು.

ಸಾಹಿತಿ ಜೈಶ್ರೀ ಸುಕಾಲೆ ಅಕ್ಕಮಹಾದೇವಿಯವರ ಜೀವನ ಕುರಿತು ವಿಶೇಷ ಉಪನ್ಯಾಸ ನೀಡಿ, ‘ಅಕ್ಕನ ವಚನಗಳು ಮಾನವ ಬದುಕಿಗೆ ಉತ್ತಮ ಮಾರ್ಗದರ್ಶಿಯಾಗಿವೆ. ಲಿಂಗಾಂಗ ಸಾಮರಸ್ಯದ ಮೂಲಕ ಅಕ್ಕಮಹಾದೇವಿ ಆಧ್ಯಾತ್ಮಿಕ ಉತ್ತುಂಗವನ್ನು ತಲುಪಿದ್ದಾರೆ’ ಎಂದು ವಿವರಿಸಿದರು.

‘ಕನ್ನಡದ ನಂದಾದೀಪ’ ಕೃತಿಯ ದಾಸೋಹಿ ಡಾ.ಗುರಮ್ಮಾ ಸಿದ್ಧಾರೆಡ್ಡಿ ಮಾತನಾಡಿ, ‘ಮಕ್ಕಳಲ್ಲಿ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ವಚನ ಸಾಹಿತ್ಯ ಅಧ್ಯಯನ ಅಗತ್ಯವಿದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಹಾಗೂ ಕೃತಿಯ ಸಂಪಾದಕಿ ಸುನೀತಾ ದಾಡಗೆ ಮಾತನಾಡಿ, ‘ತಾಳ್ಮೆ, ಸಹನೆ ಮತ್ತು ಹೊಂದಾಣಿಕೆಯಿಂದ ಬದುಕು ಸಾಗಿಸಿದರೆ ಜೀವನ ಹೂವಿನಂತೆ ಸುಂದರವಾಗುತ್ತದೆ’ ಎಂದರು.

ಭಕ್ತಿ ಶಿವಲಿಂಗ ಹೆಡೆ ವಚನ ನೃತ್ಯ, ವರ್ಷಾರಾಣಿ ಶ್ರೀನಿವಾಸ ಬಿರಾದಾರ ವಚನ ಗಾಯನ ನಡೆಸಿದರು. ಈ ಸಂದರ್ಭದಲ್ಲಿ ಅಕ್ಕಮಹಾದೇವಿ ಚಲನಚಿತ್ರದ ನಿರ್ದೇಶಕ-ನಿರ್ಮಾಪಕ ಬಿ.ಜೆ. ವಿಷ್ಣುಕಾಂತ ಹಾಗೂ ನಟಿ ಸುಲಕ್ಷಾ ಕೈರಾ ಅವರನ್ನು ಸನ್ಮಾನಿಸಲಾಯಿತು.

ಕವಿಗಳಾದ ಧನಲಕ್ಷ್ಮೀ ಪಾಟೀಲ, ವಜ್ರಾ ಪಾಟೀಲ, ವಿದ್ಯಾವತಿ ಹೀರೆಮಠ, ಸೂರ್ಯಕಲಾ ಎಸ್. ಹೊಡಮನಿ, ಮಹೇಶ್ವರಿ ಶಿವಲಿಂಗ ಹೆಡೆ, ಸುಲೇಖಾ ಹುಲಸೂರು, ಶಿವರಾಜ ಮಾದಪ್ಪಾ ಮಿತ್ರ, ಓಂಕಾರ ಪಾಟೀಲ, ಬಾಪು ಮಡಕಿ, ಗಣಪತಿ ಭೂರೆ, ಪ್ರೊ. ಉಮಾಕಾಂತ .ಕೆ. ಮೀಸೆ, ಡಾ. ರಘುಶಂಖ ಭಾತಂಬ್ರಾ, ರಮೇಶ ಬರ್ಮಾ, ಶಿವಲಿಂಗ ಹೆಡೆ, ಶ್ರೀಧರ ಅವರನ್ನು ಸನ್ಮಾನಿಸಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಕಲ್ಯಾಣರಾವ ಚಳಕಾಪೂರೆ, ಶೈಲಜಾ ಚಳಕಾಪೂರೆ, ಪ್ರೊ. ಬಾಬುರಾವ ಪಸರ್ಗೆ, ಶ್ರೀಕಾಂತ ಬಿರಾದಾರ, ಎಸ್.ಎಸ್. ಹೊಡಮನಿ ಹಾಗೂ ಶರಣ-ಶರಣಿಯರು ಭಾಗವಹಿಸಿದ್ದರು. ಶಿವಲಿಂಗಪ್ಪಾ ಜಲಾದೆ ಸ್ವಾಗತಿಸಿದರು. ಬಸವರಾಜ ಮೂಲಗೆ ನಿರೂಪಿಸಿದರು. ಲತಾ ವೀರಶೆಟ್ಟೆ ವಂದಿಸಿದರು. ನಿವೃತ್ತ ಯೋಜನಾಧಿಕಾರಿ ವಿಶ್ವನಾಥ ಬಿರಾದಾರ ಪ್ರಸಾದ ದಾಸೋಹ ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.